Chitradurga news|nammajana.com|13-8-2024
ನಮ್ಮಜನ.ಕಾಂ, ಮೊಳಕಾಲ್ಮುರು: ತಾಲೂಕಿನ ಬೊಮ್ಮಲಿಂಗನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ (Molakalmuru) ಶನಿವಾರ ತಡರಾತ್ರಿ ಕರಡಿಯೊಂದು ಪ್ರತ್ಯಕ್ಷವಾಗಿ ಜನರನ್ನು ಆತಂಕಕ್ಕೆ ದೂಡಿದೆ.
ಕರಡಿ, ದೇವಸ್ಥಾನ ಒಳಗಡೆ ಮೂರ್ನಾಕು ಗಂಟೆಗೂ ಹೆಚ್ಚುಕಾಲ ತಂಗಿದ್ದು, ಇಲ್ಲಿದ್ದ ದೀಪದ ಎಣ್ಣೆ ಕುಡಿದು ಕಿಟಕಿ ಮಾದರಿ (Molakalmuru) ಕಟ್ಟೆಯ ಮೇಲೆ ಕಾಲುಗಳನ್ನಿಟ್ಟು ನಿಲ್ಲುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರಡಿಯನ್ನು ಕಂಡ ನಾಯಿಗಳು ಬೊಗಳಿದರೂ ಹಾಗೂ ಸ್ಥಳೀಯರು ಶಬ್ದ ಮಾಡುತ್ತಾ ಹರಸಾಹಸಪಟ್ಟರೂ ಇದು ಅವರ ಕಡೆ ಗಮನ ನೀಡದೆ ತನ್ನ ಪಾಡಿಗೆ ತಾನಿತ್ತು. ಇದನ್ನು ಕಂಡ (Molakalmuru) ಅನೇಕರು ಇದು ಕಿವುಡು ಕರಡಿ ಇರಬೇಕು ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು.
ಇದನ್ನೂ ಓದಿ: Dina Bhavishya kannada: ದಿನ ಭವಿಷ್ಯ ಯಾವ ರಾಶಿಗೆ ಶುಭ ಅಶುಭ?
ಗ್ರಾಮದಲ್ಲಿ ಕರಡಿ, ಆಗಾಗ ಕಾಣುವುದು ಇಲ್ಲಿ ಸಾಮಾನ್ಯವಾಗಿದೆ. ಕರಡಿ ಹಿಡಿಯಲು ಅರಣ್ಯ ಇಲಾಖೆಗೆ (Molakalmuru) ಮನವಿ ಮಾಡಿದ್ದರೂ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎನ್ನುತ್ತಾರೆ ಗ್ರಾಮಸ್ಥರು