Chitradurga news|nammajana.com|20-8-2024
ನಮ್ಮಜನ.ಕಾಂ, ಚಳ್ಳಕೆರೆ: ನಾಡಿನ ಬಡ ಕುಟುಂಬಗಳ ಕಲ್ಯಾಣಕ್ಕಾಗಿ ಸರ್ಕಾರ ನೀಡಿದ ಐದು ಪ್ರಮುಖ ಗ್ಯಾರಂಟಿಗಳ ಅನುಷ್ಠಾನದ ಮೂಲಕ ಬಡ ಜನತೆಯ ಬದುಕನ್ನು ಹಸನುಗೊಳಿಸಲು ಸರ್ಕಾರ ಕಳೆದ ೧೫ ತಿಂಗಳಿನಿಂದ (MLA T. Raghumurthy) ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದೆ. ತಾಲ್ಲೂಕಿನಲ್ಲಿ ಈ ಯೋಜನೆಯ ಗುಣಾತ್ಮಕ ಅನುಷ್ಠಾನಕ್ಕಾಗಿ ಸಮಿತಿ ಜಾರಿಗೆ ತಂದಿದ್ದು ಐದು ಗ್ಯಾರಂಟಿ ಯೋಜನೆಗಳು ಜನರ ಅಭ್ಯುದಯಕ್ಕೆ ಪ್ರೇರಣಾ ಶಕ್ತಿಯಾಗಿವೆ ಎಂದು ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಸೋಮವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ (MLA T. Raghumurthy) ಅನುಷ್ಠಾನ ಸಮಿತಿಯ ಮೊಟ್ಟಮೊದಲ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ (MLA T. Raghumurthy) ಮಹಿಳೆಯರಿಗೆ ಶಕ್ತಿಯೋಜನೆಯ ಮೂಲಕ ಉಚಿತ ಪ್ರಯಾಣ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳ ಪ್ರಗತಿಯ ಪರಿಶೀಲನೆ ನಡೆಸಿದರು.
ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಗದ್ದಿಗೆ ತಿಪ್ಪೇಸ್ವಾಮಿ, ಎಚ್.ಆಂಜನೇಯ, ಕವಿತಾ, ಪುರುಷೋತ್ತಮನಾಯ್ಕ, ಎಸ್.ಮುಜೀಬುಲ್ಲಾ, (MLA T. Raghumurthy) ಹನುಮಂತರೆಡ್ಡಿ, ಅನಿಲ್‌ಕುಮಾರ್, ನಾಗೇಶ್, ಉಮೇಶ್, ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ಆರ್.ಬಸಪ್ಪ, ಜನಾರ್ಥನ ಇವರನ್ನು ಸನ್ಮಾನಿಸಿದರು.
ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಶಿಧರ, ರಾಜ್ಯ ಸರ್ಕಾರ ಮಹತ್ವಕಾಂಕ್ಷಿ ಯೋಜನೆಯಾದ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಸಮಿತಿ ರಚಿಸಿದ್ದು, ಪ್ರತಿತಿಂಗಳು ಎರಡು ಬಾರಿ ಸಮಿತಿ ಸಭೆ ನಡೆಸಿ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಪ್ರಾರಂಭದಲ್ಲಿ ಬೆಸ್ಕಾಂ ಇಲಾಖೆ ಬಗ್ಗೆ ಮಾಹಿತಿ ನೀಡಿದ ಎಇಇ ಜಿ.ಶಿವಪ್ರಸಾದ್, ಚಳ್ಳಕೆರೆ ವಿಭಾಗದಲ್ಲಿ ೫೨೫೯೭ ಫಲಾನುಭವಿಗಳ ಸಂಪರ್ಕ ಕಲ್ಪಿಸಬೇಕಿದ್ದು, ೪೫೧೮೯೯ ಜನರಿಗೆ ಈ ಯೋಜನೆ ದೊರಕಿದೆ.
ನಗರ ಪ್ರದೇಶದಲ್ಲಿ ೨೦೦ ಯೂನಿಟ್ ವಿದ್ಯುತ್ ಬಳಸುವವರ ಮಾಹಿತಿಯನ್ನು ಸಂಗ್ರಹಿಸಿ ನೀಡಲಾಗುವುದು ಎಂದರು. ತಳಕು ಅಧಿಕಾರಿ ಮಮತ ಮಾಹಿತಿ ನೀಡಿ, ೨೬೧೦೧ ಗುರಿ ಇದ್ದು (MLA T. Raghumurthy) ೨೪೪೪೪ ಫಲಾನುಭವಿಗಳು ಗೃಹಜ್ಯೋತಿಯೋಜನೆ ಕಲ್ಪಿಸಿದೆ ಎಂದರು.
ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಪ್ರಭು ಮಾಹಿತಿ ನೀಡಿ, ಕಳೆದ ಜೂನ್‌ನಿಂದ ಆಗಸ್ಟ್ ೧೩ವರೆಗೂ ೪.೭೮ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸಿ ಒಟ್ಟು ೧೯.೨೭ ಕೋಟಿ ಆದಾಯ ಲಭಿಸಿದೆ ಎಂದರು. ಮುಂದಿನ ದಿನಗಳಲ್ಲಿ ಚಳ್ಳಕೆರೆ ಘಟಕದಿಂದ ಹೊಸ ಮಾರ್ಗಗಳಲ್ಲಿ ೮ ಬಸ್‌ಗಳನ್ನು ಸಮರ್ಪಿಸಲಾಗುವುದು ಎಂದರು.
ಯುವ ನಿಧಿ ಅಧಿಕಾರಿ ಮಾಹಿತಿ ನೀಡಿ, ತಾಲ್ಲೂಕಿನಾದ್ಯಂತ ಒಟ್ಟು ೧೮೩೫ ಫಲಾನುಭವಿಗಳು ನೊಂದಾವಣೆ ಮಾಡಿದ್ದು ೫೫ ಲಕ್ಷ ಹಣವನ್ನು ವಿತರಣೆ ಮಾಡಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಹರಿಪ್ರಸಾದ್ ಮಾಹಿತಿ ನೀಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ೫೪೦೧೯ ಫಲಾನುಭವಿಗಳು ನೊಂದಾವಣೆಯಾಗಿದ್ದು, ೫೩೫೯೦ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯಡಿ ಸೌಲಭ್ಯ ಕಲ್ಪಿಸಿದೆ ಎಂದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಶ್ರೀನಿವಾಸ್ ಮಾಹಿತಿ ನೀಡಿ, ನೂತನ ಪಡಿತರಚೀಟಿ ನೀಡಲು ಆರ್ಜಿ ಆಹ್ವಾನಿಸಿದ್ದು ಎರಡು ಸಾವಿರ ಅರ್ಜಿಗಳು ಆನ್‌ಲೈನ್ ಮೂಲಕ ಬಂದಿವೆ ಎಂದರು.
ಕೃಷಿ ಅಧಿಕಾರಿ ಜೆ.ಅಶೋಕ್ ಮಾಹಿತಿ ನೀಡಿ, ವಾಡಿಕೆಮಳೆಗಿಂತ ಹೆಚ್ಚು ಮಳೆಯಾಗಿದ್ದು, ಈಗಷ್ಟೇ ಬಿತ್ತನೆ ಕಾರ್ಯ (MLA T. Raghumurthy) ಆರಂಭವಾಗಿದೆ. ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ, ರಾಗಿ ಮುಂತಾದ ಬೆಳೆಗಳ ಬಿತ್ತನೆ ಕಾರ್ಯ ಆರಂಭವಾಗಿದೆ.
ಇದನ್ನೂ ಓದಿ: ಆಗಸ್ಟ್ 23ರಂದು ನೇರ ನೇಮಕಾತಿ ಸಂದರ್ಶನ | ಸಂದರ್ಶನಕ್ಕೆ ದಾಖಲೆ ಏನೆಲ್ಲ ತರ್ಬೇಕು ನೋಡಿ | Chitradurga Job
ತಾಲ್ಲೂಕಿನಾದ್ಯಂತ ಒಟ್ಟು ೧೩ಸಾವಿರ ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ದಾಸ್ತಾನು ಮಾಡಿದ್ದು ಆಪೈಕಿ ೧೧೨೦೦ ಕ್ವಿಂಟಾಲ್ ಶೇಂಗಾ (MLA T. Raghumurthy) ಬಿತ್ತನೆ ಬೀಜ ಈಗಾಗಲೇ ವಿತರಣೆ ಮಾಡಿದೆ ಎಂದರು.
ಗ್ರಾಮೀಣಾಭಿವೃದ್ದಿ ಮತ್ತು ಕುಡಿಯುವ ನೀರು ವಿಭಾಗದ ಅಧಿಕಾರಿ ಮಾಹಿತಿ ನೀಡಿ, ತಾಲ್ಲೂಕಿನಾದ್ಯಂತ ಜೆಜೆಎಂ ಕಾಗಮಾರಿ ಪ್ರಗತಿಯಲ್ಲಿದೆ. ಯಾವಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆ ಇಲ್ಲವೆಂದರು.