Chitradurga news | nammajana.com | 09-08-2025
ನಮ್ಮಜನ.ಕಾಂ,ಮೊಳಕಾಲ್ಮುರು: ಮೋಟಾರ್‌ಗೆ ಅಳವಡಿಸಿದ್ದ(Molakalmuru) ವೈರ್‌ನ ಶಾಕ್‌ನಿಂದಾಗಿ ಮಹಿಳೆಯೊಬ್ಬಳು ಮೃತ ಪಟ್ಟಿರುವ ಘಟನೆ ತಾಲೂಕಿನ ತುಮಕೂರ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ. ಮೃತ ಮಹಿಳೆ ಕೋಕಿಲ (20) ಎನ್ನಲಾಗಿದೆ.

ಇದನ್ನೂ ಓದಿ: MLA ಎನ್.ವೈ.ಗೋಪಾಲಕೃಷ್ಣ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಿಲ್ಲ : ಕೆ.ಜೆ.ಜಯಲಕ್ಷ್ಮಿ ಸ್ಪಷ್ಟನೆ
ಇವರು ಬೆಳಗ್ಗೆ ಮನೆಯ ಅಂಗಳದಲ್ಲಿ ನೀರಿನ ಮೋಟಾರ್‌ಸ್ವಿಚ್ ಹಾಕುವಾಗ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಉಂಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.
ಪಿಎಸ್‌ಐ ಮಹೇಶ್ ಹೊಸಪೇಟೆ(Molakalmuru) ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಮೊಳಕಾಲ್ಮುರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
