Chitradurga news|Nammajana.com|14-7-2025
ನಮ್ಮಜನ.ಕಾಂ, ಮೊಳಕಾಲ್ಮುರು: ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ರಾಜಕೀಯ ತಾರಾಕ್ಕೆರಿದ್ದು ಪಕ್ಷದ (Molakalmuru) ಒಳಮುನಿಸು ತಿಕ್ಕಾಟ ಬೀದಿಗೆ ಬಂದು ನಿಂತಿದೆ. ನಿನ್ನೆಯಷ್ಟೇ ದ್ರಾಕ್ಷಿ ರಸ ಮಂಡಳಿಯ ನಿಗಮ ಅಧ್ಯಕ್ಷ ಡಾ. ಯೋಗೇಶ್ ಬಾಬು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.ಅವರ ಹುಟ್ಟುಹಬ್ಬದ ಹಿನ್ನೆಯಲ್ಲಿ ಅವರ ಬೆಂಬಲಿಗರು ಪಟ್ಟಣದ ಮುಖ್ಯರಸ್ತೆಯಲ್ಲಿ ಸ್ಥಳೀಯ ಪಪಂನಿಂದ ಪರವಾನಿಗೆ ಪಡೆದು ಹುಟ್ಟುಹಬ್ಬದ ಶುಭ ಕೋರುವ ಫ್ಲೆಕ್ಸ್ ಹಾಕಿಸಿದ್ದರು,
ಆದ್ರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಫ್ಲೆಕ್ಸ್ ಗಳನ್ನು ಇಂದು ರಾತ್ರಿಯೇ ತೆರವುಗೊಳಿಸಿದ್ದಾರೆ, ಇದರಿಂದ ಆಕ್ರೋಶಗೊಂಡ ಡಾ.ಯೋಗೇಶ್ ಬಾಬು ತಮ್ಮ ಬೆಂಬಲಿಗರ ಸಮೇತವಾಗಿ ಆಗಮಿಸಿ ಪಟ್ಟಣ ಪಂಚಾಯಿತಿ ಮುಂದೆ ಅಹೋರಾತ್ರಿ ಧರಣಿ ನಡೆಸಿದ್ದಾರೆ. ತೆರವುಗೊಳಿಸಿದ ಫ್ಲೆಕ್ಸ್ ಗಳನ್ನು ಕಟ್ಟುವವರೆಗೆ ಬಿಡುವುದಿಲ್ಲ ಎಂದು ಹಠ ಮಾಡುತ್ತಾ ಭಾನುವಾರ ರಾತ್ರಿ 11ಗಂಟೆಗೆ ಪ್ರತಿಭಟನೆ ಮುಂದುವರೆಸಿದ್ದಾರೆ.

ಇದು ಪ್ರಜಾಪ್ರಭುತ್ವ ದೇಶ, ಕ್ಷೇತ್ರದಲ್ಲಿ ಒಬ್ಬರು ಹೇಳಿದಕ್ಷಣ ಸರ್ವಾಧಿಕಾರಿ ಧೋರಣೆಯಿಂದ ಅಧಿಕಾರಿಗಳು ಇಂತಹ ಕೆಲಸಗಳನ್ನು ಮಾಡುವುದು ತಪ್ಪು, ನಾನು ನಿಗಮ ಮಂಡಳಿ ಅಧ್ಯಕ್ಷನಾದರೂ ನನಗೆ ಯಾರೊಬ್ಬರೂ ಕೂಡ ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿಲ್ಲ, ಕ್ಷೇತ್ರದಲ್ಲಿ ಆಹ್ವಾನ ಪತ್ರಿಕೆಗಳಿಲ್ಲದೆ ಅಧಿಕಾರಿಗಳು ಕಳ್ಳತನದಲ್ಲಿ ಹೋಗಿ (Molakalmuru) ಕಾರ್ಯಕ್ರಮಗಳನ್ನು ಮುಗಿಸಿ ಬರುತ್ತಿದ್ದಾರೆ, ನಾನು ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುವುದಿಲ್ಲ ಹಾಗಂತ ನಾನು ಬಲಹೀನನಲ್ಲ ಎಂದು ಪರೋಕ್ಷವಾಗಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಕಳ್ಳನು ಅಲ್ಲ ನಕ್ಸಲೈಟ್ ಅಲ್ಲ ಕೆಲವೊಬ್ಬರ ಫ್ಲೆಕ್ಸ್ ಗಳು ಮೂರು ತಿಂಗಳು ಇರುತ್ತವೆ . ಆದರೆ ನಮ್ಮ ಫ್ಲೆಕ್ಸ್ ಗಳು ಮಾತ್ರ ಒಂದೇ ದಿನ ತೆರವುಗೊಳಿಸುತ್ತಾರೆ ನೀವು ತೆರವುಗೊಳಿಸುತ್ತಿರುವುದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಉಸ್ತುವಾರಿ ಸಚಿವರು ಇರುವಂತ ಫ್ಲೆಕ್ಸ್ ಗಳನ್ನು ಎಚ್ಚರಿಕೆ ಇರಲಿ,ಎಲ್ಲರಿಗೂ ಒಂದೇ ನ್ಯಾಯ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು, ಪಪಂ ಅಧಿಕಾರಿಗಳು ಪುನ್ಹ ತೆರವುಗೊಳಿಸಿದ್ದ ಫ್ಲೆಕ್ಸ್ ಗಳನ್ನ ಕಟ್ಟಿಸಿ ಕ್ಷಮೆ ಕೇಳಿದ ನಂತರವೇ ಡಾ. ಯೋಗೇಶ್ ಬಾಬು ಪ್ರತಿಭಟನೆಯಿಂದ ಹಿಂದೆ ಸರಿದರು.
ಇದನ್ನೂ ಓದಿ: Gold Rate | ಇಂದು ಚಿನ್ನದ ಬೆಲೆಯಲ್ಲಿ
ಒಟ್ಟಿನಲ್ಲಿ ಫ್ಲೆಕ್ಸ್ ನಲ್ಲಿ ಶಾಸಕರನ್ನು ಕಡೆಗಣಿಸಲಾಗಿದೆ ಎಂದು ದೂರುವ ಕೈ ಕಾರ್ಯಕರ್ತರು ಒಂದೆಡೆಯಾದರೆ ನಿಗಮ ಮಂಡಳಿ ಅಧ್ಯಕ್ಷರನ್ನು ಕಡೆಗಣಿಸಲಾಗಿದೆ ಎಂದು ದೂರುವ (Molakalmuru) ಗುಂಪು ಇನ್ನೊಂದೆಡೆ, ಇದರ ಮಧ್ಯೆ ಯಾವ ಸಹವಾಸವೆ ಬೇಡವೆಂದು ತಟಸ್ತವಾಗಿರುವ ಕೈ ಪಾಳೆಯದ ಕಾರ್ಯಕರ್ತರು ಮಾತ್ರ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕ್ಷೇತದಲ್ಲಿ ಶಾಸಕರು ಮತ್ತೆ ನಿಗಮ ಮಂಡಳಿ ಅಧ್ಯಕ್ಷರ ಮಧ್ಯೆ ಇರುವ ವೈಮನಸ್ಸು ಭಿನ್ನಮತ ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಲೆ ತರಿಸಿರುವುದಂತು ಸುಳ್ಳಲ್ಲ,
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252