
Chitradurga news|nammajana.com|28-02-2025
ನಮ್ಮಜನ.ಕಾಂ, ಚಿತ್ರದುರ್ಗ: ಮುರುಘಾ ಮಠದ ಬಸವ ಪುತ್ಥಳಿ ಅನುದಾನ ದುರ್ಬಳಕೆ ಆರೋಪದ ಹಿನ್ನಲೆ (Muruga Math) ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಹಣ ದುರ್ಬಳಕೆ ಸಂಕಷ್ಟ ಎದುರಾಗಿದ್ದು ಉನ್ನತ ತಜ್ಞರ ತಂಡದ ಮೂಲಕ ತನಿಖೆ ನಡೆಸಲು ಸರ್ಕಾರಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್ ಪತ್ರ ಬರೆದಿದ್ದಾರೆ.
ಸರ್ಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವ ಹೆಚ್ ಏಕಾಂತಯ್ಯ ಅವರು ಬಸವೇಶ್ವರ ಪುತ್ಥಳಿ ಅನುದಾನ ದುರ್ಬಳಕೆ ತನಿಖೆಗೆ ಮನವಿ ಮಾಡಿದ್ದರು.

ಹೆಚ್. ಏಕಾಂತಯ್ಯ ಮುರುಘಾ ಮಠದ ಭಕ್ತರು ಆಗಿದ್ದು ಫೋಕ್ಸೋ ಕೇಸಲ್ಲಿ ಮುರುಘಾಸ್ವಾಮಿ ಜೈಲು ಸೇರಿದ ಬಳಿಕ ತನಿಖೆಗೆ ದೂರು ನೀಡಿದ್ದರು.
ಹಣವನ್ನ ಷರತ್ತು ಉಲ್ಲಂಘಿಸಿ ಶ್ರೀ ಮಠದ ಪೀಠಾಧಿಪತಿ ದುರ್ಬಳಕೆ ಮಾಡಿದ್ದಾಗಿ CJ INFRA ENGG.PVT.LTD ಮತ್ತು JCPL ಸಂಸ್ಥೆಗೆ ಕಾನೂನು ಬಾಹಿರ ಗುತ್ತಿಗೆ ನೀಡಿದ್ದಾಗಿ ಸರ್ಕಾರದ ಹಣವನ್ನ ದುರ್ಬಳಕೆ ಮಾಡಿದ್ದಾಗಿ ಮನವಿ ಸಲ್ಲಿಕೆ ಮಾಡಿದ್ದರು.
ಒಟ್ಟು 280 ಕೋಟಿ ವೆಚ್ಚದಲ್ಲಿ ಪುತ್ಥಳಿ ನಿರ್ಮಿಸಲು ಪ್ಲಾನ್ ಮಾಡಿದ್ದರು. ಸರ್ಕಾರದ ಅನುದಾನ, ಮಠದ ಮೂಲದ ಹಣ ಬಳಕೆ ಮಾಡಿ ಪುತ್ಥಳಿ ನಿರ್ಮಿಸಲು ರೆಡಿಯಾಗಿದ್ದರು.
ದೂರು ಆದರಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ತನಿಖೆ ವರದಿ ಸಲ್ಲಿಕೆಯಾಗಿದ್ದು 2011 ರಿಂದ 2021 ರ ವರೆಗೆ ಹಂತ ಹಂತವಾಗಿ ಹಣ ಬಿಡುಗಡೆಯಾಗಿದೆ.
325 ಅಡಿ ಎತ್ತರದ ಬಸವೇಶ್ವರ ಕಂಚಿನ ಪುತ್ಥಳಿ ನಿರ್ಮಿಸಲು ಪ್ಲಾನ್ ಮಾಡಿದ್ದರು. ರಾಜ್ಯ ಸರ್ಕಾರಕ್ಕೆ ಡಿಸಿ ವೆಂಕಟೇಶ್ ರಿಂದ ಸಂಕ್ಷಿಪ್ತ ವರದಿ, ತನಿಖೆಗೆ ಪತ್ರ. ಕಂಚಿನ ಪ್ರತಿಮೆಗೆ ಸರ್ಕಾರದಿಂದ ಕೋಟಿ ಕೋಟಿ ಹಣ ಬಿಡುಗಡೆಯಾಗಿದ್ದು ಸರ್ಕಾರದಿಂದ ಬಿಡುಗಡೆಯಾದ ಅನುದಾನ ಖರ್ಚಿನ ಲೆಕ್ಕ ಮೋಸ ಆಗಿದೆ. ಕಂಚಿನ ಪ್ರತಿಮೆಗೆ ಸರ್ಕಾರದಿಂದ 40 ಕೋಟಿ ಅನುದಾನ ಮಂಜೂರುಗಿತ್ತು.
40 ಕೋಟಿಯಲ್ಲಿ ಮಠಕ್ಕೆ 35 ಕೋಟಿ ಹಣ ಬಿಡುಗಡೆ ಮಾಡಿದ್ದು ಉಲ್ಲೇಖಿಸಲಾಗಿದೆ. 35 ಕೋಟಿ ಕಾಮಗಾರಿ ಸ್ಥಳದಲ್ಲಿ ಕಂಡು ಬಂದಿರುವುದಿಲ್ಲ.5 ಕೋಟಿ ಹಣ ಪಂಚಾಯ್ತ್ ರಾಜ್ ಇಂಜಿನಿಯರ್ ಇಲಾಖೆ ಬಳಿ ಇದೆ.ಉಳಿದ 240 ಕೋಟಿಗೆ ಅನುದಾನ ಲಭ್ಯತೆ ