Chitradurga news | nammajana.com | 17-07-2025
ನಮ್ಮಜನ.ಕಾಂ,ಹೊಳಲ್ಕೆರೆ: ದೇಶದಲ್ಲಿ ಭಾರತೀಯ ನ್ಯಾಯ ಸಂಹಿತೆ(BNS) ಕಾಯ್ದೆ ಬಳಿಕ ಚಿತ್ರದುರ್ಗ ಜಿಲ್ಲೆಯಲ್ಲಿ ಆರೋಪಿಯೊಬ್ಬನಿಗೆ ಈ ಕಾಯ್ದೆ ಅಡಿ ಶಿಕ್ಷೆಯಾಗಿದೆ. ಇದು ಜಿಲ್ಲೆಯಲ್ಲಿ ಮೊದಲ ಪ್ರಕರಣವಾಗಿ ಗುರುತಿಸಿಕೊಂಡಿದೆ.
ಇದನ್ನೂ ಓದಿ: ನಗರರಸಭೆ ಕಾರ್ಯಚರಣೆ | ಸಾರ್ವಜನಿಕ ಆಸ್ಪತ್ರೆಯ ಕಾಂಪೌಂಡ್ ಬಳಿಯ ಅಂಗಡಿಗಳ ಎತ್ತಂಗಡಿ

ಹೊಳಲ್ಕೆರೆ ಪಟ್ಟಣದ ಸಿದ್ದರಾಮಪ್ಪ ಬಡಾವಣೆಯ 3ನೇ ಅಡ್ಡರಸ್ತೆಯಲ್ಲಿರುವ ಸಂಜೀವಪ್ಪ ಎಂಬುವವರ ಮನೆಯಲ್ಲಿ 2024 ಸೆಪ್ಟಂಬರ್ 23 ರಂದು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಹೊಳಲ್ಕೆರೆ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಅರೋಪಿಗೆ ಶಿಕ್ಷೆ ನೀಡಿದೆ.
ಸಿದ್ದರಾಮಪ್ಪ ಬಡಾವಣೆಯ(BNS) ಸಂಜೀವಪ್ಪ ಅವರ ಮನೆಯಲ್ಲಿ 80 ಸಾವಿರ ನಗದು, 1.47 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಹೊಸದುರ್ಗದ ಸೈಯದ್ ಫಜಲ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿ, ಬಂಧಿತನಿಂದ ಆಭರಣ ವಶಪಡಿಸಿಕೊಂಡಿದ್ದರು.
ಸದರಿ ಆರೋಪಿ ವಿರುದ್ಧ ಹೊಳಲ್ಕೆರೆ ಠಾಣೆ ಪಿಎಸ್‌ಐ ಸಚಿನ್ ಪಟೇಲ್ ವಿಚಾರಣೆ ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೊಳಲ್ಕೆರೆ ಹಿರಿಯ ನ್ಯಾಯಾಧೀಶರಾದ ರಘುರಾಮ್ ಎನ್.ಎಸ್ ಅವರು ವಾದವಿವಾದಗಳ ಅಲಿಸಿ ಆರೋಪಿ ಸೈಯದ್ ಫಜಲ್ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎರಡೂವರೆ ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ಇಂದಿನ ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಪ್ರಕರಣದಲ್ಲಿ ಸರ್ಕಾರಿ(BNS) ಅಭಿಯೋಜಕ ಶ್ರೀರಂಗ ಕುಲಕರ್ಣಿ ಪ್ರಕರಣದಲ್ಲಿ ಮಂಡಿಸಿದ್ದರು.
ಕಳ್ಳತನ ಪ್ರಕರಣದಲ್ಲಿ ಆರೋಪಿ ಪತ್ತೆ ಮಾಡುವಲ್ಲಿ ಪಿಎಸ್‌ಐ ಸಚಿನ್ ಪಟೇಲ್, ಸಿಬ್ಬಂದಿಗಳಾದ ಕುಬೇಂದ್ರಪ್ಪ, ದೇವರಾಜ, ಮಂಜುನಾಥ, ನಿರಂಜನ, ಬಸವರಾಜ, ಕಿರಣ್‌ಕುಮಾರ್, ಸಿದ್ದಪ್ಪ, ಆನಂದ, ದರ್ಶನ್ ಪ್ರಕರಣ ತನಿಖೆ ತಂಡದಲ್ಲಿ ಸಹಕರಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252