
Chitradurga news|nammajana.com|19-02-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದ ಅಭಿವೃದ್ಧಿ ವಿಚಾರ ಮತ್ತು ರಸ್ತೆ ಅಗಲೀಕರಣ ವಿಚಾರಕ್ಕೆ ನಗರಸಭೆ (Municipality) ಸದಸ್ಯರು ಮತ್ತು ಶಾಸಕರ ನಡುವೆ ಶೀತಲ ಸಮಯ ಆರಂಭವಾಗಿದೆ.
ಚಿತ್ರದುರ್ಗ ನಗರಸಭೆಯಲ್ಲಿ ಕಳೆದ ಬಾರಿ ಎರಡುವರೆ ವರ್ಷಗಳ ಕಾಲ ಬಿಜೆಪಿ ಆಡಳಿತವಿತ್ತು. ಆದರೆ ಉಳಿದ ಅವಧಿಗೆ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ವಿಫಲವಾಗಿ ಜೆಡಿಎಸ್-ಕಾಂಗ್ರೆಸ್-ಬಿಜೆಪಿ ಸದಸ್ಯರ ಒಳಗೊಂಡು ಪಪ್ಪಿ ಸಮ್ಮುಖದಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿತ್ತು. ಇದಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಸಹಕಾರ ಇತ್ತು ಎಂಬುದು ದುರ್ಗದ ರಾಜಕೀಯದಲ್ಲಿ ಎಲ್ಲಾರಿಗೂ ಗೊತ್ತಿರುವ ಸಂಗತಿಯಾಗಿದೆ.

ಆದರೆ ಮಂಗಳವಾರ ನಡೆದ ಚಿತ್ರದುರ್ಗ ನಗರಸಭೆ ಸಾಮಾನ್ಯ ಸಭೆಯಲ್ಲಿ ನಾನಾ ನೀನಾ ಎಂಬ ಸಂವಿಧಾನಾತ್ಮಕ ಅಂಶಗಳು ಸಭೆಯುದ್ದಕ್ಕೂ ಮಾತಿಗೆ ಮಳೆ ಸುರಿಸಿದರು. ಪಕ್ಷಾತೀತವಾಗಿ ಸದಸ್ಯರು ಶಾಸಕ ವೀರೇಂದ್ರ ಪಪ್ಪಿ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದರು. ಇದು ಒಂದೇ ಕಾರಣಕ್ಕೆ ಅದು ರಸ್ತೆ ಅಗಲೀಕರಣ ಸಮಯದಲ್ಲಿ ನಗರಸಭೆ ವಿಶ್ವಾಸ ಗಳಿಸಿಲ್ಲ ಎಂಬ ಒಂದು ವಿಷಯದಿಂದ ಪಪ್ಪಿ ವಿರುದ್ದ ನಗರಸಭೆ ಸದಸ್ಯರು ಕೆರಳಿ ಕೆಂಡಾವಾಗಿದ್ದು ಕಾಂಗ್ರೆಸ್ ಆಡಳಿತವಿದ್ದರು ಹಾಲಿ ಶಾಸಕರ ವಿರುದ್ದ ಸಿಡಿದಿದ್ದರಿಂದ ನಗರಸಭೆ ಪಪ್ಪಿ ಕೈ ತಪ್ಪಿತಾ ಎಂಬ ಅನುಮಾನ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.
ರಸ್ತೆ ಅಗಲೀಕರಣದ ವಿಚಾರದಲ್ಲಿ ಏಕ ಪಕ್ಷೀಯ ತೀರ್ಮಾನ ಕೈಗೊಳ್ಳಲಾಗಿದೆ ಮನಸ್ಸೋ ಇಚ್ಚೆ ಸಭೆ ಮಾಡುತ್ತಿದ್ದು ನಗರಸಭೆ ಕೌನ್ಸಿಲ್ಸ್ ಲೆಕ್ಕಕ್ಕೆ ಇಲ್ಲದಂತೆ ಮಾಡಿದರೇ ನಾವು (Municipality) ಸುಮ್ಮನಿರುತ್ತೇವಾ ಎಂಬ ರೀತಿಯಲ್ಲಿ ಸಭೆಯಲ್ಲಿ ಚರ್ಚೆಗಳು ನಡೆದವು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಗೊಪ್ಪೆ ಮಂಜುನಾಥ್, ಕಟ್ಟಡಗಳ ಅಳತೆ ಮಾಡಿ 21 ಮೀಟರ್‌ಗೆ ಕೆಂಪು ಮಾರ್ಕ್ ಹಾಕಲು ಯಾರು ಹೇಳಿದರು. ಮುಖ್ಯ ರಸ್ತೆ ಕಟ್ಟಡಗಳು ನಗರಸಭೆ ವ್ಯಾಪ್ತಿಗೆ ಬರುತ್ತವೆಯೇಇಲ್ಲವೋ, ‘ಈ ವಿಚಾರದಲ್ಲಿ ಕೌನ್ಸಿಲ್ ತೀರ್ಮಾನ ತೆಗೆದುಕೊಳ್ಳುವಂತಿಲ್ವ ಎಂಬ ಪ್ರಶ್ನೆಗಳನ್ನು ಸುರಿಸಿದರು.
