Chitradurga news|nammajana.com|4-12-2025
ನಮ್ಮಜನ.ಕಾಂ, ಚಿತ್ರದುರ್ಗ: ಇಬ್ಬನಿಸೂರ್ಯ ಕನ್ನಡ ದಿನಪತ್ರಿಕೆ ಸಂಪಾದಕರು, ಡಿ.ಡಿ.ಚಂದನ ನ್ಯೂಸ್ ಜಿಲ್ಲಾ (Media Academy Award) ವರದಿಗಾರರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಕಾರ್ಯದರ್ಶಿಯಾದ ದಿನೇಶ್ ಗೌಡಗೆರೆ ಅವರು 2024ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿ ಗೌಡಗೆರೆ ಗ್ರಾಮದಲ್ಲಿ ಜನಿಸಿದ ದಿನೇಶ್ ಗೌಡಗೆರೆ ಅವರು ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ನಾಯಕನಟ್ಟಿಯ ಎಸ್‍ಟಿಎಸ್‍ಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ಪಡೆದರು. ನಂತರ ಚಿತ್ರದುರ್ಗ ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಕಲಾ ಕಾಲೇಜು, ಜಗಳೂರಿನ ಹೋ.ಚಿ.ಬೋರಯ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.

ದಿನೇಶ್ ಗೌಡಗೆರೆ ಅವರು ಕಳೆದ 30 ವರ್ಷಗಳಿಂದಲೂ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಆರಂಭದಲ್ಲಿ ಹವ್ಯಾಸಿ ಬರಹಗಾರ ಮತ್ತು ವೃತ್ತಿ ನಿರತ ಛಾಯಾಗ್ರಾಹಕನಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1997 ರಿಂದ 2005 ರವರೆಗೆ ವಾರ ಪತ್ರಿಕೆ (ಯುವ ಪಾಳೇಗಾರ) ಉಪ ಸಂಪಾದಕರಾಗಿ 8 ವರ್ಷ (Media Academy Award) ಕಾರ್ಯನಿರ್ವಹಣೆ. 2005ರಲ್ಲಿ ಉಷಾ ಕಿರಣ ಕನ್ನಡ ದಿನಪತ್ರಿಕೆ ವರದಿಗಾರರಾಗಿ 2 ವರ್ಷ ಕಾರ್ಯ ನಿರ್ವಹಣೆ. ಹೊಸದಿಗಂತ ಕನ್ನಡ ದಿನಪತ್ರಿಕೆಯಲ್ಲಿ ಹೊಸದುರ್ಗ ತಾಲ್ಲೂಕು ವರದಿಗಾರನಾಗಿ 4 ವರ್ಷ ಕೆಲಸ. ಸಮಗ್ರ ಜನರ ಸುದ್ದಿ ಜಿಲ್ಲಾ ವರದಿಗಾರನಾಗಿ 2 ವರ್ಷ ಕಾರ್ಯ ನಿರ್ವಹಣೆ. ಸಂಜೆವಾಣಿ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರನಾಗಿ 2 ವರ್ಷ ಕಾರ್ಯ ನಿರ್ವಹಣೆ. 2018 ರಲ್ಲಿ ವಿಐಪಿ ನ್ಯೂಸ್ ಚಾನಲ್ ಹಾಗೂ ಸರಳ ಜೀವನ ನ್ಯೂಸ್ ಚಾನೆಲ್, ಟಿವಿ 1 ಚಾನೆಲ್ ಕಾರ್ಯನಿರ್ವಹಣೆ. 2019ರಲ್ಲಿ ನ್ಯೂಸ್ ಎಕ್ಸ್ ಕನ್ನಡ ವಾಹಿನಿಯಲ್ಲಿ ಕಾರ್ಯನಿರ್ವಹಣೆ. ಪ್ರಸ್ತುತ ಇಬ್ಬನಿ ಸೂರ್ಯ ಕನ್ನಡ ದಿನಪತ್ರಿಕೆ ಸಂಪಾದಕರಾಗಿ 4 ವರ್ಷದಿಂದ ಕಾರ್ಯರ್ನಿಹಣೆ ಹಾಗೂ ಸಾಕ್ಷಿ ತೆಲಗು ದಿನಪತ್ರಿಕೆಯಲ್ಲಿ ವರದಿಗಾರರು ಮತ್ತು ವಿಜಯ ಕರ್ನಾಟಕ ನಮ್ಮ ಚಿತ್ರದುರ್ಗ ಸ್ಥಳೀಯ ಆವೃತ್ತಿಯ ಓದುಗರ ಬರಹ ಅಂಕಣಕ್ಕೆ ಲೇಖನಗಳ ಕಳಿಸುವುದು ಸೇರಿದಂತೆ ಹವ್ಯಾಸಿ ಬರಹಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ 2022ರಲ್ಲಿ ಆಯ್ಕೆ. ನೂತನ ಜಿಲ್ಲಾ ಸಮಿತಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಪತ್ರಕರ್ತರ ಸಂಘದ (Media Academy Award) ಇತಿಹಾಸದಲ್ಲಿ ಮೊದಲ ಬಾರಿಗೆ ಸಂಘದ ಅಡಿಯಲ್ಲಿ ಕ್ಷೇಮನಿಧಿ ಸ್ಥಾಪನೆ ಮಾಡಲಾಯಿತು.
ಪತ್ರಕರ್ತರು ಹಾಗೂ ಕುಟುಂಬದ ಸದಸ್ಯರಿಗೆ ಹೃದಯ ತಪಾಸಣೆ, ಆರೋಗ್ಯ ಶಿಬಿರ ಆಯೋಜನೆ. ಕಣ್ಣಿನ ತಪಾಸಣೆ ಶಿಬಿರ ಆಯೋಜನೆ. ಸ್ವತಃ ಕ್ರಿಕೆಟ್ ಆಟಗಾರರಾಗಿದ್ದ ಇಬ್ಬರು ಕ್ಯಾಮೆರಾಮನ್‍ಗಳ ನೆನಪಿಗಾಗಿ ವಿಭಾಗೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ.
