
Chitradurga news|nammajana.com|28-11-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದಲ್ಲಿ ಪ್ರೇಮ ವಿವಾಹ ಹಿನ್ನೆಲೆಯಲ್ಲಿ (Murder) ಯುವಕನ ಭೀಕರ ಕಗ್ಗೊಲೆಯಾಗಿದೆ.
ಕೋಣನೂರು ಗ್ರಾಮದ (42) ವರ್ಷದ ವ್ಯಕ್ತಿ ಮಂಜುನಾಥ್ ಕೊಲೆಯಾದ ವ್ಯಕ್ತಿ. ಯುವತಿ ಪೋಷಕರು ಹಾಗೂ ಸಂಬಂಧಿಕರಿಂದ ವ್ಯಕ್ತಿಯ ಹತ್ಯೆಯಾಗಿದೆ ಎಂದು ವರದಿಯಾಗಿದೆ.

ಒಂದು ತಿಂಗಳ ಹಿಂದೆಯಷ್ಟೇ ಮಂಜುನಾಥ್ ಹಾಗೂ ಗ್ರಾಮದ ಯುವತಿ ರಕ್ಷಿತಾ (19) ನಡುವೆ ಮದುವೆ ನಡೆದಿತ್ತು. ಪ್ರೇಮ ವಿವಾಹದ ಬಳಿಕ ರಾಜಿ ಪಂಚಾಯಿತಿ ಕೂಡ ನಡೆದಿತ್ತು.
ಕೆಲ ದಿನಗಳ ಬಳಿಕ ಮದುವೆ ಮಾಡಿಕೊಡುವುದಾಗಿ ಹೇಳಿದ್ದರು. ಯುವತಿಯ ಪೋಷಕರು ಭರವಸೆ ನೀಡಿದ್ದ ಕಾರಣದಿಂದ ಮಗಳನ್ನು ಊರಿಗೆ ಕರೆದುಕೊಂಡು (Murder) ಹೋಗಲಾಗಿತ್ತು. ಈ ವೇಳೆ ಮಂಜುನಾಥ್ ಚಿತ್ರದುರ್ಗದ ಸಂಬಂಧಿ ಮನೆಯಲ್ಲಿ ವಾಸವಾಗಿದ್ದ.
20 ದಿನಗಳ ಬಳಿಕ ನಿನ್ನೆ ಕೋಣನೂರು ಗ್ರಾಮಕ್ಕೆ ತೆರಳಿದಾಗ ಏಕಾಏಕಿ ಈತನ ಮೇಲೆ ಹಲ್ಲೆ ಮಾಡಲಾಗಿದೆ. ಮಂಜುನಾಥ್ ಮನೆಯ ಮುಂಭಾಗದಲ್ಲಿಯೇ ಭೀಕರವಾಗಿ ಹಲ್ಲೆ ನಡೆಸಿ ದಾರುಣವಾಗಿ ಹತ್ಯೆ ಮಾಡಲಾಗಿದೆ.
ಮಂಜುನಾಥ್ ಮೇಲೆ ಕೋಲು,ಬಡಿಗೆ, ರಾಡಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಮಂಜುನಾಥ್ ತಂದೆ ಚಂದ್ರಪ್ಪ, ತಾಯಿ ಅನಸೂಯ ಮೇಲೂ ಹಲ್ಲೆಯಾಗಿದೆ. ಮಂಜುನಾಥ್ ಪೋಷಕರ ಕಾಲುಗಳ ಮೇಲೆ ಕಲ್ಲು ಎತ್ತಿ ಹಾಕಲಾಗಿದೆ.ಯುವತಿ ತಂದೆ ಜಗದೀಶ್, ದೊಡ್ಡಪ್ಪ ಈಶ್ವರಪ್ಪ, ಚಿಕ್ಕಪ್ಪ ನಿಂಗಪ್ಪ ದೊಡ್ಡಪ್ಪ ಬಸವರಾಜಪ್ಪ, ಪ್ರಸನ್ನ ಸೇರಿದಂತೆ ಕುಟುಂಬಸ್ಥರಿಂದ ಹಲ್ಲೆ ಕೃತ್ಯ ನಡೆದಿದೆ.
ಇದನ್ನೂ ಓದಿ: ವಾಣಿ ವಿಲಾಸ ಸಾಗರಕ್ಕೆ 577 ಕ್ಯೂಸೆಕ್ಸ್ ನೀರು | 28 ನವೆಂಬರ್ 2024 | Vani Vilasa Sagara Dam
ಗಾಯಾಳು ಮಂಜುನಾಥ್ ಪೋಷಕರಾದ ಚಂದ್ರಪ್ಪ, ಪತ್ನಿ ಅನಸೂಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲಾಸ್ಪತ್ರೆಗೆ ಎಸ್ಪಿ ರಂಜಿತ್ ಬಂಡಾರು ಭೇಟಿ, ಪರಿಶೀಲನೆ ಮಾಡಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿ (Murder) ಪೋಲೀಸರ ಹುಡುಕಾಟ ನಡೆಸಲಾಗುತ್ತಿದ್ದು, ಭರಮಸಾಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇಂದು ವಿದ್ಯುತ್ ವ್ಯತ್ಯಯ | ಬೆಳಗ್ಗೆ 10 ರಿಂದ ಸಂಜೆ 5 ವರಗೆ ಯಾವ್ಯಾವ ಏರಿಯಾದಲ್ಲಿ ಕರೆಂಟ್ ಇರಲ್ಲ | Power cut