ಈ ಮಾತಿಗೆ ಪ್ರತಿಕ್ರಿಯಿಸಿದ ಪೌರಾಯುಕ್ತ ರೇಣುಕಾ, ನಗರಸಭೆ ಕೌನ್ಸಿಲ್ ನಿರ್ಣಯ ಕೈಗೊಳ್ಳದ ಹೊರತು ಏನೂ ಮಾಡಲು ಬರುವುದಿಲ್ಲ, ಹಾಗಾಗಿಯೇ ರಸ್ತೆ ಒತ್ತುವರಿ ತೆರವು ವಿಷಯವ ಸಭೆಯ ಗಮನಕ್ಕೆ ತರಲಾಗಿದೆ ಎಂದರು. ಪೌರಾಯುಕ್ತರ (Municipality) ಮಾತು ಗೊಪ್ಪೆ ಮಂಜುನಾಥ್ ರಲ್ಲಿ ಸಿಟ್ಟಿಗೆ ಸಾಕ್ಷಿಯಾಯಿತು. ಒತ್ತುವರಿ ತೆರವೋ ಅಥವಾ ರಸ್ತೆ ಅಗಲೀಕರಣವೋ ಮೊದಲು ಸ್ಪಷ್ಟಪಡಿಸಿ. ಒತ್ತುವರಿ ಬೇರೆ, ತೆರವು ಬೇರೆ ಎಂದು ಸ್ಪಷ್ಟವಾಗಿ ತಿಳಿಸಿ ಎಂದು ಗುಡುಗಿದರು.
ಸದಸ್ಯ ದೀಪು ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಶಾಸಕರು ನಗರಸಭೆಯಲ್ಲಿ ನಡೆಸಿದ ಸಭೆಗೆ ಸದಸ್ಯರಿಗೆ ಆಹ್ವಾನವಿರಲಿಲ್ಲ. ಕೆಲ ಸದಸ್ಯರು ಸಭೆಗೆ ಹೋಗಲು ಮುಂದಾದಾಗ ಅವರನ್ನು ತಡೆದು ಹೊರ ಕಳಿಸಲಾಯಿತು. ಸದಸ್ಯರನ್ನು ಒಳಗೆ ಬಿಡಲ್ಲ ಎಂದರೆ ಏನರ್ಥ. ನಗರಸಭೆ ಸದಸ್ಯರ ಕತ್ತಲಲ್ಲಿ ಇಟ್ಟು ಸಭೆ ನಡೆಸಿದಉದ್ದೇಶ ಸ್ಪಷ್ಟವಾಗುತ್ತಿಲ್ಲ. ಕೌನ್ಸಿಲ್ ಒಪ್ಪಿಗೆ ಪಡೆಯದೇ ಹೇಗೆ ಗೋಡೆಗಳ ಮೇಲೆ ಮಾರ್ಕ್ ಮಾಡಿದಿರಿ ಎಂದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯ ಜೈಲುದ್ದೀನ್, ಕಳೆದ ಒಂದುವರೆ ತಿಂಗಳಿಂದ ನಗರಸಭೆಯಲ್ಲಿ ನೌಕರರಾರೂ ಕೆಲಸ ಮಾಡಿಲ್ಲ. ಎಲ್ಲರೂ ಕಟ್ಟಡಗಳ ಮೇಲೆ ಮಾರ್ಕಿಂಗ್ ಮಾಡಲು ಹೋಗಿದ್ದಾರೆ. ಸಾರ್ವಜನಿಕರು ಕೆಲಸವಾಗದೆ ಶಪಿಸಿ ವಾಪಾಸ್ಸು ಹೋಗಿದ್ದಾರೆ. ಕೌನ್ಸಿಲ್ ನಿರ್ಣಯ ಆಗದೆ ಮಾರ್ಕ್ ಮಾಡೋಕೆ ನೌಕರರ ಏಕೆ ಕಳಿಸಿಬೇಕಿತ್ತು ಎಂದು ಪ್ರಶ್ನಿಸಿದರು.
