Chitradurga news |nammajana.com|29-12-2024
ನಮ್ಮಜನ ಸಮಾಚಾರ ಚಿತ್ರದುರ್ಗ: ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು (Madakari Cup) ಅಳವಡಿಸಿಕೊಂಡರೆ ಮಾತ್ರ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ದುರ್ಗಾ ಇಲೆವೆನ್ ಕ್ರಿಕೇಟರ್ಸ್ ಚಿತ್ರದುರ್ಗ ಇವರ ವತಿಯಿಂದ 3ನೇ ಬಾರಿಗೆ ಮದಕರಿ ಕಪ್- 2024 ಲೀಗ್ ಕಮ್ ನಾಕೌಟ್ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಹೊನಲು-ಬೆಳಕಿನ ಕ್ರಿಕೆಟ್ (Madakari Cup) ಟೂರ್ನಮೆಂಟನ್ನು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಿ ಮಾತನಾಡಿದರು.

ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಆಳ್ವಿಕೆ ನಡೆಸಿ ಸುಪ್ರಸಿದ್ದಿ ಪಡೆದ ಮದಕರಿನಾಯಕನ ಹೆಸರಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ (Madakari Cup) ನಡೆಸುತ್ತಿರುವದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ.
ರಾಜ್ಯದ ನಾನಾ ಭಾಗಗಳಿಂದ 40 ಕ್ಕೂ ಹೆಚ್ಚು ತಂಡ ಭಾಗವಹಿಸಿದ್ದು ಎಲ್ಲಾ ತಂಡಗಳಿಗೂ ಶುಭವಾಗಲಿ ಎಲ್ಲಾರೂ ಪ್ರೀತಿಯಿಂದ ಆಟವಾಡಬೇಕು ಮತ್ತು ಕ್ರಿಕೆಟ್ ಯುವಕಲ್ಲಿ ಹೆಚ್ಚು ಆಕರ್ಷಣೆ ಮಾಡಿದ ಕ್ರೀಡೆಯಾಗಿದೆ.
ಚಿತ್ರದುರ್ಗ ನಗರದಲ್ಲಿ ರಣಜಿ, ಟಿ20 ಕ್ರಿಕೆಟ್ ಯಾವುದೇ ಕಮ್ಮಿ ಇಲ್ಲದಂತೆ ಈ ಕ್ರೀಡಾಂಗಣದಲ್ಲಿ ಮೂರನೇ ಬಾರಿಯ ಟೆನಿಸ್ ಬಾಲ್ ಕ್ರಿಕೆಟ್ ನಡೆಯುತ್ತಿದ್ದು ಸಾವಿರಾರು ಅಭಿಮಾನಿಗಳು (Madakari Cup) ಕ್ರೀಡಾಂಗಣ ಸುತ್ತ ಕ್ರೀಡೆಯ ಸವಿಯನ್ನು ಸವಿಯುತ್ತಿರುವುದು ನೋಡಲು ಎರಡು ಕಣ್ಣು ಸಾಲುತ್ತಿಲ್ಲ ಎಂದರು.
ಕ್ರೀಡಾಪಟುಗಳು ದ್ವೇಷ, ಅಸೂಯೆಯಂತಹ ಭಾವನೆಗಳನ್ನು ಬದಿಗೊತ್ತಿ ಸ್ನೇಹದಿಂದ ಕ್ರೀಡೆಯನ್ನು ಎದುರಿಸಬೇಕು ಹಾಗೂ ನಿರ್ಣಾಯಕರ ನಿರ್ಣಯಕ್ಕೆ ತಲೆ ಬಾಗಬೇಕ.
ಕ್ರೀಡೆಗಳು ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ದೃಹಿಕವಾಗಿ ಸದೃಢರಾಗುತ್ತಾರೆ ಎಂದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ ರಾಜ್ಯದ ನಾನಾ ಭಾಗಗಳಿಂದ ಕ್ರೀಡಾ ಸ್ಫೂರ್ತಿಯಿಂದ ಆಟವಾಡಬೇಕು. ಕ್ರೀಡೆಯನ್ನು ಯಾರು ಪ್ರೀತಿಯಿಂದ ಆಡುತ್ತಾರೆ ಅವರಿಗೆ ಗೆಲುವಾಗುತ್ತದೆ. ಮದಕರಿ ನಾಯಕನ ಹೆಸರಲ್ಲಿ ಪಂದ್ಯ (Madakari Cup) ಆಯೋಜನೆ ಮಾಡಿರುವುದು ಸಂತೋಷದ ವಿಚಾರವಾಗಿದ್ದು ಮುಂದಿನ ದಿನದಲ್ಲಿ ಸಹ ಇಂತಹ ಕ್ರೀಡೆಗಳು ಜರುಗಲಿ ಎಂದು ಹಾರೈಸಿದರು.
ಇದನ್ನೂ ಓದಿ: ಕುವೆಂಪು ಬಸವಾದಿ ಶರಣರ ಸಾಲಲ್ಲಿ ನಿಲ್ಲುವ ಮೌಲ್ಯತೆ ಇದೆ: ಎನ್.ರಘುಮೂರ್ತಿ ಬಣ್ಣನೆ | Kuvempu
ಈ ಸಂದರ್ಭದಲ್ಲಿ ಮದಕರಿ ಕಪ್ ಆಯೋಜಕರಾದ ಸ್ನೇಹಜೀವಿ ಸೂರಪ್ಪ, ರಾಜೀವ್, ರಾಮು,ನಾಗರಾಜ್ ಮತ್ತು ಮಾಜಿ ಜಿ.ಪಂ.ಸದಸ್ಯ ಬಾಬುರೆಡ್ಡಿ, ಕಾಂಗ್ರೆಸ್ ಮುಖಂಡ ಅಂಜಿನಪ್ಪ, ರಾಜೇಶ್, ಅಹೋಬಲ ಟಿವಿಎಸ್ ಅರುಣ್ ಕುಮಾರ್, ಫಾರುಕ್ ಇತರರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252