Chitradurga news|nammajana.com|10-12-2024
ನಮ್ಮಜನ.ಕಾಂ, ಚಳ್ಳಕೆರೆ: ಹಿರಿಯೂರು ಅರಣ್ಯ ಇಲಾಖೆ ಉಪ ವಿಭಾಗದ ಅರಣ್ಯ ಇಲಾಖೆ ACF ಸುರೇಶ್ ಅವರ ಹೆಚ್ಚುವರಿ ಆಸ್ತಿ ಗಳಿಕೆ ಹಿನ್ನೆಲೆ ಮನೆಗಳು ಸೇರಿ ನಾಲ್ಕು ಕಡೆಗಳಲ್ಲಿ (Lokyukta attack) ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಳ್ಳಕೆರೆ ನಗರದ ವಿಠಲನಗರದಲ್ಲಿ ವಾಸದ ಮನೆ ಹಾಗೂ ವಾಲ್ಮೀಕಿ ನಗರದ ಮನೆ, ಹಿರಿಯೂರು ಹಾಗೂ ಅವರ (Lokyukta attack) ತೋಟದ ಮನೆಯಲ್ಲಿ ಶೋಧ ಆರಂಭಿಸಿದ್ದಾರೆ.
ಹಿರಿಯೂರು ವಲಯದ ಜಿಲ್ಲಾ ಅರಣ್ಯ ಸಂರಕ್ಷಣಾ ಸಹಾಯಕಾಧಿಕಾರಿ ಸುರೇಶ್ ಆಸ್ತಿ ಗಳಿಕೆ ಹಿನ್ನೆಲೆ ಲೋಕಯುಕ್ತರು ದಾಳಿ ಮಾಡಿದ್ದಾರೆ ಎಂದು ತಿಳಿದಿದ್ದು ನಾಲ್ಕು ಕಡೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪರಿಶೀಲನೆ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ದಾಳಿಯಲ್ಲಿ ಇನ್ಸ್ಪೆಕ್ಟರ್ ಮಂಜುನಾಥ್, ಸರಳ, ಹಾಗೂ ಸಿಬ್ಬಂದಿ ಭಾಗವಹಿಸಿದ್ದು ಸುಮೋಟೋ ಅಡಿ ಪ್ರಕರಣ ದಾಖಲು (Lokyukta attack) ಮಾಡಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಡಕೆ ಧಾರಣೆ | 9-12-2024 | ಅಡಿಕೆ ರೇಟ್ ಭರ್ಜರಿ ಏರಿಕೆ | Adike Rate increase
ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಪರಿಶೀಲನೆ ನಡೆಯುತ್ತಿದೆ.