Chitradurga News | Nammajana. Com |27-4-2024
ನಮ್ಮಜನ.ಕಾಂ ಚಿತ್ರದುರ್ಗ: ಗ್ರಾಮದ ರೈತರ ತೋಟದಲ್ಲಿ ಗುರುವಾರ ಆಯೋಜಿಸಿದ್ದಾ ಅಖಂಡ ಕರ್ನಾಟಕ ರಾಜ್ಯ ರೈತಸಂಘದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ೨೦೨೩-೨೪ನೇ ಸಾಲಿನ ಬೆಳೆವಿಮೆ ವಿತರಣೆಯಲ್ಲಿ ಪರಶುರಾಂಪುರ ಹೋಬಳಿ ಸೇರಿದಂತೆ ತಾಲೂಕಿನ ರೈತರಿಗೆ ತಾರತಮ್ಯ ಮಾಡಿರುವುದನ್ನು ಖಂಡಿಸಿ ಮೇ.೦೩ರಂದು ತಾಲೂಕು ಕಚೇರಿಯ ಮುಂದೆ ಬೃಹತ್ ರೈತರ ಪ್ರತಿಭಟನೆ ನಡೆಸಲು ನಿರ್ಣಯಿಸಲಾಯಿತು.
ಸಂಘದ ತಾಲೂಕಧ್ಯಕ್ಷ ಕೆ.ಚಿಕ್ಕಣ್ಣ ಮಾತನಾಡಿ,ಬೆಳೆವಿಮೆ ಯೋಜನೆ ಅವೈಜ್ಞಾನಿಕವಾಗಿದೆ. ಭೌಗೋಳಿಕವಾಗಿ ವಾಡಿಕೆ ಮಳೆ ಇಲ್ಲದೆ ಬರಪೀಡಿತ ಎಂದು ಘೋಷಣೆ ಮಾಡಿರುವ ತಾಲೂಕಿನಲ್ಲಿ ಬೆಳೆವಿಮೆಯಲ್ಲಿ ಮೋಸ ಮಾಡಲಾಗಿದೆ. ಬಿತ್ತಿದ ರೈತನಿಗೆ ಬೆಳೆವಿಮೆ ಸಿಕ್ಕಿಲ್ಲ. ಬೀಳು ಬಿಟ್ಟಿರುವ ರೈತನಿಗೆವಿಮೆ ಹಣ ಬಂದಿದೆ. ಗ್ರಾಮ ಲೆಕ್ಕಾಧಿಕಾರಿ,ಕೃಷಿ ಇಲಾಖೆ ಅಧಿಕಾರಿ ಮತ್ತು ಕಂಪ್ಯೂಟರ್‌ಎಂಟ್ರಿ ಮಾಡುವ ಸಿಬ್ಬಂದಿಯ ನಿರ್ಲಕ್ಷ್ಯ ದಿಂದ ರೈತರಿಗೆ ಮೋಸವಾಗಿದೆ.
ಕಂದಾಯ,ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ನಡೆಸಿರುವ ಆಲಿಕಲ್ಲು ಮಳೆಗೆ ಬೆಳೆ ನಷ್ಟ,ವೇದಾವತಿ ಪ್ರವಾಹದಿಂದ ೨೦೦ ಹೆಕ್ಟರ್ ಬೆಳೆ ನಷ್ಟ ಮತ್ತು ಬಿರುಗಾಳಿಗೆ ಅಡಕೆ, ತೆಂಗು, ಬಾಳೆ ಬೆಳೆ ಕಳೆದುಕೊಂಡ ೧೫೦ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಈ ಬೆಳೆ ನಷ್ಟ ಸಮೀಕ್ಷೆ ನಡೆಸಿರುವ ಅಧಿಕಾರಿಗಳಿಂದ ರೈತರಿಗೆ ಹಿಂಬರಹವಾದರೂ ನೀಡಬೇಕು.