ಕೋವಿಡ್‍ನಿಂದ ಮೃತಪಟ್ಟ ಇಬ್ಬರು ಕ್ಯಾಮೆರಾಮನ್‍ಗಳ ಕುಟುಂಬಗಳಿಗೆ ತಲಾ ರೂ.1 ಲಕ್ಷ ಆರ್ಥಿಕ ನೆರವು. ಎರಡನೇ ವರ್ಷದ ಪತ್ರಿಕಾ ದಿನಾಚರಣೆ ಯಲ್ಲಿ ನಿವೃತ್ತ ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ. ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ. ವಿಶೇಷ ಅಂದರೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತರಾದ ಪಿ.ಸಾಯಿನಾಥ್ ಕರೆಸಿದ್ದು, ಇವರ ಅವದಿಯ ಹೆಮ್ಮೆಯ ಸಾಧನೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ದಿನದಂದು ಅಂಬೇಡ್ಕರ್ ಅವರು ಕೂಡ ಪತ್ರಕರ್ತರಾಗಿದ್ದರು ಎನ್ನುವ ವಿಚಾರ ಬಿಂಬಿಸುವ ವಿಚಾರ ಸಂಕಿರಣ ಆಯೋಜನೆ. ಮತ್ತೆ ಮತ್ತೆ ಲಂಕೇಶ್ ಮೇಷ್ಟ್ರು ವಿಚಾರ ಕಾರ್ಯಕ್ರಮ. ನ್ಯಾಯಾಂಗ ನಿಂದನೆ-ಮಾನನಷ್ಟ ಮೊಕದ್ದಮೆ ಕುರಿತು ಕಾನೂನು ಸೇವಾ ಪ್ರಾಧಿಕಾರದ ಸಹಕಾರದಿಂದ ನ್ಯಾಯಾಧೀಶರು ಮತ್ತು ಹೈಕೋರ್ಟ್ ವಕೀಲರಿಂದ ಉಪನ್ಯಾಸ ಕಾರ್ಯಕ್ರಮ.
ಮೊಳಕಾಲ್ಮುರು ತಾಲ್ಲೂಕು ಘಟಕದ ಕಟ್ಟಡ ನಿರ್ಮಾಣ ಕಾರ್ಯಪ್ರಗತಿ. ಹೊಳಲ್ಕೆರೆ ತಾಲ್ಲೂಕು ಘಟಕದ ಕಾಮಗಾರಿ ಪೂರ್ಣವಾಗಿದ್ದು, ಉದ್ಘಾಟನೆ ಬಾಕಿ ಇದೆ. ಜಿಲ್ಲಾ (Media Academy Award) ಕೇಂದ್ರದಲ್ಲಿರುವ ಪತ್ರಿಕಾ ಭವನ ಕಾಮಗಾರಿ- ಶಾಸಕರ ನಿಧಿಯಿಂದ ರೂ.5 ಲಕ್ಷ ವೆಚ್ಚದಲ್ಲಿ ಪ್ರೆಸ್ ಮೀಟ್ ಹಾಲ್ ನವೀಕರಣ (ಬ್ಯಾಕ್ ಡ್ರಾಪ್ ಮತ್ತು ವಿಶೇಷ ಲೈಟಿಂಗ್, ಮುಖ್ಯ ಬಾಗಿಲು ನವೀಕರಣ ಮತ್ತು ಪೇಂಟಿಂಗ್).
ಇದನ್ನೂ ಓದಿ: Vani Vilasa Sagara | ವಿ ವಿ ಸಾಗರ ನೀರಿನ ಮಟ್ಟ | 4 ಜನವರಿ 2025
ವಿಧಾನ ಪರಿಷತ್ ಸದಸ್ಯರ ನಿಧಿ ರೂ.5 ಲಕ್ಷ ವೆಚ್ಚದಲ್ಲಿ ವಾರಂಡ ಶೀಟ್ ನವೀಕರಣ ಮಳೆಬಂದಾಗ ಸೋರುವುದಕ್ಕೆ ರಕ್ಷಣೆ ಕೆಳಗಡೆ ಮುಖ್ಯದ್ವಾರ ಮುಂಭಾಗದಲ್ಲಿ ಅಭಿವೃದ್ಧಿ ಕಾರ್ಯಪ್ರಗತಿ. ದಾನಿಗಳಿಂದ ಪ್ರೆಸ್‍ಮೀಟ್ ಹಾಲ್ ಮೇಲುಗಡೆ ವಿಶೇಷ (Media Academy Award) ಆಸನಗಳು, ಹಾಲ್‍ನಲ್ಲಿ ಕುರ್ಚಿಗಳ ವ್ಯವಸ್ಥೆ. ನಿರಂತರವಾಗಿ ಪತ್ರಕರ್ತರಿಗೆ ಸೆಮಿನಾರ್ ಆಯೋಜನೆ. ಪತ್ರಕರ್ತರ ವೃತ್ತಿ ಉಪಯೋಗಕ್ಕೆ ವೈಪೈ (ಅಂತರ್ಜಾಲ) ಸೌಲಭ್ಯ ಹಾಗೂ ಪತ್ರಿಕಾ ಭವನಕ್ಕಾಗಿ ಹೊಸ ಕೊಳವೆಭಾವಿ ಕೊರೆಸುವ ಮೂಲಕ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಕಾರ್ಯ ಕೈಗೊಳ್ಳಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252