Chitradurga news|nammajana.com|17-8-2024
ನಮ್ಮಜನ.ಕಾಂ, ಮೊಳಕಾಲ್ಮುರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾಗಿ ಜಿ.ಬಿ ಮಲ್ಲಿಕಾರ್ಜುನ ಅವಿರೋಧವಾಗಿ (Molakalmuru) ಆಯ್ಕೆಯಾಗಿದ್ದಾರೆ.
ಹಾನಗಲ್ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಎರಡನೇ ಅವಧಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ವಸದಸ್ಯರ ಸಮ್ಮತಿ ಮೇರೆಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಪತ್ರಕರ್ತರ ಸಂಘದ ಜಿಲ್ಲಾದ್ಯಕ್ಷರಾದ ದಿನೇಶ್ ಗೌಡಗೆರೆ ಮಾತನಾಡಿ,ಪತ್ರಕರ್ತರು ಪ್ರತಿನಿತ್ಯ ಸವಾಲಿನಿಂದಲೇ ಕೆಲಸ ಮಾಡುತ್ತಾರೆ. ಉತ್ತಮ ಪತ್ರಕರ್ತರು ಸಮಾಜ ಸುಧಾರಣೆಯ ದೃಢ ಸಂಕಲ್ಪದೊಂದಿಗೆ ಶ್ರಮಿಸುತ್ತಿದ್ದಾರೆ. ಬೇಕಾದಷ್ಟು ಟೀಕೆ- ಟಿಪ್ಪಣಿಯೊಂದಿಗೆ ಪತ್ರಕರ್ತರು ದಿಟ್ಟ ಮನಸ್ಸಿನಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯದ ನಂತರ ಭಾರತ ದೇಶದಲ್ಲಿ ಹಲವಾರು ಬದಲಾವಣೆಗಳಾಗಲು ಪತ್ರಿಕೋದ್ಯಮದ ಕೊಡುಗೆ ಅಪಾರವಾದದ್ದು. ಪತ್ರಿಕೋದ್ಯಮ ಇಲ್ಲದಿದ್ದರೆ ಈ ದೇಶದ ಸ್ವಾತಂತ್ರ್ಯ ಚಳುವಳಿ ಮುನ್ನಡೆಸಲು ಸಾಧ್ಯವಾಗುತ್ತಿರಲಿಲ್ಲ. (Molakalmuru) ದೇಶದ ಮೂಲೆ ಮೂಲೆಗೆ ಸಂದೇಶ ರವಾನೆ ಮಾಡಿರುವುದು ಪತ್ರಿಕಾ ಮಾಧ್ಯಮಗಳು ಆದ್ದರಿಂದ ನಮ್ಮ ಪ್ರತಿಯೊಂದು ಬರಹಗಳನ್ನು ಜನರು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ, ನಮ್ಮ ನಡವಳಿಕೆಗಳು ಇತರರಿಗೆ ಮಾದರಿಯಾಗಿರಬೇಕು.
ಕಾರ್ಯನಿರತ ಪತ್ರಕರ್ತರ ಸಂಘವು ರಾಜ್ಯದಲ್ಲಿ ಬಲಿಷ್ಠವಾದ ಸಂಘವಾಗಿದ್ದು ಸಕ್ರಿಯ ಚಟುವಟಿಕೆಗಳನ್ನು ಒಳಗೊಂಡ ಪತ್ರಕರ್ತರ ಬಹು ದೊಡ್ಡ ಸಮೂಹವಾಗಿದೆ.
ಸಂಘದ ಅಧ್ಯಕ್ಷರಾದವರು ಯಾವುದೇ ನಿರ್ಣಯಗಳನ್ನು (Molakalmuru) ಕೈಗೊಂಡರು ಪ್ರತಿಯೊಬ್ಬ ಸದಸ್ಯರ ಗಮನಕ್ಕೆ ತಂದು ಒಮ್ಮತದ ಅಭಿಪ್ರಾಯದ ಮೇಲೆ ನಿರ್ಣಯ ಮಂಡಿಸಬೇಕು ಪತ್ರಕರ್ತರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಇನ್ನು ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಎಸ್ ರಾಜಶೇಖರ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿಬಿ ಮಲ್ಲಿಕಾರ್ಜುನ್ ರವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಗೆ ನೂತನ SP ಆಗಿ ರಂಜಿತ್ ಕುಮಾರ್ ಬಂಡಾರು ನೇಮಕ | Ranjith Kumar Bandaru
ಸ್ಥಳದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಕುಮಾರಸ್ವಾಮಿ ಮತ್ತು ಹಿರಿಯ ಪತ್ರಕರ್ತರಾದ ಕೊಂಡ್ಲಹಳ್ಳಿ ಮಹಾದೇವ್,ಕೊಂಡ್ಲಹಳ್ಳಿ ಜಯಪ್ರಕಾಶ್, ಕೆಂಚಪ್ಪ, ಬಿಜಿಕೆರೆ ಬಸವರಾಜ್,ಈರಣ್ಣ,ಗೋವಿಂದಪ್ಪ,ಹೆಚ್ ಮಹಾಂತೇಶ್,ಚಂದ್ರಶೇಖರ್,ಬಸವರಾಜ್, ಗಂಗಾಧರ್,ರುದ್ರೇಶ್,ಕೆಂದೊಳಿ ಮಲ್ಲಿಕಾರ್ಜುನ,ವಿಜಯ ಕುಮಾರ್,ಮಂಜುನಾಥ್, ರವಿ, ಅಜ್ಜಪ್ಪ ಸೇರಿದಂತೆ ಹಲವರಿದ್ದರು.