ಕೋರ್ಟಿಗಾದರೂ ಹೋಗಿ ಕಾನೂನು ಹೋರಾಟ ಮಾಡುತ್ತೇವೆ. ಬೆಳೆ ವಿಮೆ ಕಟ್ಟಿಸಿಕೊಳ್ಳುವಾಗ ಕಾಳಜಿ ತೋರಿಸುವ ಅಧಿಕಾರಿಗಳು ಬೆಳೆವಿಮೆ ಕೊಡಿಸಲುಆಸಕ್ತಿ ತೋರಿಸುವುದಿಲ್ಲ. ವಿಮಾ ಕಂಪನಿಗಳ ಮೋಸದಾಟಕ್ಕೆರೈತರು ಬಲಿಯಾಗುತ್ತಿದ್ದೇವೆ. ಸಂಕಷ್ಟದಲ್ಲಿರುವರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಬೆಳೆವಿಮೆ ತಾರತಮ್ಯ ಸರಿಪಡಿಸಿ ತಾಲೂಕಿನಎಲ್ಲಾರೈತರಿಗೆನ್ಯಾಯಕೊಡಿಸಬೇಕು. ೪೦ ಗ್ರಾಮ ಪಂಚಾಯಿತಿಗಳ ರೈತರಿಗೆ ಸಮಾನ ಬೆಳೆವಿಮೆ ಮತ್ತು ಪರಿಹಾರ ವಿತರಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ ಮಾತನಾಡಿ, ಹವಾಮಾನ ವೈಪರೀತ್ಯದಿಂದ ವಾರ್ಷಿಕ ವಾಡಿಕೆ ಮಳೆಯೂ ಬರುತ್ತಿಲ್ಲ.ಇದರಿಂದ ಕೃಷಿ ಬೆಳೆಗಳು ರೈತರಿಗೆ ಧಕ್ಕುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಆರ್ಥಿಕ ಭದ್ರತೆ ಬೆಳೆವಿಮೆ ಯೋಜನೆಯಿಂದ ಉಪಯೋಗವಿದೆ. ಸಮೀಕ್ಷೆ ನಡೆಸುವ ಹಂತದಲ್ಲೆ ಅರ್ಹ ರೈತರ ಜಮೀನು ಮತ್ತು ಬೆಳೆಯ ನಿರ್ಧಿಷ್ಟ ನಮೂದು ಮಾಡಬೇಕು. ಕೆಲ ಭಾಗದ ಸಮೀಕ್ಷೆ ಆಧರಿಸಿ ತಾಲೂಕಿ ನಒಟ್ಟಾರೆ ಪರಿಸ್ಥಿತಿಯನ್ನು ಅಳತೆಗೋಲಾಗಿ ಮಾಡಬಾರದು. ಪ್ರಸ್ತುತ ಬೆಳೆವಿಮೆ ವಿತರಣೆಯಲ್ಲಿ ನಿರ್ಧಿಷ್ಟ ರೈತರ ಜಮೀನುಗಳ ನಡುವೆಯೇ ತಾರತಮ್ಯವಾಗಿದೆ.ಇದನ್ನು ಕೂಡಲೇ ಕಂದಾಯ ಇಲಾಖೆ ಮತ್ತು ವಿಮಾ ಕಂಪನಿ ಅಧಿಕಾರಿಗಳು ಸರಿಪಡಿಸಬೇಕು ಎಂದಿದ್ದಾರೆ.
ಸಭೆಯಲ್ಲಿ ಶಾಂತಣ್ಣ, ನವೀನ್‌ಗೌಡ, ಜಂಪಣ್ಣ, ಎಚ್. ಪ್ರಕಾಶ, ಹನುಮಂತರಾಯಪ್ಪ,ಖಾದರ್ ಭಾಷ್,ಅಣ್ಣಪ್ಪ,ರಾಜು, ನಾರಾಯಣಪ್ಪ, ರಾಜಣ್ಣ, ಪರಮೇಶ್ವರಪ್ಪ, ತಿಪ್ಪೇಸ್ವಾಮಿ, ಮಂಜುನಾಥ ಮತ್ತಿತರರು ಇದ್ದರು.