Chitradurga news |nammajana.com|29-6-2024
ನಮ್ಮಜನ.ಕಾಂ, ಚಿತ್ರದುರ್ಗ: ಜುಲೈ 1 ರಂದು ಚಿತ್ರದುರ್ಗಕ್ಕೆ ಐತಿಹಾಸಿಕ ದಿನವಾಗಿದೆ. ನಾಡ ದೊರೆ ರಾಜವೀರ ಮದಕರಿನಾಯಕ ಪಟ್ಟಾಭಿಷೇಕ (Madakarinayaka pattabhiseka) ಅಲಂಕರಿಸಿದ ದಿನದ ಪ್ರಯುಕ್ತ ನಾವು ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿ ಎಂದು ಮಾಜಿ ನಗರಸಭೆ ಅಧ್ಯಕ್ಷ ಮತ್ತು ತಾಲೂಕು ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ರಾಜವೀರ ಮದಕರಿನಾಯಕ 270 ನೇ ಪಟ್ಟಾಭಿಷೇಕ ಕಾರ್ಯಕ್ರಮದ ಕುರಿತು ಮಾತನಾಡಿ ನಾಡ ದೊರೆ ರಾಜವೀರ ಮದಕರಿನಾಯಕ ಅವರ ಪಟ್ಟಾಭಿಷೇಕವನ್ನು ಜುಲೈ 1 ರಂದು ತರಾಸು ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದರು.
ಮದಕರಿನಾಯಕನ ಆಳ್ವಿಕೆಯಲ್ಲಿ ಎಲ್ಲಾ ಸಮಾಜದ ರಕ್ಷಣೆ ಮಾಡುವ ಮೂಲಕ ದುರ್ಗದ ಅಭಿವೃದ್ಧಿಗೆ ಶ್ರಮಿಸಿದ್ದರು. (Madakarinayaka pattabhiseka) ಅಂತಹ ಮಹಾನ್ ದೊರೆಯನ್ನು ವರ್ಷಕ್ಕೆ ಮೂರು ಬಾರಿ ನೆನಪು ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದು ಜುಲೈ 1 ರಂದು ಸಹ ಮದಕರಿನಾಯಕ ಪಟ್ಟಕ್ಕೆ ಏರಿದ ದಿನವಾಗಿರುವುದಿಂದ ಸ್ಮರಿಸಿ ಅವರ ನೆನಪಿನ ಜೊತೆ ಅವರ ಜೀವನ ವಿಷಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಮದಕರಿನಾಯಕನ ನೆನಪುಗಳನ್ನು ತಿಳಿಸೋಣ ಎಂದರು.
ಕಾರ್ಯಕ್ರಮದ ವಿವರ
ಜುಲೈ 1 ರಂದು ಸೋಮವಾರ ಬೆಳಗ್ಗೆ ಮದಕರಿನಾಯಕ ಪ್ರತಿಮೆಗೆ 11 ಗಂಟೆ ಮಾಲರ್ಪಣೆ ಮಾಡಲಾಗುತ್ತದೆ. ನಂತರ ತರಾಸು ರಂಗ ಮಂದಿರದಲ್ಲಿ 12 ಗಂಟೆಗೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳು (Madakarinayaka pattabhiseka)
ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ ಕೆ.ಸಿ.ವೀರೇಂದ್ರ ಪಪ್ಪಿ, ಎನ್.ವೈ.ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಧರ್ಮಪುರ ಕೆರೆಗೆ ಪ್ರಾಯೋಗಿಕವಾಗಿ ಹರಿದ ನೀರು | Water flowed into Dharmapura Lake
ಜಿಲ್ಲಾ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ಮದಕರಿನಾಯಕ ಅವರ ಇತಿಹಾಸವನ್ನು (Madakarinayaka pattabhiseka) ಪಠ್ಯದಲ್ಲಿ ಸೇರಿಸಲು ಪ್ರಯತ್ನ ನಡೆಸಲಾಗುತ್ತದೆ. ಮುಂದಿನ ದಿನದಲ್ಲಿ ಹೋರಟವನ್ನು ಹಮ್ಮಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಜಿಲ್ಲಾ ನಾಯಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಜೆ. ಕೃಷ್ಣಮೂರ್ತಿ ತಾಲ್ಲೂಕು ಅಧ್ಯಕ್ಷ ಬಿ.ಕಾಂತ ರಾಜ್, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಗೋಪಾಲಸ್ವಾಮಿ ನಾಯಕ, ಅಂಜಿನಪ್ಪ, ಕಾಟೀಹಳ್ಳಿ ಕರಿಯಪ್ಪ ಮತ್ತು ಸಮಾಜ ಅನೇಕ ಮುಖಂಡರು ಇದ್ದರು.