Chitradurga news | nammajana.com | 10-9-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ತಳಕು ಠಾಣಾ ವ್ಯಾಪ್ತಿಯ ಕಾಲುವೇಹಳ್ಳಿಯ ಹೊರವಲಯದಲ್ಲಿ ಇದ್ದಿಲು ಸುಡಲು (Murder) ಮಹಾರಾಷ್ಟçದಿಂದ ಆಗಮಿಸಿದ್ದ ವಲಸೆ ಕಾರ್ಮಿಕರು ಅಲ್ಲೇ ಟೆಂಟ್ ಹಾಕಿಕೊಂಡು ಇದ್ದಿಲು ಸುಡುವ ಕೆಲಸವನ್ನು ಹಗಲುರಾತ್ರಿ ಮಾಡುತ್ತಿದ್ದರು.
ಭಾನುವಾರ ರಾತ್ರಿ ಕೆಲಸ ಮುಗಿದನಂತರ ಗಂಡ, ಹೆಂಡತಿ ಹರಿಶ್ಚಂದ್ರಪ್ಪ ಮತ್ತು ಯಶೋಧಮ್ಮ ಯಾವುದೋ ವಿಚಾರಕ್ಕಾಗಿ ಇಬ್ಬರಲ್ಲೂ ಮಾತಿನಚಕುಮುಕಿ ಆರಂಭವಾಗಿ ಜಗಳ ವಿಕೋಪಕ್ಕೆ ಹೋಗಿ ಇಬ್ಬರು ಪರಸ್ವರ ಹೊಡೆದಾಡಿಕೊಂಡಿದ್ದು, ಅಸ್ವಸ್ಥರಾದ ಇಬ್ಬರನ್ನೂ ಅಂಬ್ಯುಲೆನ್ಸ್ನಲ್ಲಿ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆ (Murder) ಸೋಮವಾರ ಬೆಳಗಿನ ಜಾವ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಗೆ ದಾಖಲಿಸಿದ ಕೆಲವೆ ಗಂಟೆಗಳಲ್ಲಿ ಹರಿಶ್ಚಂದ್ರಪ್ಪ ಮೃತಪಟ್ಟಿದ್ದು, ಹೆಂಡತಿ ಯಶೋಧಮ್ಮ ಅರೆಪ್ರಜ್ಞಾ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾಳೆ.
ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರಿಗೆ ಹರಿಶ್ಚಂದ್ರಪ್ಪನ ಸಾವಿಗೆ ಕಾರಣವೇನು ಎಂಬುವುದು ತಿಳಿದುಬಂದಿಲ್ಲ. ಹೊಡೆದಾಟದಿಂದ ಸಾವು ಸಂಭವಿಸಿದೇಯೇ ಅಥವಾ (Murder) ಯಾರಾದರೂ ಮಧ್ಯ ಪ್ರವೇಶಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೇ ಎಂಬ ಬಗ್ಗೆ ಪೊಲೀಸ್‌ರು ವಿಚಾರಣೆ ನಡೆಸುತ್ತಿದ್ಧಾರೆ.
ಇದನ್ನೂ ಓದಿ: Dina Bhavishya kannada: ದಿನ ಭವಿಷ್ಯ ಯಾರಿಗೆಲ್ಲ ಮನೆ ಖರೀದಿ ಯೋಗ?
ಘಟನೆ ನಡೆದ ಸ್ಥಳಕ್ಕೆ ಎಸ್ಪಿ ರಂಜಿತ್‌ಕುಮಾರ್ ಬಂಡಾರು, (Murder) ಡಿವೈಎಸ್ಪಿ ಟಿ.ಬಿ.ರಾಜಣ್ಣ, ವೃತ್ತ ನಿರೀಕ್ಷಕ ಹನುಮಂತಶಿರೇಹಳ್ಳಿ, ಪಿಎಸ್‌ಐ ಲೋಕೇಶ್ ಭೇಟಿ ನೀಡಿದ್ದರು. ತಳಕು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.