Chitradurga news|Nammajana.com|2-9-2025
ನಮ್ಮಜನ.ಕಾಂ, ಚಳ್ಳಕೆರೆ: ಚಿತ್ರದುರ್ಗ ಕ್ಷೇತ್ರದ ಶಾಸಕ (ಚಿತ್ರದುರ್ಗ MLA) ಕೆ.ಸಿ.ವೀರೇಂದ್ರ(ಪಪ್ಪಿ) ಕ್ಯಾಸಿನೊ, ಆನ್‌ಲೈನ್ ಗೇಮ್, ಬೆಟ್ಟಿಂಗ್ ಗೇಮ್‌ನಲ್ಲಿ ಕಳೆದ ೨೨ರಂದು ಇಡಿ ಅಧಿಕಾರಿಗಳ ದಾಳಿ ನಡೆಸಿ, ಶಾಸಕರು ಇನ್ನೂ ಕಸ್ಟಡಿಯಲ್ಲಿ ಇರುವಾಗಲೇ ಚಳ್ಳಕೆರೆ ನಗರದ ಅವರ ಮನೆಗೆ ಮತ್ತೊಮ್ಮೆ ಇಡಿ ಅಧಿಕಾರಿಗಳು ದಾಳಿ ನಡೆಸಿ ತಲಾಶ್ ನಡೆಸಿದ್ಧಾರೆ.

ಸೆ.2 ರ ಮಂಗಳವಾರ ಮಧ್ಯಾಹ್ನ ಇಡಿ ಅಧಿಕಾರಿಗಳ ತಂಡ ಇಲ್ಲಿನ ಹಳೇಟೌನಲ್ಲಿರುವ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಮನೆಗೆ ಎಂಟು ತಂಡಗಳು ಭೇಟಿ ನೀಡಿ ಪರಿಶೀಲನೆ ಮುಂದುವರೆಸಿದ್ಧಾರೆ.
ಶಾಸಕರಿಗೆ ಸೇರಿದ ನಾಲ್ಕು ಕಾರುಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವುಗಳನ್ನು ಬೆಂಗಳೂರಿನ ಕಾರ್ಯಾಲಯಕ್ಕೆ (ಚಿತ್ರದುರ್ಗ MLA) ತೆಗೆದುಕೊಂಡು ಹೋಗಲು ಸಿದ್ದತೆ ನಡೆಸಿದ್ಧಾರೆ.
ಮಂಗಳವಾರವೂ ಸಹ ಅವರ ಮನೆಯಲ್ಲಿ ಕೆಲವೊಂದು ದಾಖಲಾತಿಯ ಬಗ್ಗೆ ಮಾಹಿತಿ ಪಡೆದರಲ್ಲದೆ, ಇತರೆ ಖಾಸಗಿ ವಾಣಿಜ್ಯ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಖಾತೆಗಳ ಪರಿಶೀಲನೆ ಮುಂದುವರೆಸಿದ್ಧಾರೆ.
ಇದನ್ನೂ ಓದಿ: HIRIYUR : ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ
ಕೇವಲ ೧೦ದಿನದ ಅವಧಿಯಲ್ಲಿ ಮತ್ತೆ ಇಡಿ ಅಧಿಕಾರಿಗಳ ತಂಡ ಕೆ.ಸಿ.ವೀರೇಂದ್ರ(ಪಪ್ಪಿ)ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿರುವುದು ಸಾರ್ವಜನಿಕರಲ್ಲಿ ಕುತೂಹಲವನ್ನು ಹುಟ್ಟುಹಾಕಿದ್ದು, ಕೆ.ಸಿ.ವೀರೇಂದ್ರ(ಪಪ್ಪಿ) (ಚಿತ್ರದುರ್ಗ MLA) ಬಿಡುಗಡೆಯಾಗುತ್ತಾರೆಂದು ಬಾವಿಸಿದ್ದ ಜನರಿಗೆ ಇಡಿ ಅಧಿಕಾರಿಗಳ ಕ್ಷಿಪ್ರ ಕಾರ್ಯಚರಣೆ ಶಾಕ್ ನೀಡಿದೆ.
