Chitradurga News | Nammajana.com | 01-10-2025
ನಮ್ಮಜನ ನ್ಯೂಸ್ ಕಾಂ,ಮೊಳಕಾಲ್ಮೂರು: ನಿಂತಿದ್ದ (Accident) ಲಾರಿಯ ಹಿಂಬದಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಬಿಜಿಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ.

ಮೃತ ಪಟ್ಟವರನ್ನು ವಿಜಯ ನಗರ ಜಿಲ್ಲೆಯ ಅರ್ಜುನ ಚಿನ್ನೇನ ಹಳ್ಳಿ ಗ್ರಾಮದ ಡಿ.ಕರಿಬಸಪ್ಪ (23) ದಾವಣಗೆರೆ ನಗರದ ಎ.ಡಿ.ಕುಮಾರಗೌಡ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸಿ | ZP CEO ಡಾ.ಆಕಾಶ್ ಸೂಚನೆ
ಇವರು ಬಳ್ಳಾರಿಯಿಂದ ಚಳ್ಳಕೆರೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿರುವಾಗ ಬಿಜಿಕೆರೆ ಹೊಸಕೆರೆ ಸಮೀಪದ ಹೆಚ್.ಪಿ.ಪೆಟ್ರೋಲ್ ಬಂಕ್ ಬಳಿಯಲ್ಲಿ ಭತ್ತ ತುಂಬಿ ನಿಂತಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಲಾರಿ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪಿಎಸ್‌ಐ ಮಹೇಶ್ ಹೊಸಪೇಟೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಮೊಳಕಾಲ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
