Chitradurga news|nammajana.com|4-10-2024
ನಮ್ಮಜನ.ಕಾಂ, ಚಿತ್ರದುರ್ಗ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರೀಯಕರನ ಜೊತೆ ಸೇರಿ ಪತ್ನಿ ತನ್ನ ಗಂಡನ ಕೊಲೆ ಮಾಡಿ (Murder) ಮುಗಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ನಡೆದಿದೆ.

ಪತ್ನಿ ತನ್ನ ಗಂಡನ ಕೊಲೆ ಮಾಡಿ ಹೊಟ್ಟೆ ಉರಿಯಿಂದ ಸತ್ತಿದ್ದಾನೆ ಎಂದು ನಾಟಕವಾಡಿದ್ದಾಳೆ.ಕೊಲೆಯಾದ ವ್ಯಕ್ತಿ ರಾಘವೇಂದ್ರ (Murder) (35) ಆಗಿದ್ದಾನೆ.
ಪಾಪಿ ಪತ್ನಿ ದಿವ್ಯ, ಆಕೆಯ ಚಿಕ್ಕಪ್ಪ ಮಾರಣ್ಣ ಹಾಗೂ ಪ್ರೀಯಕರ ರಾಜಣ್ಣ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದಾಳೆ.
ತನ್ನ ಗಂಡನಿಗೆ ನಿದ್ರೆ ಮಾತ್ರೆ ನೀಡಿ ಮಲಗಿಸಿ, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಕೊಲೆಯಾದ ರಾಘವೇಂದ್ರನ (Murder) ಮನೆಯಲ್ಲಿ ಕೃತ್ಯ ನಡೆದಿದೆ.
ತಳುಕು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು UDR ದಾಖಲಿಸಿಕೊಂಡಿದ್ದ ಪೊಲೀಸರಿಗೆ ತನಿಖೆಯಲ್ಲಿ ಕೊಲೆ ಸತ್ಯ (Murder) ಬಯಲಿಗೆ ಬಂದಿದೆ.
ಇದನ್ನೂ ಓದಿ: ಒಳ ಮೀಸಲಾತಿ ಅನುಷ್ಠಾನಕ್ಕೆ ಮುಖ್ಯಮಂತ್ರಿ ನಿವಾಸಕ್ಕೆ ಪಾದಯಾತ್ರೆ: ಪಾವಗಡ ಶ್ರೀರಾಮ್ |Inner reservation
ಪೋಲಿಸರು ದಿವ್ಯ, ಮಾರಣ್ಣ, ರಾಜಣ್ಣನ ಬಂಧಿಸಿದ್ದು ಸಿಪಿಐ ಹನುಮಂತಪ್ಪ ನೇತೃತ್ವದಲ್ಲಿ ಪ್ರಕರಣದ ತನಿಖೆ ಚುರುಕುಗೊಳಿದ್ದಾರೆ.
