Chitradurga news | nammajana.com | 18-5-2024
ನಮ್ಮಜನ.ಕಾಂ, ಚಳ್ಳಕೆರೆ: ಜನಪರ ಆಡಳಿತದ ಮೂಲಕ ಕಾಂಗ್ರೆಸ್ (congress) ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು ಜಾರಿಯಾಗಲು ಮೇಲ್ಮನವಿಯಲ್ಲಿ ಪಕ್ಷದ ಬಹುಮತ ಇರಬೇಕು ಎಂದು ಶಾಸಕ ಟಿ. ರಘುಮೂರ್ತಿ (T. Raghumurthy) ಹೇಳಿದರು.
ಚಳ್ಳಕೆರೆ ನಗರದ ಗೊಲ್ಲರ ಹಾಸ್ಟೆಲ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಕಾಂಗ್ರೆಸ್ ಬೆಂಬಲಿಸಿ: ರಘುಮೂರ್ತಿ (T. Raghumurthy)ಕರೆ
ಶಿಕ್ಷಕರ ಬೇಡಿಕೆಯಂತೆ ಒಪಿಎಸ್ ಜಾರಿ ಮಾಡಲು ಮತ್ತು 7ನೇ ವೇತನ ಆಯೋಗದ ಸಿದ್ದತೆ ಸರ್ಕಾರದ ಚಿಂತನೆಯಾಗಿದೆ. ಸಮಾಜದ ಸಮಗ್ರ ಬೆಳವಣಿಗೆಗೆ ಶಿಕ್ಷಣ ವಲಯ ಅಭಿವೃದ್ದಿಯಾಗಬೇಕಿದೆ.
ಶೈಕ್ಷಣಿಕ ಕಾರ್ಯಕ್ರಮಗಳಾಗಿ ಬಿಸಿಯೂಟ, ಶೂ ಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ವಿದ್ಯಾರ್ಥಿಗಳ ಶಿಕ್ಷಣ ಪ್ರಗತಿ ಮತ್ತು ದಾಖಲಾತಿ ಹೆಚ್ಚಳಕ್ಕೆ ಅನೇಕ ಯೋಜನೆಗಳನ್ನು ಜಾರಿ ಮಾಡಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ.
ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ನಮ್ಮ ಪಕ್ಷದ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ (DT Srinivas)ಬೆಂಬಲಿಸಿ ಮತದಾನ ಮಾಡಿದರೇ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರವಾಗಲಿದ್ದು ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರದಿಂದ ಶಿಕ್ಷಕರಿಗೆ ನ್ಯಾಯ ಸಿಗಲಿಲ್ಲ: ಪೂರ್ಣಿಮಾ ಶ್ರೀನಿವಾಸ್ ವಾಗ್ದಾಳಿ
ಮಾಜಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ ಎನ್‌ಪಿಎಸ್ ರದ್ದು ಮಾಡಬೇಕೆಂದು ಫ್ರೀಡಮ್ ಪಾರ್ಕ್ ನಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು ಸಹ ಕಳೆದ ಬಿಜೆಪಿ ಸರ್ಕಾರದಲ್ಲಿ ನ್ಯಾಯ ಸಿಗಲಿಲ್ಲ.
ಬಿಜೆಪಿ ಸರ್ಕಾರ ಶಿಕ್ಷಕರ ಪ್ರತಿಭಟನೆ ಸ್ಥಳಕ್ಕೂ ಸಹ ಬಂದು ತಿರುಗಿ ನೋಡುವ ಸೌಜನ್ಯ ಸಹ ತೋರಲಿಲ್ಲ. ಆದರೆ ಈಗ ಶಿಕ್ಷಕರ ಮತ ಕೇಳಲು ಮುಂದಾಗಿದೆ,
ಎನ್‌ಪಿಎಸ್ ರದ್ದುಪಡಿಸಲು ಮತ್ತು 7ನೇ ವೇತನ ಜಾರಿ ಮಾಡಲು 2ನೇ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರು ಸಿದ್ದತೆ ಮಾಡಿಕೊಂಡಿದ್ದಾರೆ ಎಂದರು.
ಶಿಕ್ಷಣ ವ್ಯವಸ್ಥೆಯನ್ನು ಸಮಾನವಾಗಿ ಕಾಣಬೇಕಿದೆ. ಕಳೆದ ಬಿಜೆಪಿ ಸರ್ಕಾರ ಮಕ್ಕಳಿಗೆ ಮೊಟ್ಟೆ ನೀಡುವಲ್ಲಿ ಜಾತಿ, ವರ್ಗ, ಬೇಧ ಮಾಡಲಾಯಿತು. ಸಾಮಾಜಿಕ ನ್ಯಾಯಬದ್ದತೆಯಲ್ಲಿ ಆಡಳಿತ ಮಾಡುವ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು. ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಡಿ.ಟಿ. ಶ್ರೀನಿವಾಸ್
ಸ್ಪರ್ಧಿಸಲು ಅವಕಾಶವಾಗಿದೆ. ಮತದಾನ ಗೆಲ್ಲಿಸಬೇಕು ಎಂದರು.
ಸ್ಪರ್ಧಿಸಲು ಅವಕಾಶವಾಗಿದೆ. ಮತದಾನ ಗೆಲ್ಲಿಸಬೇಕು ಎಂದರು.
ಸಭೆಯಲ್ಲಿ ಪಾಲ್ಗೊಂಡ ಮುಖಂಡರು
ಈ ಸಭೆಯಲ್ಲಿ ಕೆಪಿಸಸಿ ಪ್ರಧಾನ ಕಾರ್ಯದರ್ಶಿ ನೆರ‍್ಲಗುಂಟೆ ರಾಮಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾ ರವಿಕುಮಾರ್ ಬಾಲರಾಜ್, ಟಿ. ಶಶಿಕಲಾ ಸುರೇಶ್‌ಬಾಬು, ಸದಸ್ಯ ಜಿ.ಟಿ. ಬಾಬುರೆಡ್ಡಿ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿಟಿ.ಶಶಿಧರ, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ವೀರಭದ್ರಯ್ಯ, ನಿವೃತ್ತಿ ಪ್ರಾಂಶುಪಾಲ ಬಿ.ವಿ.ಸಿರಿಯಣ್ಣ,
ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಟಿ. ವೀರಭದ್ರಸ್ವಾಮಿ, ಎಲ್.ರುದ್ರಮುನಿ, ದೊಡ್ಡಯ್ಯ, ಸೂರನಾಯಕ,, ಗುರುಲಿಂಗಪ್ಪ, ಸಿ.ಟಿ.ವೀರೇಶ್, ಇಂಡಸ್ ವ್ಯಾಲಿ ಚಿಕ್ಕಣ್ಣ, ಮಾರುತಿ, ಅನ್ವರ್, ಮಾಸ್ಟರ ಬಿ.ವಿ. ಸಿರಿಯಪ್ಪ, ಬ್ಯಾಂಕ್ ಸೂರಯ್ಯ, ಮೂಡಲಗಿರಿಪ್ಪ, ಪ್ರಭುಸ್ವಾಮಿ, ತಿಪ್ಪೇರುದ್ರಪ್ಪ, ಸಿದ್ದಲಿಂಗಪ್ಪ ಮತ್ತಿತರರು ಇದ್ದರು.