Chitradurga news|Nammajana.com |7-8-2025
ವರದಿ:-ಎಚ್ ಮಹಾಂತೇಶ್ ರಾಯಾಪುರ
ನಮ್ಮಜನ.ಕಾಂ, ಮೊಳಕಾಲ್ಮುರು: ಕಾಂಗ್ರೆಸ್ ಪಕ್ಷದ ಹಿರಿಯ (Molakalmuru) ಶಾಸಕ ಎನ್ ವೈ ಗೋಪಾಲಕೃಷ್ಣ ಅವರ ವಿರುದ್ಧ ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಕೆ.ಜೆ ಜಯಲಕ್ಷ್ಮಿ ವಿರುದ್ಧ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ ಸೌಮ್ಯರೆಡ್ಡಿಯವರಿಗೆ ದೂರು ನೀಡಿದ್ದಾರೆ.

ಶಾಸಕ ಗೋಪಾಲಕೃಷ್ಣ ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ
ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಎನ್ ವೈ ಗೋಪಾಲಕೃಷ್ಣ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿ ಎಂದು ಗುರ್ಥಿಸಿಕೊಂಡಿದ್ದಾರೆ. ಶಾಸಕರ ಆಡಳಿತದ ಬಗ್ಗೆ (Molakalmuru) ರಾಜಕೀಯವಾಗಿ ಪ್ರಶ್ನೆ ಮಾಡಲಿ!ಅದು ಬಿಟ್ಟು ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿರುವುದು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ನೋವು ತಂದಿದೆ,ಹೀಗಾಗಿ ಇವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ಮುಖಂಡರು ಮನವಿ ಮಾಡಿದರು.
ಜಯಲಕ್ಷ್ಮಿ ವಿರುದ್ಧ ಸೌಮ್ಯರೆಡ್ಡಿ ಕಿಡಿ
ಕಾಂಗ್ರೆಸ್ ಪಕ್ಷದ ಮುಖಂಡರ ಮಾತಿಗೆ ಧ್ವನಿಗೂಡಿಸಿದ ಸೌಮ್ಯ ರೆಡ್ಡಿ ಮಾತನಾಡಿ, ನಮ್ಮ ಪಕ್ಷದ ಹಿರಿಯ ಶಾಸಕ ಎನ್ ವೈ ಗೋಪಾಲಕೃಷ್ಣ ಅವರನ್ನು ನಿಂದಿಸಿರುವುದು ನನಗೂ ಕೂಡ ತುಂಬಾ ನೋವು ತಂದಿದೆ,ಶಾಸಕರ ಹಿರಿತನಕ್ಕೆ ಬೆಲೆ ಕೊಡದೇ, ಪಕ್ಷಕ್ಕೆ ಮುಜುಗರ ಉಂಟು ಮಾಡುವ ಜಯಲಕ್ಷ್ಮಿ ಅವರ (Molakalmuru) ವರ್ತನೆಯನ್ನು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ.
