Chitradurga News | Nammajana.com | 20-08-2025
ನಮ್ಮಜನ ನ್ಯೂಸ್ ಕಾಂ, ಬೆಂಗಳೂರು: ಒಳಮೀಸಲಾತಿ(CM Siddaramaiah) ಅಧಿಕೃತವಾಗಿ ಬುಧವಾರ ಜಾರಿಗೊಳ್ಳುತ್ತಿದ್ದಂತೆ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಮುಖ್ಯಮಂತ್ರಿ ನಿವಾಸ ಕಾವೇರಿ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಾದಿಗ ಸಮುದಾಯದವರು, ಸಿದ್ದರಾಮಯ್ಯ ಬೃಹತ್ ಭಾವಚಿತ್ರಕ್ಕೆ ಹಾಲಿನಾಭಿಷೇಕದ ಜೊತೆಗೆ ಹೂವಿನ ಮಳೆ ಸುರಿಸಿದರು.
ಇದನ್ನೂ ಓದಿ: ಚಿತ್ರದುರ್ಗ Varshita murder | ವರ್ಷಿತಾಳ ಕೊಲೆ ಕೇಸ್, ಸಚಿವ ಡಿ.ಸುಧಾಕರ್ ಹೇಳಿದ್ದೇನು | 5 ಲಕ್ಷ ಪರಿಹಾರ ಘೋಷಣೆ

ಬಳಿಕ ಸಿಎಂ ನಿವಾಸ ಪ್ರವೇಶಿಸಿದ ಆಂಜನೇಯ ಇತರ ಪ್ರಮುಖ ಮುಖಂಡರು, ಬೃಹತ್ ಹೂವಿನ ಹಾರದೊಂದಿಗೆ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಎಚ್.ಆಂಜನೇಯ, ಒಳಮೀಸಲಾತಿ ಕಲ್ಪನೆ ಜನಕರಾದ ಮಾದಿಗ ಸಮುದಾಯದವರು 35 ವರ್ಷ ನಿರಂತರ ಹೋರಾಟ ನಡೆಸಿದ್ದು, ಸುಪ್ರೀಂ ಕೋರ್ಟ್ ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.
ಬಲಾಢ್ಯ ಸಮುದಾಯಗಳ ಮಧ್ಯೆ ಸರ್ಕಾರಿ ಸೌಲಭ್ಯ, ಉನ್ನತ ಉದ್ಯೋಗ-ಶಿಕ್ಷಣ ಪಡೆಯುವುದು ಮಾದಿಗರು ಹಾಗೂ ಸಂಬಂಧಿತ ಜಾತಿಗಳಿಗೆ ಗಗನಕುಸುಮವಾಗಿತ್ತು. ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳಾಗಿ ಮಾದಿಗ ಸಮುದಾಯ ನೌಕರಿ ಪಡೆಯುವದಕ್ಕಷ್ಟೇ ಮೀಸಲಾತಿ ಸೀಮಿತವಾಗಿತ್ತು. ಈ ಸತ್ಯವನ್ನು ಸರ್ಕಾರಗಳು ಹಾಗೂ ನ್ಯಾಯಾಂಗಕ್ಕೆ ಮನದಟ್ಟು ಮಾಡಿಕೊಡಲಾಗಿತ್ತು ಎಂದರು.
ಇದನ್ನೂ ಓದಿ: ಒಳ ಮೀಸಲಾತಿಗೆ ಸರ್ಕಾರ ಅಧಿಕೃತ ಮುದ್ರೆ | ಸಿಎಂ ವಿಧಾನ ಸಭೆಯಲ್ಲಿ ಏನೆಲ್ಲ ಹೇಳಿದರು?
ಪರಿಣಾಮ ಆಗಸ್ಟ್ 1, 2024ರಂದು(CM Siddaramaiah) ಒಳಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡುತ್ತಿದ್ದಂತೆ ತಾವು ಹೆಚ್ಚು ಕಾಳಜಿ ವಹಿಸಿ, ವೈಜ್ಞಾನಿಕವಾಗಿ ಮೀಸಲಾತಿ ಹಂಚಿಕೆಗೆ ಗಟ್ಟಿ ನಿರ್ಧಾರ ಕೈಗೊಂಡಿದ್ದರ ಫಲ ಇಂದು ಮಾದಿಗರು ಸಂಭ್ರಮಿಸುವಂತಾಗಿದೆ ಎಂದರು.
ಓದಿ ಉನ್ನತ ಸ್ಥಾನಕ್ಕೆ ಏರಿ
ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿ ಸಲ್ಲಿಸಿದ ಬಳಿಕ ಒಳಮೀಸಲಾತಿ ಜಾರಿ ಆಗದಂತೆ ಅನೇಕ ಶಕ್ತಿಗಳು ಅಡ್ಡಗಾಲು ಹಾಕಿದರು. ಆದರೆ, ತಾವು ಯಾವುದಕ್ಕೂ ಜಗ್ಗದೆ ನುಡಿದಂತೆ ನಡೆದಿದ್ದೀರಿ. ಅದರಲ್ಲೂ ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ನೀಡಿಯೇ ಸಿದ್ದ ಎಂದು ಅನೇಕ ವರ್ಷಗಳಿಂದ ಹೇಳುತ್ತಿದ್ದ ಮಾತಿನಂತೆ ನಡೆದುಕೊಂಡಿದ್ದೀರಿ. ಈ ಕಾರಣಕ್ಕೆ ಮಾದಿಗ ಸಮುದಾಯ ತಮಗೆ ಸದಾ ಕೃತಜ್ಞರಾಗಿರುತ್ತದೆ ಎಂದು ಹೇಳಿದರು.
