Chitradurga news|nammajana.com|19-11-2024
ನಮ್ಮಜನ.ಕಾಂ, ಚಳ್ಳಕೆರೆ: ನಗರಸಭೆಯ ತುರ್ತು ಸಭೆ ಅಧ್ಯಕ್ಷೆ ಜೈತುಂಬಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದಿದ್ದು, ಉಪಾಧ್ಯಕ್ಷೆ ಸುಜಾತ ಸೇರಿದಂತೆ ಆಡಳಿತ ಹಾಗೂ ವಿರೋಧ ಪಕ್ಷದ (Municipality) ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಪ್ರಾರಂಭದಲ್ಲಿ ಪೌರಾಯುಕ್ತ ಜಗರೆಡ್ಡಿ ಎಲ್ಲರನ್ನೂ ಸ್ವಾಗತಿಸಿ ಸಭೆಯ ಕಾರ್ಯಸೂಚಿಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ನೀಡುವಂತೆ ವಿನಂತಿಸಿದರು.
ಚಳ್ಳಕೆರೆ ನಗರಸಭೆ ವ್ಯಾಪ್ತಿಯ ವಿವಿಧ ಯೋಜನೆಗಳ ಅಡಿಯಲ್ಲಿ ಕರೆದಿರುವ ಟೆಂಡರ್ಗಳ ಆರ್ಥಿಕ ಬಿಡ್ಗೆ ಅನುಮೋದನೆ ನೀಡಬೇಕು. ಅದೇ ರೀತಿ ನಗರಸಭೆಯ ವಿವಿಧ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಬೇಕು.
ವಿಶೇಷವಾಗಿ ವಿದ್ಯುತ್ ದೀಪ, ವಿವಿಧ ಪಾರ್ಕ್ ಗಳ ಅಭಿವೃದ್ದಿ ಸಹಕಾರ ನೀಡುವಂತೆ ಮನವಿ ಮಾಡಿದರು. ಜೊತೆಯಲ್ಲೇ ನಗರಸಭೆಯ 20.21, 22,23, 24ರ ಶೇ.5ರ ಅನುದಾನದಲ್ಲಿ ಸುಮಾರು 37 ಜನ ವಿಕಲಚೇತನರಿಗೆ ತ್ರಿಚಕ್ರವಾಹನ ನೀಡಲು ಅವಕಾಶವಿದ್ದು ಈ ಬಗ್ಗೆ ಸದಸ್ಯರು ಚರ್ಚೆ ನಡೆಸಿ (Municipality) ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು.
ಪ್ರಾರಂಭದಲ್ಲಿ ವಿರೋಧ ಪಕ್ಷದ ಸದಸ್ಯರಾದ ಎಸ್.ಜಯಣ್ಣ, ಸಿ.ಶ್ರೀನಿವಾಸ್, ವೆಂಕಟೇಶ್, ವಿ.ವೈ.ಪ್ರಮೋದ್, ಸಿ.ಎಂ.ವಿಶುಕುಮಾರ್, ತಿಪ್ಪಕ್ಕ, ಸಾಕಮ್ಮ, ಪಾಲಮ್ಮ, ಕವಿತಾನಾಯಕಿ, ನಿರ್ಮಲ ಮುಂತಾದವರು ವಿಕಲಚೇತನರಿಗೆ ಸುಮಾರು 41.33 ಲಕ್ಷ ವೆಚ್ಚದಲ್ಲಿ ತ್ರಿಚಕ್ರವಾಹನ ನೀಡುವ ಬಗ್ಗೆ ವಿಷಯ ಪ್ರಸ್ತಾಪಿಸಿದ್ದೀರಿ, ಕೇವಲ ಒಬ್ಬ ಗುತ್ತಿಗೆದಾರ ಮಾತ್ರ ಟೆಂಡರ್ ಸಲ್ಲಿಸಿದ್ದು, ಇದು ನಿಯಮಬಾಹಿರವಾಗಿದೆ. ಆದ್ದರಿಂದ (Municipality) ಮರುಟೆಂಡರ್ ಮಾಡಿ ಎಂದು ಒತ್ತಾಯಿಸಿದರು.
