Chitradurga news|Nammajana.com|22-8-2025
ನಮ್ಮಜನ.ಕಾಂ, ಚಿತ್ರದುರ್ಗ: ಸರ್ಕಾರಿ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿ ವರ್ಷಿತಾ ಕೊಲೆ ಪ್ರಕರಣಕ್ಕೆ (Murder) ಸಂಬಂಧಿಸಿದಂತೆ ಆರೋಪಿ ಕೆಳಗೋಟೆಯ ಚೇತನ್ (20) ಎಂಬಾತನನ್ನು ಪೊಲೀಸರು ಗುರುವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಚೇತನ್, ವರ್ಷಿತಾ ಜತೆ ಪ್ರೇಮ ಸಂಬಂಧ ಹೊಂದಿದ್ದು, ಎಂಟು ತಿಂಗಳ ಗರ್ಭಿಣಿಯಾಗಿದ್ದ ವರ್ಷಿತಾ ಮದುವೆಯಾಗುವಂತೆ ಒತ್ತಾಯ ಮಾಡಿದ್ದರಿಂದ ತಾನು ಕೊಲೆ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಚೇತನ್ ಒಪ್ಪಿಕೊಂಡಿದ್ದಾನೆ.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ರಂಜಿತ್ ಕುಮಾರ್ ಬಂಡಾರು, ”ಆರೋಪಿ ಚೇತನ್ (Murder) ವರ್ಷಿತಾಳನ್ನು ಆ.18ರಂದೇ ಕೊಲೆ ಮಾಡಿದ್ದಾನೆ. ಯಾರ ನೆರವನ್ನೂ ಪಡೆಯದೇ ಪೂರ್ವನಿಯೋಜಿತ ಸಂಚು ನಡೆಸಿ ಕೊಲೆ ಮಾಡಿದ್ದಾನೆ.
ವರ್ಷಿತಾ ಶವ ಪರೀಕ್ಷೆಯಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಗುರುತುಗಳು ಪತ್ತೆಯಾಗಿಲ್ಲ, ಆದರೂ ಪ್ರಕರಣದ ಇನ್ನಷ್ಟು ಖಚಿತತೆಗಾಗಿ ಎಫ್ ಎಸ್ಎಲ್ ವರದಿಯ ನೀರಿಕ್ಷೆಯಲ್ಲಿದ್ದೇವೆ” ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ ತಿಳಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಚಿತ್ರದುರ್ಗ ಕೆಳಗೋಟೆ ನಿವಾಸಿಯಾಗಿದ್ದ ಚೇತನ್, ಗಂಗಾವತಿಯಲ್ಲಿ ಒಂದು ಮಲ್ಟಿನೆಟ್ ವರ್ಕಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ಕಂಪನಿಗಾಗಿ ಇನ್‌ಸ್ಟಾಗ್ರಾಂನಲ್ಲಿ ಹೊಸ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ವರ್ಷಿತಾ ಪರಿಚಯ ಆಗಿದ್ದಾರೆ. ಬಿಎ ಎರಡನೇ ವರ್ಷದಲ್ಲಿ ಓದುತ್ತಿದ್ದ ವರ್ಷಿತಾಳಗೆ ಕೆಲಸ ಕೊಡಿಸುವ ಭರವಸೆ ನೀಡುತ್ತಾನೆ.
ಇದನ್ನೂ ಓದಿ:Gold Rate | ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
ಪರಸ್ಪರ ಪರಿಚಯದ ನಂತರ ಪ್ರೀತಿಯ ಕಡೆ ತಿರುಗಿದೆ. ಸ್ವಲ್ಪ ದಿನಗಳ ನಂತರ (Murder) ಚೇತನ್‌ಗೆ ಕ್ಯಾನ್ಸರ್ ಕಾಯಿಲೆ ಇರುವುದು ವರ್ಷಿತಾಗೆ ತಿಳಿದ ಅಂತರ ಕಾಯ್ದುಕೊಂಡು ಬೇರೊಬ್ಬ ಹುಡುಗನ ಜತೆ ಸ್ನೇಹ ಬೆಳೆಸಿದ್ದಾರೆ. ಇದೇ ವಿಷಯಕ್ಕೆ ಚೇತನ್, ವರ್ಷಿತಾ ಮೇಲೆ ತುಂಬಾ ಸಿಟ್ಟು ಬೆಳೆಸಿಕೊಂಡಿದ್ದ” ಎಂದು ಮಾಹಿತಿ ನೀಡಿದರು.
