Chitradurga news|nammajana.com|10-12-2024
ನಮ್ಮಜನ.ಕಾಂ, ಹಿರಿಯೂರು: ಹಿರಿಯೂರು ತಾಲೂಕಿನ ಎಸಿಎಫ್ ಸುರೇಶ್ ಮನೆ ಮೇಲೆ ಲೋಕಾಯುಕ್ತ ದಾಳಿ (Lokayukta attack Hiriyur) ನಡೆಸಿದ್ದು ದಾಳಿ ವೇಳೆಯಲ್ಲಿ 1 ಕೆಜಿ ಚಿನ್ನಾಭರಣ, 3 ನಿವೇಶನಗಳು,9 ಎಕರೆ ಜಮೀನು ಸೇರಿದಂತೆ 5 ಲಕ್ಷ ನಗದು ಪತ್ತೆಯಾಗಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಭಾಗದ ಎಸಿಎಫ್ ಸುರೇಶ್ ಅವರ ಚಳ್ಳಕೆರೆ ನಗರದಲ್ಲಿರುವ ಎರಡು ಮನೆ ಮೇಲೆ ಲೋಕಾಯುಕ್ತರು ದಾಳಿ ಮಂಗಳವಾರ ದಾಳಿ ನಡೆಸಿದ್ದರು.(Lokayukta attack Hiriyur) ಆದಾಯ ಮೀರಿದ ಆಸ್ತಿ ಗಳಿಕೆಯ ಆರೋಪದ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು ಹಲವು ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಬೆಳ್ಳಂ ಬೆಳಿಗ್ಗೆಯೇ ಎಸಿಎಫ್ ಸುರೇಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಚಳ್ಳಕೆರೆಯಲ್ಲಿ ಎರಡು ಮನೆಗಳು, ಬೆಂಗಳೂರಿನಲ್ಲಿರುವ ಒಂದು ಮನೆ ಸೇರಿದಂತೆ ಸುರೇಶ್ ಗೆ ಸೇರಿದ ಒಟ್ಟು ಮೂರು ಮನೆಗಳ (Lokayukta attack Hiriyur) ಮೇಲೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸ್ವಂತ ಹಣದಿಂದ ಬಾಲ ಮಂದಿರದ ಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಿಸಿದ ಜಿ.ಪಂ ಸಿಇಒ | Zilla Panchayat CEO
ಲೋಕಾಯುಕ್ತ ಎಸ್ಪಿ ವಾಸುದೇವರಾವ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.