Chitradurga news|nammajana.com|12-12-2024
ನಮ್ಮಜನ.ಕಾಂ, ಚಿತ್ರದುರ್ಗ: ನಗರಕ್ಕೆ ಹೊಂದಿಕೊಂಡಿರುವ (Medehalli) ತಾಲೂಕಿನ ಮೆದೇಹಳ್ಳಿ ಗ್ರಾಮ ಪಂಚಾಯತ್ಅಧ್ಯಕ್ಷರಾಗಿ ಕಾವ್ಯ ವಿಜಯಕುಮಾರ್ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಕಚೇರಿಯಲ್ಲಿ ಮುಂದಿನ 13 ತಿಂಗಳ ಅವಧಿಗೆ ಬುಧವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಂಚಾಯಿತಿಯ ಮಾಜಿ ಅಧ್ಯಕ್ಷ

ವಿಜಯಕುಮಾರ್ ಪತ್ನಿ ಕಾವ್ಯ ಹಾಗೂ ನಿರಂಜನಮೂರ್ತಿ (Medehalli) ನಾಮಪತ್ರ ಸಲ್ಲಿಸಿದ್ದು, ನಿರಂಜನಮೂರ್ತಿ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಅಂತಿಮವಾಗಿ ಕಾವ್ಯ ಅವರ ಹೆಸರನ್ನು ಚುನಾವಣಾಧಿಕಾರಿ ಡಾ.ನಾಗವೇಣಿ ಘೋಷಿಸಿದರು.
ಮೆದೇಹಳ್ಳಿ ಗ್ರಾಮ ಪಂಚಾಯಿತಿಯ ಒಟ್ಟು 21 ಸದಸ್ಯ ಬಲದಲ್ಲಿ 15 ಸದಸ್ಯರು ಕಾವ್ಯ ವಿಜಯಕುಮಾರ್ ಅವರಿಗೆ
ಬೆಂಬಲ ಸೂಚಿಸಿದರು. ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ದುಗ್ಗಪ್ಪ, ಮಮತ, ಶೃತಿ ವಿಜಯಕುಮಾರ್, ಭಾಗ್ಯಮ್ಮ, ನಿಂಗಪ್ಪ, ಧನ್ಯಕುಮಾರ್, ಪ್ರಿಯದರ್ಶಿನಿ, ಸುಶೀಲಮ್ಮ, ಕಮಲಮ್ಮ (Medehalli) ಶ್ರೀನಿವಾಸ್, ಲಕ್ಷ್ಮಿದೇವಿ, ಗೌರಮ್ಮ, ಶ್ರೀನಿವಾಸ್ ಕಾವ್ಯ ಅವರನ್ನು ಬೆಂಬಲಿಸಿದರು.
ಇದನ್ನೂ ಓದಿ: ವಾಣಿ ವಿಲಾಸ ಸಾಗರ ನೀರಿನ ಮಟ್ಟ | 12 ಡಿಸೆಂಬರ್ 2024 |Vani Vilasa Sagara Dam
ಈ ವೇಳೆ ಪಿಡಿಒ ಆರ್.ಪಾತಣ್ಣ, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಮೆದೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಆರ್.ವಿಜಯಕುಮಾರ್, ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಎಚ್.ಎಂ.ಮಂಜುನಾಥ್, ಮುಖಂಡರಾದ ದ್ಯಾಮಣ್ಣ, ರಮೇಶ್, ಮಾರೇಶ್, ತಿಪ್ಪೇಸ್ವಾಮಿ, ನಾಗರಾಜ್, ಶಾಂತಕುಮಾರ್, ಆರ್.ನರಸಿಂಹರಾಜು, ಮಾಜಿ ಸದಸ್ಯ ಮಂಜುನಾಥ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ವಿ.ದಿನೇಶ್, ಅನೀಸ್, ಸೈಯದ್ ಖುದ್ದೂಸ್, ಪ್ರಕಾಶ್ ರಾಮಾನಾಯ್ಕ ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252