
Chitradurga news|nammajana.com|25-02-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿನ 37 ಮಳಿಗೆ ಹರಾಜು ಪ್ರಕ್ರಿಯೆ ವಿಚಾರದಲ್ಲಿ ಮ ಮಂಗಳವಾರ ಏಕಾಏಕಿ ಹರಾಜು ಪ್ರಕ್ರಿಯೆ ಮುಂದೂಡಲಾಗಿದೆ (Municipal Store Auction) ಎಂಬ ನಗರಸಭೆ ಪೌರಯುಕ್ತರ ನಡೆಗೆ ನಗರಸಭೆ ಅಧ್ಯಕ್ಷೆ ಸುಮಿತಾ ಮತ್ತು ಉಪಾಧ್ಯಕ್ಷ, ಸದಸ್ಯರು ಕಿಡಿಕಾರಿದ ಘಟನೆ ಚಿತ್ರದುರ್ಗ ನಗರಸಭೆಯಲ್ಲಿ ನಡೆಯಿತು.
ಮಳಿಗೆಗಳ ಹರಾಜು ಪ್ರಕ್ರಯೆಗೆ ಬಂದಿದ್ದ ಹರಾಜು ಕೂಗುವವರು ನಗರಸಭೆ ಪೌರಯುಕ್ತರ ವಿರುದ್ದ ತೀವ್ರ ಆಕ್ರೋಶ ಹೊರ ಹಾಕಿ, ನಮಗೆ ಮಾಹಿತಿ ಇಲ್ಲದೆ ಹರಾಜು ಮುಂದೆ ಹಾಕಿರುವುದು ಯಾವ ಉದ್ದೇಶಕ್ಕೆ ಎಂಬ ಸ್ಪಷ್ಟವಾಗಿ ತಿಳಿಸಿ ಎಂದು ನಗರಸಭೆ ಅಧ್ಯಕ್ಷೆ ಸುಮಿತ ಅವರನ್ನು ಪ್ರಶ್ನಿಸಿದಾಗ ಅವರು ನನಗೆ ವ್ಯಾಟ್ಸಪ್ ಸಂದೇಶ ರಾತ್ರಿ 12-10 ನಿಮಿಷಕ್ಕೆ ಕಳಿಸಿದ್ದಾರೆ ಮತ್ತು ಹರಾಜು ಮುಂದೂಡುವ ಅಧಿಕಾರ (Municipal Store Auction) ಪೌರಾಯುಕ್ತರಿಗೆ ಇಲ್ಲ ಎಂದು ಸಿಡಿಮಿಡಿಗೊಂಡರು.

ನಗರಸಭೆಯ 37 ಮಳಿಗೆ ಹರಾಜಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಹರಾಜಿಗೆ ಫೆ.25ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಅದರಂತೆ ಬಿಡ್ ದಾರರು ಇಎಂಡಿ ಮೊತ್ತ ಡಿಡಿ ಸಂಗಡ ನಗರಸಭೆಗೆ ಆಗಮಿಸಿದ್ದರು. ಅಧ್ಯಕ್ಷೆ ಸುಮಿತಾ, ಉಪಾಧ್ಯಕ್ಷೆ ಶ್ರೀದೇವಿ, ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರುಲ್ಲಾ ಬಿಡ್ ನಡೆಸಲುಸಭಾಂಗಣದಲ್ಲಿ ಕಾದು ಕುಳಿತರು ಅಧಕ್ಷರ ಗನಮಕ್ಕೂ ಸೌಜನ್ಯಕ್ಕೂ ತಿಳಿಸದೇ . ಪೌರಾಯುಕ್ತ ರೇಣುಕಾ ಸೇರಿದಂತೆ ಯಾವೊಬ್ಬ ನಗರಸಭೆ (Municipal Store Auction) ಸಿಬ್ಬಂದಿಯೂ ನಗರಸಭೆ ಕೆಲಸಕ್ಕೆ ಹಾಜರಾಗದೇ ಇರುವುದು ಅಧ್ಯಕ್ಷರನ್ನು ಮತ್ತಷ್ಟು ಕೆರಳಿಸಿತು.
