Chitradurga News| Nammajana.com|April-19-4-2024
ನಮ್ಮ ಜನ.ಕಾಂ. ಚಿತ್ರದುರ್ಗ:ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಇದೇ ಏಪ್ರಿಲ್ 20ರಂದು ಮತಗಟ್ಟೆ ಸಿಬ್ಬಂದಿಗೆ ಎರಡನೇ ಹಂತದ ಚುನಾವಣೆ ತರಬೇತಿ ಆಯೋಜಿಸಲಾಗಿದೆ. ಈ ತರಬೇತಿಗೆ ಒಂದು ತಾಲ್ಲೂಕು ಕೇಂದ್ರದಿಂದ, ಇನ್ನೊಂದು ತಾಲ್ಲೂಕು ಕೇಂದ್ರಕ್ಕೆ ತೆರಳುವ ಮತಗಟ್ಟೆ ಸಿಬ್ಬಂದಿಗೆ 71 ಕೆ.ಎಸ್.ಆರ್.ಟಿ.ಸಿ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಎದುರಿನ ಹಳೇ ಮಾಧ್ಯಮಿಕ ಶಾಲಾ ಆವರಣ, ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯಲ್ಲಿನ ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣ, ಹಿರಿಯೂರು ನಗರ ಹಾಗೂ ಹೊಳಲ್ಕೆರೆ ಪಟ್ಟಣದ ತಾಲ್ಲೂಕು ಕಚೇರಿ ಆವರಣ, ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಹೊಸದುರ್ಗ ಪಟ್ಟಣದ ಶ್ರೀಮತಿ ತಾಯಮ್ಮ ಎಡೆತೊರೆ ಸಿದ್ದಿವಾಲ್ ಲಿಂಗಯ್ಯ ಪದವಿ ಪೂರ್ವ ಕಾಲೇಜು ಆವರಣದಿಂದ ತರಬೇತಿಗೆ ವಾಹನಗಳು ಮುಂಜಾನೆ 6 ಗಂಟೆಯಿಂದಲೇ ಹೊರಡಲಿವೆ. ತರಬೇತಿ ಪ್ರಕ್ರಿಯೆ ಮುಗಿದ ನಂತರ ಮರಳಿ ಸ್ವ ಸ್ಥಾನಕ್ಕೆ ವಾಪಸ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
ತರಬೇತಿಗೆ ಹೊರಡುವ ಬಸ್‍ಗಳ ಮಾರ್ಗ ಹಾಗೂ ನಾಮಫಲಕಗಳ ನಿರ್ವಹಣೆಗಾಗಿ ಚಿತ್ರದುರ್ಗ ತಾಲ್ಲೂಕಿಗೆ ಸಂಬಂಧಿಸಿದಂತೆ ಹಿರಿಯ ಮೋಟಾರು ವಾಹನ ನಿರೀಕ್ಷಕ ಪಿ.ಎಂ.ಶಾನುಬೋಗ್ (ಮೊ:9972594412) ಹಾಗೂ ವಾಹನ ನಿರೀಕ್ಷಕ ರಾಜೇಶ್ (ಮೊ:9980323230), ಹಿರಿಯೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಹಿರಿಯ ಮೋಟಾರು ವಾಹನ ನಿರೀಕ್ಷಕ ಮಹಂತೇಶ್ (ಮೊ:7483627424), ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಮೋಟಾರು ವಾಹನ ನಿರೀಕ್ಷಕ ಟಿ.ಎಂ.ಪ್ರಕಾಶ್ (ಮೊ:8217330331), ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಮೋಟಾರು ವಾಹನ ನಿರೀಕ್ಷಕ ಹೆಚ್.ಬಿ.ನದಾಫ್ (ಮೊ:9535554705) ಅವರನ್ನು ನೇಮಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್‍ಗಳ ನಿಯೋಜನೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಕರ್ತವ್ಯ ನಿರ್ವಹಿಸಲು ಚಿತ್ರದುರ್ಗ ವಿಭಾಗೀಯ ಸಂಚಲನಾಧಿಕಾರಿ ಜಿ.ಸುರೇಶ್ (ಮೊ:9606908962) ನಿಯೋಜಿಸಲಾಗಿದೆ.
READ ALSO:ನೇಹಾ ಕೊಲೆ| ಕಾಂಗ್ರೆಸ್ ನಾಯಕರು ಒಲೈಕೆ ನಿಲ್ಲಿಸಲಿ:ಆರ್.ಪಾಲಯ್ಯ ಅಕ್ರೋಶ
ತರಬೇತಿಗೆ ನಿಯೋಜಿಸಲಾದ ಎಲ್ಲಾ ಇಲಾಖೆಗಳ ಸಿಬ್ಬಂದಿ ತಪ್ಪದೇ ಸರಿಯಾದ ಸಮಯಕ್ಕೆ ಚುನಾವಣಾ ತರಬೇತಿ ಕಾರ್ಯಕ್ಕೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252