Chitradurga news | nammajana.com | 21-8-2024
ವರದಿ: ಹೆಚ್.ಮಹಾಂತೇಶ್ ರಾಯಾಪುರ
ನಮ್ಮಜನ.ಕಾಂ, ಮೊಳಕಾಲ್ಮುರು: ವರುಣನ ಅಬ್ಬರಕ್ಕೆ ಹೊಸಕೋಟೆ ಗ್ರಾಮ ಜಲಾವೃತವಾಗಿದ್ದು,ಕಷ್ಟಪಟ್ಟು ಬೆಳದ ಬೆಳೆ ಇನ್ನೆನು ಕೈಗೆ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತನ ಕನಸು (Molakalmuru Rain) ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ
ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹೊಸಕೋಟೆ ಗ್ರಾಮಕ್ಕೆ ನೀರು ನುಗ್ಗಿದ್ದು ಜನಜೀವನ ತತ್ತರಗೊಂಡಿದೆ. (Molakalmuru Rain) ಗ್ರಾಮದ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ಓಣಿಗಳು ಕೆರೆಯಂತಾಗಿ ಮಾರ್ಪಟ್ಟು ಮಳೆಯ ರುದ್ರ ನರ್ತನಕ್ಕೆ ಗ್ರಾಮಸ್ಥರು ನಲುಗಿ ಹೋಗಿದ್ದಾರೆ.
ಹೊಸಕೋಟೆ ಗ್ರಾಮದ ದೊಡ್ಡಹಳ್ಳದ ನೀರು ರೈತರ ಹೊಲಗಳಿಗೆ ನುಗ್ಗಿ ಕಳೆದ ಎರಡು ತಿಂಗಳುಗಳಿಂದ ದುಡಿದ ಫಲದಿಂದ ಎದೆಯುವುದಕ್ಕೆ ಬಂದು ನಿಂತಿದ್ದ (Molakalmuru Rain) ಮೆಕ್ಕೆಜೋಳ,ಗಾಳಿ ಮಳೆಯ ರಭಸಕ್ಕೆ ನೆಲಕಚ್ಚಿದೆ, ಲಕ್ಷಾಂತರ ರೂಪಾಯಿ ವ್ಯಯಿಸಿ ಟೊಮೇಟೊ ಬೆಳೆದಿದ್ದ ರೈತನಿಗೆ ಮಳೆಯಿಂದಾಗಿ ಸಿಡಿಲು ಬಡಿದಂತಾಗಿದ್ದು, ಫಸಲಿಗೆ ಬಂದಿದ್ದ ಟೊಮೇಟೊ ಬೆಳೆ ಸಂಪೂರ್ಣವಾಗಿ ತನ್ನ ಕಣ್ಣೇದುರೆ ನೆಲಕಚ್ಚಿರುವುದನ್ನು ನೋಡಿ ಅನ್ನದಾತ ಕಣ್ಣೀರು ಹಾಕುತ್ತಿದ್ದಾನೆ, ಇನ್ನು ವರ್ಷದ ಮಳೆಯಾಶ್ರಿತ ಶೇಂಗಾ ಬೆಳೆ ಜಲಾವೃತವಾಗಿದ್ದು ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಸಿರಿಗೆರೆ ತರಳಬಾಳು ಶ್ರೀಗೆ ಬೆಂಬಲ ಸೂಚಿಸಿ ರಕ್ತದಲ್ಲಿ ಪತ್ರ ಬರೆದ ಭಕ್ತರು | Taralbalu Mata Sirigere
ಕಳೆದ ಎರಡು ವರ್ಷಗಳಿಂದ ಮಳೆ ಕಾಣದೆ ಬರಗಾಲಕ್ಕೆ (Molakalmuru Rain) ತುತ್ತಾಗಿ ಕಷ್ಟದ ಬದುಕು ಸಾಗಿಸಿದ್ದ ಈ ಭಾಗದ ರೈತರು,ಈ ವರ್ಷ ಅತಿವೃಷ್ಟಿಯ ಹೊಡೆತಕ್ಕೆ ಸಿಲುಕಿದ್ದಾರೆ.
ಮುಂಗಾರು ಫಸಲು ಹಾನಿಯಾಗಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಅದರಲ್ಲೂಸಣ್ಣ ರೈತರ ಪಾಡಂತೂ ಹೇಳ ತೀರದಾಗಿದೆ, ಅಧಿಕಾರಿಗಳು ಹಾನಿಗೊಳಗಾದ ಹೊಲಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.