ಯಾವುದೇ ಒತ್ತಡಕ್ಕೆ ಮಣಿಯದೆ ಒಳಮೀಸಲಾತಿ ಜಾರಿಗೊಳಿಸಿ ನುಡಿದಂತೆ ನಡೆಯುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದೀರಿ. ಆಯೋಗ ನೀಡಿದ್ದ ಐದು ಗುಂಪುಗಳ ಬದಲಾಗಿ ಮೂರು ವರ್ಗಗಳನ್ನಾಗಿಸಿದ್ದೀರಿ. ಅತ್ಯಂತ ಹಿಂದುಳಿದ ಮಾದಿಗ ಮತ್ತು ಸಂಬಂಧಿತ ಜಾತಿಗಳನ್ನು ಎ ಗುಂಪು ಎಂದೇ ಪರಿಗಣಿಸಬೇಕೆಂದು ಕೋರಿದರು.
ಮುಖ್ಯವಾಗಿ ಆಯೋಗ ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ಗುಂಪುಗಳನ್ನಾಗಿಸಿ ಶೇ.1ರಷ್ಟು ಮೀಸಲಾತಿ ಕಲ್ಪಿಸಿತ್ತು. ಆಂಧ್ರ, ತೆಲಂಗಾಣದಲ್ಲಿ ಇದೇ ನೀತಿ ಅನುಸರಿಸಲಾಗಿತ್ತು. ಆದರೆ, ಇದನ್ನು ಕೈಬಿಟ್ಟು ಬೇರೆ ವರ್ಗದಲ್ಲಿ ಸೇರಿಸಿರುವುದು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಈ ಸಂಬಂಧ ಅಲೆಮಾರಿ ಸಮುದಾಯದ ಮುಖಂಡರನ್ನು ಕರೆಯಿಸಿ ಅವರೊಂದಿಗೆ ಚರ್ಚಿಸಿ ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಲು ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅಲೆಮಾರಿಗಳನ್ನು ತಾವು ಕೈಬಿಡಬಾರದು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಪತ್ರಕರ್ತ ಸಮುದಾಯದ ನೆರಳಲ್ಲೇ ಅರಳಿದವನು ನಾನು: KV Prabhakar
ವಕೀಲ ರವೀಂದ್ರ ಮಾತನಾಡಿ, ಒಳಮೀಸಲಾತಿ(CM Siddaramaiah) ಜಾರಿಗೆ ದಶಕಗಳ ಕಾಲದಿಂದಲೂ ಅಡ್ಡಿಯಾಗಿದ್ದವರು ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೂ ತಡೆವೊಡ್ಡುವ ಪ್ರಯತ್ನ ನಡೆಸಿದ್ದರು. ತಾವು ಯಾವುದಕ್ಕೂ ಮನ್ನಣೆ ನೀಡದೆ ಜಾರಿಗೊಳಿಸಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಈ ಸಂಬಂಧ ಮಾದಿಗ ಮತ್ತು ಇತರ ಸಮುದಾಯಗಳು ತಮ್ಮನ್ನು ಸದಾ ಸ್ಮರಿಸುತ್ತವೆ ಎಂದು ಕೃತಜ್ಞತೆ ಸಲ್ಲಿಸಿದರು.
ದಲಿತ ಶಕ್ತಿ ಬಲಗೊಳ್ಳಲಿ
ಪರಿಶಿಷ್ಟ ಜಾತಿಯಲ್ಲಿ ಮೂರು ಗುಂಪುಗಳಾಗಿ ವಿಂಗಡಣೆ ಆಗಿರುವ ಎಲ್ಲ ಸಮುದಾಯಗಳು ಸಹೋದರರ ರೀತಿ ಜೀವನ ನಡೆಸಬೇಕು ಎಂದು ಹೆಚ್.ಆಂಜನೇಯ ಹೇಳಿದರು. ಒಳಮೀಸಲಾತಿ ಜಾರಿ, ಒಡಹುಟ್ಟಿದವರು ಆಸ್ತಿ ಹಂಚಿಕೆ ಮಾಡಿಕೊಂಡಂತೆ ಅಷ್ಟೇ. ಕಷ್ಟ-ಸುಖಗಳ ಸಂದರ್ಭ ನಾವೆಲ್ಲರೂ ಒಗ್ಗೂಡಬೇಕು. ಯಾವುದೇ ಕಾರಣಕ್ಕೂ ದಲಿತ ಶಕ್ತಿಗೆ ಪೆಟ್ಟಾಗದ ರೀತಿ ಎಚ್ಚರಿಕೆ ವಹಿಸಬೇಕು. ಒಳಮೀಸಲಾತಿ ಜಾರಿ ದಲಿತ ಶಕ್ತಿಯನ್ನು ಇನ್ನಷ್ಟು ಬಲಿಷ್ಠರನ್ನಾಗಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕೊಪ್ಪಳದ ಗುಳೇಪ್ಪ, ಗುಲ್ಬರ್ಗಾದ ಶ್ಯಾಮ್ ನಾಟಿಕೇರ್, ಬೀದರ್‌ನ ಚಂದ್ರಕಾಂತ್ ಇಪ್ಪಾಳ್ಗ, ಹೊಸಕೋಟೆ ಸುಬ್ಬಣ್ಣ, ಮಹದೇವಪುರದ ಚಿಮ್ಮಿ, ಹಾಸನದ ಶಂಕರ್‌ರಾಜ್, ಚಿತ್ರದುರ್ಗ ಶರಣಪ್ಪ, ನರಸಿಂಹರಾಜ್, ಮಾಗಡಿ ಮಂಜೇಶ್, ಬೆಂಗಳೂರಿನ ಮುತ್ತುರಾಜ್, ರಾಯಚೂರಿನ ಶರಣು ಇತರರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252