Chitradurga news | nammajana.com | 23-07-2025
ನಮ್ಮಜನ.ಕಾಂ,ಹೊಸದುರ್ಗ: ರಾಜಕೀಯ ಬೇರೆ, ಸಾಂಸಾರಿಕ ಜೀವನವೇ ಬೇರೆ ಆದರೆ ಇಲ್ಲೋಬ್ಬ ಮಹಿಳೆ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದುಕೋಂಡು ಸಪ್ತಪದಿ ತುಳಿದು ಕೈಹಿಡಿದ ಗಂಡನನ್ನೆ ತನ್ನ ಪ್ರಿಯಕರನಿಗಾಗಿ ತನ್ನ ಗಂಡನನ್ನೆ ಕೊಲೆ(Murder case) ಮಾಡಿಸಿರುವುದು ಇಡೀ ತಾಲೂಕನ್ನೆ ಬೆಚ್ಚಿ ಬೀಳಿಸಿದೆ.
ಇದನ್ನೂ ಓದಿ: ವಿದ್ಯಾರ್ಥಿ ನಿಲಯ ಪ್ರವೇಶಾತಿಗೆ ಅರ್ಜಿ ಆಹ್ವಾನ

ಕೊಲೆಯದ ವ್ಯಕ್ತಿಯನ್ನ ಮೂಲತಹ ತಾಲೂಕಿನ ಜಾನಕಲ್ಲು ಗಾಮದ ಪ್ರಸನ್ನ (೩೦) ಎಂದು ತಿಳಿದು ಬಂದಿದ್ದು ಈ ಸಂಬಂಧ ಈತ ಪತ್ನಿ ಸೇರಿ ಒಟ್ಟು ನಾಲ್ವರನ್ನು ಹೊಸದುರ್ಗ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತರನ್ನು ತಾಲೂಕಿನ ಬೆಲಗೂರು ಕಬ್ಬಳ ಗ್ರಾಮದ ಕಾರು ಚಾಲಕ ಯಶವಂತ (೨೮) ಅಜ್ಜಂಪುರ ತಾಲೂಕಿನ ಗಡಿಹಳ್ಳಿ ಗ್ರಾಮದ ಕಾರು ಚಾಲಕ ಲೋಹಿತ ಜಿ.ಪಿ, (೩೦) ಹೊಸದುರ್ಗ ತಾಲೂಕಿನ ಡಿ.ಮಲ್ಲಾಪುರ ಗ್ರಾಮದ ಕಾರು ಮತ್ತು ಅಟೋ ಚಾಲಕ ವೀರಭದ್ರಪ್ಪ (೨೪) ಹಾಗು ಕೊಲೆ(Murder)ಯಾದ ಪ್ರಸನ್ನ ಹೆಂಡತಿ (ಹಾಲಿ ವಾಸ ಬನಸೀಹಳ್ಳಿ) ಜಾನಕಲ್ಲು ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯೆ ಗಾಯತ್ರಿ. ಪಿ.ಆರ್ (೩೦).
ಪ್ರಕರಣದ ವಿವರ:
ಕಳೆದ ಮಾರ್ಚ್ ೧೭ ರಂದು ಜಾನಕಲ್ ಗ್ರಾಮದ ಪ್ರಸನ್ನ (೪೫) ಎನ್ನುವ ವ್ಯಕ್ತಿ ನಾಪತ್ತೆಯಾಗಿದ್ದರು. ಮಾರ್ಚ್ ೨೧ ರಂದು ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿ ಬಳಿ ಪ್ರಸನ್ನ ಅವರ ಶವ ಪತ್ತೆಯಾಗಿತ್ತು.
ಇದನ್ನೂ ಓದಿ: ಜಿ.ಪಂ. ಸಿಇಒ ಆಗಿ ಡಾ.ಆಕಾಶ್ ಅಧಿಕಾರ ಸ್ವೀಕಾರ | ಎಲ್ಲೆಲ್ಲಿ ಸೇವೆ, ಇಲ್ಲಿದೆ ವಿವರ
ಕೊಲೆ(murder) ಮಾಡಿ ಅರಣ್ಯದಲ್ಲಿ ಪ್ರಸನ್ನ ಅವರ ಶವವನ್ನು ಎಸೆದು ಹೋಗಲಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ವೃತ ವ್ಯಕ್ತಿ ಪ್ರಸನ್ನ ಅವರ ಪತ್ನಿ ಗಾಯತ್ರಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಲಿಂಗದಹಳ್ಳಿ ಮತ್ತು ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪನವರ ಕಾರು ಚಾಲಕ ಯಶವಂತ್ ನನ್ನು ಪೊಲೀಸರು ೬ ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಒಂದರಲ್ಲಿ ಯಶವಂತನನ್ನು ಸೇರಿದಂತೆ ಪೊಲೀಸರು ೪ ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252