ಚಳ್ಳಕೆರೆ ವೃತ್ತದಿಂದ ಗಾಂಧಿ ವೃತ್ತದ ಮಾರ್ಗವಾಗಿ, ಕನಕ ವೃತ್ತದವರೆಗೂ ಆಗಲೀಕರಣ ಮಾಡಿದರೆ 400 ಕೋಟಿ ಹಣ ಬೇಕಾಗುತ್ತದೆ, ಇಷ್ಟೊಂದು ಹಣ ನಗರಸಭೆಯಲ್ಲಿ ಎಲ್ಲಿದೆ? 21 ಮೀಟರ್‌ಗಳವರೆಗೆ ತೆರವು ಮಾಡುವ ಉದ್ದೇಶ ಇದ್ದರೆ ಕಟ್ಟಡ ಕಟ್ಟಲು ಅನುಮತಿ ಏಕೆ ಕೊಟ್ಟಿರಿ. ಅಗಲೀಕರಣಕ್ಕೆ ಸರ್ಕಾರ (Municipality) ದುಡ್ಡುಕೊಡುತ್ತದೆಯೇ ಮಾಹಿತಿ ಕೊಡಿ ಎಂದು ಸದಸ್ಯ ಶ್ರೀನಿವಾಸ್ ಆಗ್ರಹಿಸಿದರು.
ತೆರವು ಕಾರ್ಯಾಚರಣೆಗೆ ಸರ್ಕಾರದಿಂದ ಯಾವುದೇ ರೀತಿಯ ಹಣ ಕೊಡುವುದಿಲ್ಲವೆಂದು ಪೌರಾಡಳಿತ ನಿರ್ದೇಶಕರು ಈಗಾಗಲೇ ಸುತ್ತೋಲೆ ಹೊರಡಿಸಿದ್ದಾರೆ. ಹಾಗಾಗಿ ಏನೇ ತೆರವು ಗೊಳಿಸಿದರೂ ಅದರ ವೆಚ್ಚ ನಗರಸಭೆಯೇ ಭರಿಸಬೇಕಾಗುತ್ತದೆ. ಹಾಗೊಂದು ವೇಳೆ ನಗರಸಭೆ ಅನುದಾನಕ್ಕಾಗಿ ಸರ್ಕಾರವನ್ನು (Municipality) ಕೋರಬಹುದು ಎಂದು ಪೌರಾಯುಕ್ತ ರೇಣುಕಾ ಹೇಳಿದರು.
ರಸ್ತೆ ಆಗಲೀಕರಣಕ್ಕೆ ಮಾರ್ಕ್ ಮಾಡಿರುವುದರಿಂದ ಜನ ನಮ್ಮನ್ನು ಬಿಡುತ್ತಿಲ್ಲ, ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರ ವರೆಗೂ ಯಾವಾಗ, ಎಷ್ಟು ಮೀಟರ್ ಒಡೆತ್ತಿರಾ ಎಂದುಕೇಳುತ್ತಿದ್ದಾರೆ. ಅಗಲೀಕರಣದ ಪ್ರಸ್ತಾಪವಾದ ನಂತರ ಯಾರೂ ಕಂದಾಯ ಕಟ್ಟುತ್ತಿಲ್ಲ, ನಗರಸಭೆಗೆ 2 ಕೋಟಿ ನಷ್ಟವಾಗಿದೆ. ಇದಕ್ಕೆ ಯಾರು ಹೊಣೆ ಎಂದು ಗೊಪ್ಪೆ (Municipality) ಮಂಜುನಾಥ್ ಪೌರಯುಕ್ತರ ವಿರುದ್ಧ ಕುಟುಕಿದರು.
ಇದನ್ನೂ ಓದಿ: ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ? Dina Bhavishya
ರಸ್ತೆ ಅಗಲೀಕರಣದ ವಿಚಾರದಲ್ಲಿ ಪೌರಾಯುಕ್ತರು ಸ್ಪಷ್ಟ ಮಾಹಿತಿ, ದಾಖಲಾತಿಗಳ ಕೌನ್ಸಿಲರಿಗೆ ನೀಡಿಲ್ಲ. ಹಾಗಾಗಿ ಈ ಬಗ್ಗೆ ಚರ್ಚೆ ಬೇಡ ಎನಿಸುತ್ತದೆ. ದಾಖಲಾತಿ ನೀಡಿದ ನಂತರ ಆಲೋಚಿಸೋಣ. ವಿಷಯ ಇಲ್ಲಿಗೆ ಕೈ ಬಿಡೋಣವೆಂದು ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರುಲ್ಲಾ ಹೇಳಿದಾಗ ಸಭೆ ಅನುಮೋದಿಸಿತು. ಅಧ್ಯಕ್ಷ ಸುನಿತಾ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು.
