Chitradurga news | Nammajana.com | 13-5-2024
ನಮ್ಮಜನ.ಕಾಂ , ಚಿತ್ರದುರ್ಗ: ಮೇ 15 ರಂದು ರಾಜವೀರ ಮದಕರಿನಾಯಕರ ಪುಣ್ಯ ಸ್ಮರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಯಕ ಸಮಾಜ ಸೇರಿ ಎಲ್ಲಾ ಸಮಾಜದ ಬಂಧುಗಳು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ನಾಯಕ ಸಮಾಜದ ಮುಖಂಡರ ಆಯೋಜಿಸಿದ್ದ ಮದಕರಿನಾಯಕ ಪುಣ್ಯಸ್ಮರಣೆ ಕಾರ್ಯಕ್ರಮ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಮದಕರಿನಾಯಕ ಹೆಸರು ಎಲ್ಲೋ ಒಂದು ಕಡೆ ಮರೆಯಗಬಾರದು ಎಂಬ ದೃಷ್ಟಿಯಿಂದ ವರ್ಷಕ್ಕೆ ಎರಡು ಬಾರಿ ನೆನಪು ಮಾಡಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಮದಕರಿನಾಯಕರ ಪುಣ್ಯ ಸ್ಮರಣೆ ಮತ್ತು ಮದಕರಿನಾಯಕ ಜಯಂತ್ಯೋತ್ಸವ ಕಾರ್ಯಕ್ರಮ ಮಾಡಲಾಗುತ್ತದೆ. ಅದರಂತೆ ಮೇ 15 ರಂದು ಪುಣ್ಯಸ್ಮರಣೆ ಮಾಡಲಾಗುತ್ತದೆ. ಅಂದು ಬೆಳಗ್ಗೆ ಹೂವಿನ ಅಲಂಕಾರ, ಪ್ರತಿಮೆ ಮುಂಭಾಗದಲ್ಲಿ ಸಂಜೆ ಮೇಣದ ಬತ್ತಿ ಬೆಳಗುವ ಕಾರ್ಯಕ್ರಮ ಮಾಡಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಇರುವುದಿಂದ ಯಾವ ರಾಜಕಾರಣಿಗಳು ಸಹ ಆಗಮಿಸುತ್ತಿಲ್ಲ. ಹಾಗೂ ಯಾವ ಸಭಾ ಕಾರ್ಯಕ್ರಮ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ನೀತಿ ಸಂಹಿತೆ ಜಾರಿ ಇರುವುದಿಂದ ಸರಳವಾಗಿ ಮದಕರಿನಾಯಕ ಪುಣ್ಯ ಸ್ಮರಣೆ ಮಾಡಲಾಗುತ್ತಿದ್ದು ಮುಂದಿನ ಬಾರಿ ಅದ್ದೂರಿಯಾಗಿ ಮಾಡಲಾಗುತ್ತದೆ. ಪುಣ್ಯ ಸ್ಮರಣೆಗೆ ಎಲ್ಲಾ ಸಮಾಜದವರು ಭಾಗವಹಿಸಿ ಎಂದರು.
ಇದನ್ನೂ ಓದಿ: HOROSCOPE TODAY: ಇಂದಿನ ದಿನ ಭವಿಷ್ಯ
ಈ ಸಂದರ್ಭದಲ್ಲಿ ಮುಖಂಡರಾದ ಜೆ.ಎನ್.ಕೋಟೆ ಗುರುಸಿದ್ದಪ್ಪ, ಗೋಪಲಸ್ವಾಮಿನಾಯಕ್, ಅಂಜಿನಪ್ಪ, ಕಾಟೀಹಳ್ಳಿ ಕರಿಯಪ್ಪ, ತಿಪ್ಪೇಸ್ವಾಮಿ ಇದ್ದರು.