ನಮ್ಮಜನ.ಕಾಂ, ಚಿತ್ರದುರ್ಗ: ವಾಲ್ಮೀಕಿ ನಿಗಮ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಗೆ ಸಚಿವ ನಾಗೇಂದ್ರ (Minister B Nagendra) ಅವರು ಕಾರಣರಲ್ಲ, ಬಿಜೆಪಿ ಕುತಂತ್ರದಿಂದ ರಾಜಕೀಯ ಷಡ್ಯಂತ್ರ ಮಾಡಿ ಇವರ ರಾಜೀನಾಮೆ ಕೇಳುತ್ತಿದ್ದಾರೆ, ಯಾವುದೇ ಕಾರಣಕ್ಕೂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಾರದೆಂದು ಕರ್ನಾಟಕ ದ್ರಾಕ್ಷರಸ ಮಂಡಳಿಯ ಅಧ್ಯಕ್ಷ ಡಾ.ಬಿ.ಯೋಗಿಶ್ ಬಾಬು ಒತ್ತಾಯಿಸಿ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಆಧಿಕಾರಿ ಚಂದ್ರಶೇಖರ್ ತಮ್ಮ ಡೆತ್‌ನೋಟ್ ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ.
ನನ್ನ ಸಾವಿಗೆ ನನ್ನ ಮೇಲಿನ ಅಧಿಕಾರಿಗಳು ಕಾರಣರಾಗಿದ್ದಾರೆ. ಇದರಲ್ಲಿ ಸಚಿವ ನಾಗೇಂದ್ರ (Minister B Nagendra) ಅವರ ಪಾತ್ರ ಇಲ್ಲ ಎಂದು ತಿಳಿಸಿದ್ದರು ಸಹಾ ಬಿಜೆಪಿಗರು ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿರುವುದು ಸರಿಯಲ್ಲ ಎಂದರು.
ಬಿಜೆಪ ರಾಜ್ಯಾಧ್ಯಕ್ಷ ಬಿ.ವೈ.ವಿಜೇಯೇಂದ್ರ ಸಹ ರಾಜೀನಾಮೆಗೆ ಆಗ್ರಹಿಸಿದ್ದು ಈ ಪ್ರಕರಣರಲ್ಲಿ ಸಚಿವರ ಪಾತ್ರ ಏನು ಇಲ್ಲ ಎಂದು ಸ್ಪಷ್ಟವಾಗಿರುವಾಗ ಬಿಜೆಪಿ ರಾಜಕೀಯ ಷಡ್ಯಂತ್ರದಿಂದ ಸಚಿವರ ರಾಜೀನಾಮೆ ಕೇಳುತ್ತಿರುವುದು ದುರಾದೃಷ್ಟಕರವಾಗಿದೆ.
ಈ ಪ್ರಕರಣದಲ್ಲಿ ಸಂಬಂಧಿಸಿದವರ ವಿರುದ್ಧ ಮತ್ತು ಮಂಡಳಿಯ ಅಧಿಕಾರಿಗಳನ್ನು ಸರ್ಕಾರ ಈಗಾಗಲೇ ಅಮಾನತ್ತು ಮಾಡಿದೆ. ಅಲ್ಲದೆ ನಿಗಮದಿಂದ ಹೋದ ಹಣವನ್ನು ಸಹಾ ವಾಪಾಸ್ಸು ಮಾಡಲು ಸೂಚನೆಯನ್ನು ಸಹ ನೀಡಲಾಗಿದ್ದು ಇಷ್ಠಾದರೂ ಸಹಾ ಬಿಜೆಪಿ ಸಚಿವ ನಾಗೇಂದ್ರ (Minister B Nagendra) ರಾಜೀನಾಮೆಯನ್ನು ಕೇಳುತ್ತಿರುವುದು ರಾಜಕೀಯ ದೃಷ್ಟಿಯಿಂದ ಮಾತ್ರವಾಗಿದೆ.
ನಾಗೇಂದ್ರ (Minister B Nagendra) ಅವರು ನಮ್ಮ ನಾಯಕ ಜನಾಂಗದಲ್ಲಿ ಯುವ ನಾಯಕರಾಗಿದ್ದರೆ. ಇವರು ತಮ್ಮ ಇಲಾಖೆಯಲ್ಲಿ ಯಾವುದೇ ರೀತಿಯ ಕಳಂಕ ಇಲ್ಲದೆ ನಡೆಸುತ್ತಿದ್ದಾರೆ. ಇದು ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಆದ ಪ್ರಕರಣವಾಗಿದೆ.
ಈ ಹಿನ್ನಲೆಯಲ್ಲಿ ಸರ್ಕಾರವೂ ಸಹಾ ಇದರ ಬಗ್ಗೆ ತನಿಖೆಯನ್ನು ನಡೆಸಲು ಸೂಚನೆಯನ್ನು ನೀಡಿದೆ ತನಿಖಾ ವರದಿ ಬರುವವರೆಗೂ ಸಹಾ ಬಿಜೆಪಿಗೆ ತಾಳ್ಮೆ ಇಲ್ಲವಾಗಿದೆ ಎಂದು ದೂರಿದರು.
ಇದನ್ನೂ ಓದಿ: Hiriyur Ispeet attack: ಇಸ್ಪೀಟ್ ಅಡ್ಡೆ ಮೇಲೆ ದಾಳಿ 6 ಜನರ ಬಂಧನ
ಈ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಶಿಕ್ಷೆಯನ್ನು ಕೊಡಿ ಎಂದಿದ್ದಾರೆ ಹೊರತು ಸಚಿವರ ರಾಜೀನಾಮೆಯನ್ನು ಕೇಳಿಲ್ಲ. ಚಂದ್ರಶೇಖರ್ ಆತ್ಮಹತ್ಯೆಗೆ ಸರ್ಕಾರ ಮತ್ತು ಸಚಿವರು ಸಾಂತ್ವಾನ ಹೇಳಿದ್ದಾರೆ. ಬಿಜೆಪಿ ಸಚಿವ ನಾಗೇಂದ್ರ (Minister B Nagendra) ಅವರ ರಾಜೀನಾಮೆಗೆ ಮುಂದುವರೆದರೆ ನಮ್ಮ ಜನಾಂಗ ಮತ್ತು ಪಕ್ಷದ ವತಿಯಿಂದ ರಾಜೀನಾಮೆ ನೀಡಬೇಡಿ ಎಂದು ನಾವು ಸಹಾ ಹೋರಾಟವನ್ನು ಮಾಡಲಾಗುವುದು ಎಂದು ಯೋಗೀಶ್ ಬಾಬು ಬಿಜೆಪಿಗೆ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಬಾಲಕೃಷ್ಣ ಯಾದವ್, ಮಧುಪಾಲೇ ಗೌಡ, ಜಯ್ಯಣ್ಣ, ಮಂಜುನಾಥ್, ಪ್ರಶಾಂತ್,ಬಚ್ಚಪ್ಪರನಹಟ್ಟಿ ಬಸವರಾಜ್, ಸುನೀಲ್, ಸಂದೀಪ್ ಇದ್ದರು