Chitradurga news|nammajana.com|16-11-2024
ನಮ್ಮಜನ.ಕಾಂ, ಚಿತ್ರದುರ್ಗ: ಚಳ್ಳಕೆರೆ ಟೋಲ್ಗೇಟ್ 32 ನೇ ವಾರ್ಡ್ನಲ್ಲಿ ನಗರಸಭೆಗೆ ಸೇರಿದ ಜಾಗದಲ್ಲಿ ಗುಜರಿ (Municipal Councilors) ಅಂಗಡಿಯಿಟ್ಟುಕೊಂಡಿರುವುದನ್ನು ತೆರವುಗೊಳಿಸುವಂತೆ ನಗರಸಭೆ ಜಾಗವೆಂದು ನಾಮಫಲಕ ಅಳವಡಿಸಿದಾಗ ನಗರಸಭೆ ಸದಸ್ಯ ದೀಪು ನಾಮಫಲಕದ ಬಳಿ ಕುಳಿತು ಗುಜರಿ ಅಂಗಡಿಯನ್ನು ತೆರವುಗೊಳಿಸದಂತೆ ವಿರೋಧ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯರುಗಳಾದ ಶ್ರೀನಿವಾಸ್ ಹಾಗೂ ಭಾಸ್ಕರ್ (Municipal Councilors) ಇವರುಗಳು ಗುಜರಿ ಅಂಗಡಿ ಮುಂದೆ ನಗರಸಭೆ ಸ್ವತ್ತು ಎನ್ನುವ ನಾಮಫಲಕ ಅಳವಡಿಸುವಾಗ ಈ ಘಟನೆ ನಡೆದಿದ್ದು ನಗರಸಭೆ ಸದಸ್ಯ ದೀಪು ನಗರದ ಹಲವು ಕಡೆ ನಗರಸಭೆ ಆಸ್ತಿ ಹಲವರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಇಂದಿನ ರಾಶಿ ಭವಿಷ್ಯ, ಕೆಲಸದಲ್ಲಿ ಅಡೆತಡೆ, ಹೊಸ ಜವಬ್ದಾರಿಯಲ್ಲಿ ಯಶಸ್ಸು | Dina Bhavishya
ಹಾಗಾಗಿ ಆ ಜಾಗಗಳನ್ನು ತೆರವು ಮಾಡಿಕೊಂಡು ನಗರಸಭೆ ಜಾಗಗಳಿಗೆ ಮೊದಲು ನಗರಸಭೆ ಸ್ವತ್ತು ಎಂದು ನಾಮಫಲಕ (Municipal Councilors) ಅಳವಡಿಸುವಂತೆ ಸದಸ್ಯ ದೀಪು ಪಟ್ಟುಹಿಡಿದು ನಗರಸಭೆ ಸದಸ್ಯರ ನಡುವೆ ಮಾತಿ ಚಕಮಕಿ ನಡೆಯಿತು.