
Chitradurga news|nammajana.com|20-12-2024
ನಮ್ಮಜನ.ಕಾಂ, ಚಿತ್ರದುರ್ಗ: ವಿಜಯಪುರ ಜಿಲ್ಲೆಯಲ್ಲಿ 2025ರ ಫೆಬ್ರವರಿ 22 ಮತ್ತು 23ರಂದು ಎರಡು ದಿನಗಳ ಕಾಲ ನಡೆಯುವ 31ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಮ್ಮೇಳನದ ಅಂಗವಾಗಿ ಸಮ್ಮೇಳನದ ಪ್ರತಿನಿಧಿಗಳು (Membership registration) ಗುರುವಾರ ಜಿಲ್ಲಾಸ್ಪತ್ರೆಗೆ ಆಗಮಿಸಿ, ಸಮ್ಮೇಳನದ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ವಿಜಯಪುರ ಜಿಲ್ಲಾ ಶಾಖೆಯಿಂದ ಅನುಭಾವ-25 ಶರಣ ನಾಡಲ್ಲೊಂದು ವೈದ್ಯ ಸಂಗಮ ಎಂಬ ಶಿರ್ಷಿಕೆಯಡಿಯಲ್ಲಿ 31ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ (Membership registration) ಸಮ್ಮೇಳನವು 2025ರ ಫೆ.22 ಮತ್ತು 23ರಂದು ವಿಜಯಪುರ ನಗರದ ಸ್ಟೇಷನ್ ರೋಡ್‌ನ ಕಂದಗಲ್ ಶ್ರೀ ಹನುಮಂತರಾಯ ರಂಗಮAದಿರದಲ್ಲಿ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದ ಪೂರ್ವಭಾವಿಯಾಗಿ ಜಿಲ್ಲೆಯ ಸರ್ಕಾರಿ ವೈದ್ಯಾಧಿಕಾರಿಗಳ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲಾಯಿತು.

ಇದನ್ನೂ ಓದಿ: ವಾಣಿ ವಿಲಾಸ ಸಾಗರ ಜಲಾಶಕ್ಕೆ 693 ಕ್ಯೂಸೆಕ್ಸ್ ನೀರು | ಭರ್ತಿಗೆ ದಿನಗಣನೆ | Vani Vilasa Sagara Dam
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಆನಂದ ಪ್ರಕಾಶ್ ಸೇರಿದಂತೆ ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ್, ಡಾ.ದೇವರಾಜ್, ಡಾ.ವಿಜಯ್ ಕುಮಾರ್, ವಿಜಯಪುರದ ಡಾ.ಆಕಿಬ್, ಡಾ.ಸಂಗಮೇಶ್, (Membership registration) ಡಾ.ಮಂಜುನಾಥ್ ಇದ್ದರು
