

Chitradurga NeWS|Nammajana.com|April-20-4-2024

ನಮ್ಮಜನ.ಕಾಂ.ಚಿತ್ರದುರ್ಗ : ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಗುರುವಾರ ವಾಣಿ ವಿಲಾಸ ಸಾಗರದಲ್ಲಿ ಐಮಂಗಲ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಪ್ರಗತಿ ವೀಕ್ಷಣೆ ಮಾಡಿದರು.
ಜಾಕ್ ವೆಲ್ ಪಾಯಿಂಟ್, ಎಂ.ಎಸ್. ಪೈಪ್ ಸ್ಟಾಕ್ ಯಾರ್ಡ್‍ಗೆ ಭೇಟಿ ನೀಡಿದ ಅವರು ಹೊಳಲ್ಕೆರೆ ತಾಲೂಕಿನ ಹಾಲೇನಹಳ್ಳಿಯಲ್ಲಿ ನೀರು ಶುದ್ಧೀಕರಣ ಘಟಕ ಹಾಗೂ ಚೌಡಗೊಂಡನಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಯನ್ನು ವೀಕ್ಷಿಸಿದರು. ಇದೇ ವೇಳೆ ಸ್ವಚ್ಛಭಾರತ ಮಿಷನ್ ಯೋಜನೆಯ ಮಲ ನಿರ್ವಹಣೆ ಘಟಕ ಮತ್ತು ಘನ ತ್ಯಾಜ್ಯ ನಿರ್ವಹಣೆ ಘಟಕಗಳ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಜಿ.ಹೆಚ್.ತಿಪ್ಪಾರೆಡ್ಡಿ | ನಾಳೆ 40 ಹಳ್ಳಿಗಳಲ್ಲಿ ಕಾರಜೋಳ ಪರ ಪ್ರಚಾರ
ಈ ಸಂದರ್ಭದಲ್ಲಿ ಜಿ.ಪಂ ಸಿಇಓ ಎಸ್.ಜೆ.ಸೋಮಶೇಖರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸನಗೌಡ ಪಾಟೀಲ ಸೇರಿಂದತೆ ಮತ್ತಿತರರು ಇದ್ದರು.

