Chitradurga news | Nammajana.com | 10-5-2024
ನಮ್ಮ ಜನ.ಕಾಂ.ಮೊಳಕಾಲ್ಮುರು:-ವಿದ್ಯಾರ್ಥಿಗಳ ಬಹುನಿರೀಕ್ಷೆಯ ಎಸ್ ಎಸ್ ಎಲ್ಸಿ ಫಲಿತಾಂಶ ಗುರುವಾರ ಬೆಳಿಗ್ಗೆ 10:30ಕ್ಕೆ ಪ್ರಕಟವಾಗಿದ್ದು ತಾಲೂಕಿಗೆ ಶೇ 73.09%ಫಲಿತಾಂಶ ಲಭಿಸಿದೆ.
2023-24ನೇ ಸಾಲಿನ ಎಸ್ಎಸ್ ಎಲ್ಸಿ ಪರೀಕ್ಷೆಯಲ್ಲಿ ಮೊಳಕಾಲ್ಮುರು ತಾಲೂಕಿನಲ್ಲಿ ಒಟ್ಟು 2052ವಿದ್ಯಾರ್ಥಿಗಳು ಹಾಜರಾಗಿದ್ದು 1500ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ, 73.09%ರಷ್ಟು ಫಲಿತಾಂಶ ಲಭಿಸಿದೆ.ಇನ್ನೂ ಕಳೆದ ವರ್ಷ 2022-23ನೇ ಸಾಲಿನಲ್ಲಿ ಶೇ, 97.78%ಫಲಿತಾಂಶ ಸಿಕ್ಕಿತ್ತು ಆದ್ರೆ ಈ ವರ್ಷ ಗಣನೀಯಯ ಪ್ರಮಾಣದಲ್ಲಿ ಫಲಿತಾಂಶ ಕುಸಿದಿದೆ.
ವಿಶೇಷವಾಗಿ ಮೊಳಕಾಲ್ಮುರು ಪಟ್ಟಣದ ಮುಬಾರಕ್ ಮೊಹಲ್ಲಾದ ಈರುಳ್ಳಿ ವ್ಯಾಪಾರಿ ಮುಸಲ್ಮಾನ ಸಮುದಾಯದ ಎಂ.ಮಹಮ್ಮದ್ ಮುಜಾಮಿಲ್ ಅವರ ಮಗಳು
ಅಶ್ರ ಮಹೀನ್ ಎಂ.ಎಸ್‌ಎಸ್ ಎಲ್‌ಸಿ ಪರೀಕ್ಷೆಯ ಆಂಗ್ಲ ಮಾಧ್ಯಮದಲ್ಲಿ 620 ಅಂಕ ಪಡೆದು ತಾಲೂಕು ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ.ಈ ವಿದ್ಯಾರ್ಥಿನಿಯು ಪಟ್ಟಣದ ಸರ್ ಎಂವಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ವಿದ್ಯಾರ್ಥಿನಿ ಹೊರತುಪಡಿಸಿದಂತೆ ಎಂಟು ಜನ ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.
ಇದನ್ನೂ ಓದಿ: SSLC RESULT:ಚಿತ್ರದುರ್ಗ ಜಿಲ್ಲೆ | ಪಾಸ್ ಎಷ್ಟು ಫೇಲ್ ಎಷ್ಟು
ಪಟ್ಟಣದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾದ ಟಿ.ಮನೋಹರ್ (612) ಅಂಕ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. ದೇವಸಮುದ್ರ ಇಂದಿರಾ ಗಾಂಧಿ ವಸತಿ ಶಾಲೆಯ ಪಿ.ಕೌಟಿಲ್ಯ(606), ಆದರ್ಶ ವಿದ್ಯಾಲಯದ ಎ.ಸ್ನೇಹ(605), ಪಟ್ಟಣದ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಅನು(605). ಆದರ್ಶ ವಿದ್ಯಾಲಯದ ಬಿ.ಎಂ.ಸಿದ್ದಾರ್ಥ(603). ಇದೇ ಶಾಲೆಯ ಸಾತ್ವಿಕಾ ನಾಗಸಾಯಿ, ಕೊಂಡ್ಲಹಳ್ಳಿ ಗ್ರಾಮಾಂತರ ಪ್ರೌಢಶಾಲೆಯ ಎ.ರಶ್ಮಿ ಹಾಗೂ ರಾಂಪುರ ಮುದುಕೇಶ್ವರ ಪ್ರೌಢಶಾಲೆಯ ಟಿ.ಅನ್ವಿತಾ ತಲಾ 600 ಅಂಕ ಪಡೆದಿದ್ದಾರೆ.