ಅಧ್ಯಕ್ಷರ ಗಮನಕ್ಕೂ ಬಾರದೇ ಸಭೆ ಮುಂದೂಡಿದ ಪೌರಯುಕ್ತೆ ರೇಣುಕಾ
ಅಧ್ಯಕ್ಷೆ ಸುಮಿತಾ, ನಮ್ಮ ಗಮನಕ್ಕೆ ಬಾರದಂತೆ ಪೌರಾಯುಕ್ತರು ಹರಾಜು ಮುಂದೂಡಿದ್ದಾರೆ. ರಾತ್ರಿ 12.20ಕ್ಕೆ ವಾಟ್ಸಾಪ್ ನಲ್ಲಿ ಮುಂದೂಡಿದ ಪತ್ರ ಹಾಕಿದ್ದಾರೆ. ಹರಾಜು ನಡೆಸಲು ಬರುವಂತೆ ಕಾಲ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲವೆಂದು ದೂರಿದರು. ಇವರಿಗೆ ದಿಶಾ ಸಭೆ ಇದೆ ಎಂದು ಮೊದಲೇ ಗೊತ್ತಿತ್ತಲ್ಲ ಆದರು ಅದರ ನೆಪ ಮಾಡಿಕೊಂಡು ಹರಾಜು ಪ್ರಕ್ರಿಯೆ ಮುಂದೂಡಲು ಅವರಿಗೆ ಅಧಿಕಾರ ಕೊಟ್ಟವರ್ಯಾರು, ಸಭೆಯಲ್ಲಿ ಕುಳಿತುಕೊಂಡು ಕಾಲ್ ಪಿಕ್ ಮಾಡದೇ ಅಧಿಕಾರಿ ದರ್ಪ ಮೆರೆಯುತ್ತಿದ್ದು ಬಿಡ್ ದಾರರಿಗೆ ಬಂದು (Municipal Store Auction) ಉತ್ತರಿಸಲಿ,ತಮ್ಮಿಷ್ಟದಂತೆ ತಾವು ನಡೆದುಕೊಂಡೇ ನಾವು ಸುಮ್ಮನಿರಲ್ಲ ಮುಂದೆ ತೋರಿಸ್ತಿವಿ ನಾವು ಏನು ಅಂತ ಏರು ಧ್ವನಿಯಲ್ಲಿ ಪೌರಯುಕ್ತೆ ರೇಣುಕಾ ವಿರುದ್ಧ ಅಕ್ರೋಶ ಹೊರಹಾಕಿದರು.
ನಗರಸಭೆ ಗೋಡೆ ಮೇಲೆ ಹರಾಜು ಮುಂದೂಡಿದ ಪ್ರತಿಗೆ ಕಮಿಷನರ್ ಸಹಿ ಇಲ್ಲ
ನಗರಸಭೆಗ ಗೋಡೆ ಮೇಲೆ ಹರಾಜು ಮುಂದೂಡಿದ ಪತ್ರ ಅಂಟಿಸಲಾಗಿದೆ. ಅದರಲ್ಲಿ ಪೌರಾಯುಕ್ತರ ಸಹಿ ಇಲ್ಲ. ಕಷ್ಟಪಟ್ಟು ಡಾಕ್ಯುಮೆಂಟ್ ರೆಡಿಮಾಡಿಕೊಂಡು ಬಂದಿದ್ದೇವೆ. ಈಗ ಹರಾಜು ರದ್ದು ಮಾಡಿದರೆ ಹೇಗೆ. ರಾತ್ರೋ ರಾತ್ರಿ ಮುಂದೂಡುವ ನಿರ್ಧಾರ ಕೈಗೊಳ್ಳುವ ಅಗತ್ಯವಾದರೂ ಏನಿತ್ತೆಂದು ಬಿಡ್ ದಾರರು ಅಧ್ಯಕ್ಷರನ್ನು ಪ್ರಶ್ನಿಸಿದರು.
ಒಂದು ತಿಂಗಳ ಮುಂಚೆ ಹರಾಜು ಪ್ರಕ್ರಿಯೆ ಮಾಡಲಾಗಿತ್ತು. ಕಳೆದ ಐದು ತಿಂಗಳಿಂದ ಹರಾಜು ಪ್ರಕ್ರಿಯೆ ಆಗಿರಲಿಲ್ಲ, ಆದ್ದರಿಂದ. ಇಟ್ಲರ್ ಆಡಳಿತವನ್ನು ಪೌರಯುಕ್ತೆ ರೇಣುಕಾ ನಡೆಸುತ್ತಿದ್ದು ಸರ್ವಾಧಿಕಾರಿ ವರ್ತನೆ ನಡೆಯಲ್ಲ, ಜನಪರ ಆಡಳಿತಕ್ಕೆ ನಾವು ಬಂದಿದ್ದೇವೆ ಎಂದು ಅಧ್ಯಕ್ಷೆ ಸುಮಿತಾ (Municipal Store Auction) ಅವರು ಪೌರಯುಕ್ತರಿಗೆ ಟಾಂಗ್ ನೀಡಿದ್ದು ಮುಂದೆ ಯಾವ ರೀತಿ ಇವೆ ಬೆಳವಣಿಗೆ ನಡೆಯಲಿದೆ ಎಂಬುದನ್ನಯ ಕಾದು ನೋಡಬೇಕಿದೆ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಉದ್ಯೋಗ ಬಡ್ತಿ, ಬದಲಾವಣೆ, ಧನ ಲಾಭ ನೋಡಿ
ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರುಲಾ, ನಗರಸಭೆ ಸದಸ್ಯ ದೀಪು ಇದ್ದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ನೂತನ AC ಆಗಿ ಮಹಿಬೂಬ್ ಜಿಲಾನ್ ನೇಮಕ | Assistant Commissioner