ಪಕ್ಷದ ಚೌಕಟ್ಟಿನಲ್ಲಿ ಶಿಸ್ತು ಕ್ರಮ ಕೈಗೊಳ್ಳುತ್ತೇನೆ, ಹಿರಿಯ ಶಾಸಕರ ಬಗ್ಗೆ ಹೀಗೆ ಹಗುರವಾಗಿ ಮಾತನಾಡುವುದು ತರವಲ್ಲ, ಕ್ಷೇತ್ರದಲ್ಲಾಗುವ ರಾಜಕೀಯ ಬದಲಾವಣೆಗಳ ಬಗ್ಗೆ ನನಗೆ ಫೋನ್ ಮಾಡಿ ಇಲ್ಲವೇ ಮೆಸೇಜ್ ಮಾಡಿ ಅದು ಬಿಟ್ಟು ಅಷ್ಟು ದೂರದಿಂದ ಮೆಂಟಲ್ ಕೇಸ್ ಬಗ್ಗೆ ದೂರು ನೀಡಲು ಬರುವುದು ಬೇಡ, ಶಾಸಕ ಎನ್ ವೈ ಗೋಪಾಲಕೃಷ್ಣ ಅವರ ಬಗ್ಗೆ ಅವರ ಹಿರಿತನ ಮತ್ತು ಇಡೀ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ರಾಜಕೀಯ ಮಾಡಿ ಪ್ರಾಮಾಣಿಕವಾದ ವ್ಯಕ್ತಿ ಎನಿಸಿಕೊಂಡಿದ್ದಾರೆ ಇಂತಹ ಹಿರಿಯ ಶಾಸಕರನ್ನು ಹಗುರವಾಗಿ ಮಾತನಾಡಿರುವುದು ಸರಿಯಲ್ಲ, ಈಗಲೇ ಪಕ್ಷದಿಂದ ಅವರನ್ನು ಉಚ್ಚಟನೆ ಮಾಡುವೆ,ಜಯಲಕ್ಷ್ಮಿ ಅವರಿಗೆ ಸದ್ಯಕ್ಕಿಗ ಯಾವುದೇ ಸ್ಥಾನಮಾನಗಳು ಇಲ್ಲ, ನಾನು ರಾಜ್ಯಾಧ್ಯಕ್ಷರಾಗಿ ಬಂದ ತಕ್ಷಣವೇ ಮಹಿಳಾ ವಿಭಾಗದಲ್ಲಿ ಎರಡು ಹುದ್ದೆಗಳನ್ನು ಹೊರತುಪಡಿಸಿ ಇನ್ನಿರುವ ಎಲ್ಲಾ (Molakalmuru) ಹುದ್ದೆಗಳು ರದ್ದು ಆಗಿವೆ, ಅವರ ಬಗ್ಗೆ ಅಷ್ಟೊಂದು ಪ್ರಾಮುಖ್ಯತೆ ಕೊಡುವುದು ಬೇಡ.
ಇದನ್ನೂ ಓದಿ: Today Adike Rate: ಅಡಿಕೆ ಧಾರಣೆ | 7 ಆಗಸ್ಟ್ 2025 | ಇಂದಿನ ಅಡಿಕೆಗೆ ಎಷ್ಟಿದೆ ರೇಟ್?
ನಮಗೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಮುಖ್ಯ ನಮ್ಮದೇ ಶಾಸಕರ ಹಿರಿತನಕ್ಕೆ ಧಕ್ಕೆ ತಂದಿರುವ ಇವರನ್ನು ತಕ್ಷಣದಿಂದಲೇ ಪಕ್ಷದಿಂದ ವಜಾ ಗೊಳಿಸುವೆ, ಪಕ್ಷದ ಅಣತಿಯಂತೆ ಪಕ್ಷದ ಸದಸ್ಯತ್ವ ಮತ್ತು ಪಕ್ಷಕ್ಕಾಗಿ ದುಡಿದವರನ್ನು ಪರಿಗಣಿಸಿ ಮಾತ್ರ ಮಹಿಳಾ ವಿಭಾಗದಲ್ಲಿ ಹುದ್ದೆ ನೀಡುತ್ತೇವೆ ಎಂದರು.
ಇದನ್ನೂ ಓದಿ: Chitradurga | ಮಕ್ಕಳನ್ನು ಶಾಲೆ ಬಿಡಿಸಿ ಯೂರಿಯಾ ಗೊಬ್ಬರಕ್ಕೆ ಕ್ಯೂನಲ್ಲಿ ನಿಲ್ಲಿಸಿದ ರೈತರು
ನಮ್ಮ ಪಕ್ಷದ ಹಿರಿಯ ಶಾಸಕ ಎನ್ ವೈ ಗೋಪಾಲಕೃಷ್ಣ ಅವರನ್ನು ನಿಂದಿಸಿರುವುದು ನನಗೂ ಕೂಡ ತುಂಬಾ ನೋವು ತಂದಿದೆ,ಶಾಸಕರ ಹಿರಿತನಕ್ಕೆ ಬೆಲೆ ಕೊಡದೇ, ಪಕ್ಷಕ್ಕೆ ಮುಜುಗರ ಉಂಟು ಮಾಡುವ ಜಯಲಕ್ಷ್ಮಿ ಅವರ ವಿರುದ್ಧ ಕ್ರಮ.
ಸೌಮ್ಯ ರೆಡ್ಡಿ
ಮಾಜಿ ಶಾಸಕಿ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252