Chitradurga news | nammajana.com |9-9-2024
ನಮ್ಮಜನ.ಕಾಂ, ಚಿತ್ರದುರ್ಗ : ನೀವು ಪೂಜೆ ಮಾಡಿ ಹಣವನ್ನು ಬಾಕ್ಸ್‌ನಲ್ಲಿ ಇಟ್ಟರೆ ಡಬಲ್ ಮಾಡಿ ಕೊಡುತ್ತೇವೆ ಎಂದು ನಂಬಿಸಿ ವಂಚಿಸಿದ ಆರೋಪದ ಹಿನ್ನೆಲೆ ಚಿತ್ರದುರ್ಗದ ಸ್ವಾಮಿ ಎಂದಿದ್ದ (Money Fraud) ರಾಜಸ್ಥಾನ ಮೂಲದ ನಕಲಿ ಸ್ವಾಮಿಯನ್ನು ಹೊಸಪೇಟೆ ಪೋಲಿಸರು ಬಂಧಿಸಿದ್ದಾರೆ.
ಸ್ವಾಮೀಜಿ ಜೊತೆ ಮೂವರನ್ನು ಇಲ್ಲಿನ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಬಂಧಿತರಿಂದ 35,14,740 ರೂ. ನಗದು ಹಣ ಮತ್ತು ನೋಟು ಎಣಿಕೆ ಯಂತ್ರವನ್ನು (Money Fraud) ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್ (25), ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದ ತುಕ್ಯಾ ನಾಯ್ಕ (29) ಮತ್ತು (Money Fraud) ಶಂಕು ನಾಯ್ಕ (30) ಬಂಧಿತ ಆರೋಪಿಗಳು.
ಈ ಸುದ್ದಿಗೆ ಸಂಬಂಧಿಸಿದಂತೆ ಫೀಲ್ಡ್ ಗೆ ಇಳಿದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಹೊಸಪೇಟೆ, ಚಿತ್ರದುರ್ಗದಲ್ಲಿ ಬಚ್ಚಿಟ್ಟಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.ಇಂತಹ ಇನ್ನಷ್ಟು ಮೋಸ ಮಾಡಿರುವಂತಹ ಪ್ರಕರಣಗಳು ಬಯಲಿಗೆ ಬರಲಿವೆ.
ಈ ತಂಡ ಸಂಡೂರು ಭಾಗದಲ್ಲೂ ವಂಚನೆ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಹೆಚ್ಚಿನ ಪ್ರಮಾಣದ ನಗದು ಹಣ (Money Fraud) ಆರೋಪಿಗಳ ಬಳಿ ದೊರೆತಿದೆ ಎಂದು ಎಂದು ಎಸ್ಪಿ ಬಿ. ಎಲ್. ಶ್ರೀಹರಿಬಾಬು ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಈ ಕೇಸ್ ನಲ್ಲಿ ನಡೆದ ಮಾಹಿತಿ: ತಾಲೂಕಿನ ಕಲ್ಲಹಳ್ಳಿ ಗ್ರಾಮದ ಕುಮಾರ ನಾಯ್ಕ ಎಂಬವರಿಗೆ ಅದೇ ಗ್ರಾಮದ ತುಕ್ಯಾ ನಾಯ್ಕ ಮತ್ತು ಶಂಕು ನಾಯ್ಕ ಎಂಬುವರು ರಾಜಸ್ಥಾನ ಮೂಲದ (Money Fraud) ಜಿತೇಂದ್ರ ಸಿಂಗ್ ಎಂಬ ನಕಲಿ ಸ್ವಾಮಿಯನ್ನು ಸೆಪ್ಟೆಂಬರ್ 4 ರಂದು ಪರಿಚಯಿಸಿದ್ದಾರೆ.
7,50,000 ರೂ. ಬಾಕ್ಸ್‌ನಲ್ಲಿಟ್ಟು ಪೂಜೆ ಮಾಡಿದರೆ, 80,00,000 ರೂ. ಮಾಡಿಕೊಡುವುದಾಗಿ ನಂಬಿಸಿದ್ದಾರೆ. 7.50,000 ರೂ. ನಗದು ಬಾಕ್ಸ್‌ನಲ್ಲಿ ಹಾಕಿಟ್ಟು ಪೂಜೆ ಮಾಡಿದ್ದಾರೆ. 168+2 ದಿನಗಳ ನಂತರ ಬಾಕ್ಸ್ ಬಿಚ್ಚುವಂತೆ ಹೇಳಿ ಹೋಗಿದ್ದಾರೆ.
ಇದೇ ತಂಡ ಕಲ್ಲಹಳ್ಳಿ ಗ್ರಾಮದ ರಾಜಾ ನಾಯ್ಕ ಎಂಬವರ ಮನೆಯಲ್ಲೂ ಸೆಪ್ಟೆಂಬರ್ 7 ರಂದು ಪೂಜೆ ಸಲ್ಲಿಸಲು ಬಂದಿದೆ. ಈ ತಂಡ ನಡೆಸೋದು ಪೂಜೆ ಸುಳ್ಳು ಅನ್ನೋ ಅನುಮಾನ (Money Fraud) ಬಂದ ಕಾರಣ ಕುಮಾರ ನಾಯ್ಕ ತನ್ನ ಮನೆಯಲ್ಲಿದ್ದ ಬಾಕ್ಸ್ ತೆರೆದರೆ, ಬಾಕ್ಸ್‌ನಲ್ಲಿ ಊದು ಬತ್ತಿ ಪ್ಯಾಕೇಟ್‌ಗಳು, ಉಸುಕಿನ ಚೀಲ, ಮೂರು ಟವೆಲ್‌ಗಳು ಮಾತ್ರ ಇವೆ.
ಇದನ್ನೂ ಓದಿ: ದಿನ ಭವಿಷ್ಯ | 9-9-2024 | Dina Bhavishya
ಮೋಸ ಹೋಗಿರುವುದು ಗೊತ್ತಾದ ತಕ್ಷಣ, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.