ಆಡಳಿತ ಪಕ್ಷದ ಸದಸ್ಯರಾದ ಆರ್.ರುದ್ರನಾಯಕ, ಬಿ.ಟಿ.ರಮೇಶ್ಗೌಡ, ಕೆ.ವೀರಭದ್ರಪ್ಪ, ಎಂ.ಜೆ.ರಾಘವೇಂದ್ರ, ವೈ.ಪ್ರಕಾಶ್, ಕವಿತಾಬೋರಯ್ಯ, ಎಚ್.ಪ್ರಶಾಂತ್ಕುಮಾರ್ ಮುಂತಾದವರು ಈಗಾಗಲೇ ಟೆಂಡರ್ ಆದವರಿಗೆ ತ್ರಿಚಕ್ರವಾಹನ ನೀಡಲು ಅವಕಾಶ ಮಾಡಿಕೊಡಿ ಎಂದು ಸಭೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪೌರಾಯುಕ್ತರು ಮಾಹಿತಿ ನೀಡಿ, ನಗರದ 31 ವಾರ್ಡ್ಗಳಿಗೆ ಎಲ್ಇಡಿ ಲೈಟ್ ಅವಳಡಿಸಲು ಸುಮಾರು 20 ಲಕ್ಷ ಹಣವನ್ನು ಮೀಸಲಿದ್ದು, ಇದನ್ನು ಅನುಮೋದಿಸುವಂತೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಆಡಳಿತ ಪಕ್ಷದ ಸದಸ್ಯರಾದ ಎಂ.ಜೆ.ರಾಘವೇಂದ್ರ, ರಮೇಶ್ಗೌಡ, ವಿರೋಧ ಪಕ್ಷದ ಜಯಣ್ಣ, ವಿಶುಕುಮಾರ್, ಪ್ರಮೋದ್, ಶ್ರೀನಿವಾಸ್, ಎಲ್ಇಡಿ ಬಲ್ಪ್ಗಳು ಕೇವಲ ಕೆಲವು ದಿನಗಳು ಮಾತ್ರ ಬರಲಿವೆ, ಅದರ ಬದಲಿ ಸೋಡಿಯಂ ಲೈಟ್ ಅಳವಡಿಸುವಂತೆ ಮನವಿ ಮಾಡಿದರು.
ನಗರದ ವ್ಯಾಪ್ತಿಯ ಕರೇಕಲ್ ಕೆರೆ ಅಭಿವೃದ್ದಿಗೆ 2.40 ಕೋಟಿ ಮೊತ್ತವನ್ನು ವಿವಿಧ ಆಯಾಮಗಳಲ್ಲಿ ಅಭಿವೃದ್ದಿ ಪಡಿಸಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ನಗರಾಭಿವೃದ್ದಿ ಪ್ರಾಧಿಕಾರದಿಂದ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ವಿನಯ್ತಿಳಿಸಿದರು.
ನಗರದ ಜಾಫರ್ಶರೀಫ್ ಬಡಾವಣೆಯಲ್ಲಿ ಒಂದು ಎಕರೆಗೂ ಹೆಚ್ಚು ಪ್ರದೇಶ ಪಾರ್ಕ್ಗಾಗಿ ಮೀಸಲಿದ್ದು, ಅಲ್ಲಿಯೂ ಅಭಿವೃದ್ದಿ ಪಡಿಸಲು ಅವಕಾಶವಿದೆ ಎಂದರು.
ಸದಸ್ಯೆ ಜಯಲಕ್ಷ್ಮಿ, ಪ್ರಮೋದ್ ನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು ಅಧಿಕಾರಿಗಳ ನಿರ್ಲಕ್ಷö್ಯಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬೀದಿನಾಯಿಗಳ ಕಾಟ ನಿಯಂತ್ರಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: suicide | ಮನನೊಂದು ತಾಯಿ ಮಗಳು ಆತ್ಮಹತ್ಯೆ
ಅಜ್ಜಯ್ಯಗುಡಿ ರಸ್ತೆಯ ತುಂಬೆಲ್ಲಾ ಮಾಂಸದ ಅಂಗಡಿಗಳಿದ್ದು, ಅಲ್ಲಿ ಓಡಾಡಲು ಜನರಿಗೆ ಕಷ್ಟವಾಗುತ್ತಿದೆ. ವಿಶೇಷವಾಗಿ ಶಾಲೆಗೆ ಮಕ್ಕಳು ಹೋಗುವಾಗ ದುರ್ವಾಸನೆಯನ್ನು (Municipality) ಸೇವಿಸಬೇಕಿದೆ.ಆದ್ದರಿಂದ ಅಲ್ಲಿರುವ ಅಂಗಡಿಗಳಿಗೆ ನೋಟಿಸ್ ನೀಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ: Adike Rate | 19 ನವೆಂಬರ್ 2024 | ಎಲ್ಲೆಲ್ಲಿ ಎಷ್ಟಿದೆ ಇಂದಿನ ಅಡಿಕೆ ರೇಟ್
ತಿಪ್ಪಕ್ಕ, ಸಾಕಮ್ಮ, ಪಾಲಮ್ಮ, ಜಯಲಕ್ಷ್ಮಿ, ಕವಿತಾಬೋರಯ್ಯ ಮುಂತಾದವರು ಕಳೆದ ಹಲವಾರು ತಿಂಗಳುಗಳಿಂದ ಯಾವುದೇ ವಾರ್ಡ್ಗಳಲ್ಲಿ ಡಿಡಿಟಿಫೌಡರ್ ಸಿಂಪಡಣೆಯಾಗಿಲ್ಲವೆಂದು ಆಕ್ಷೇಪಿಸಿದರು.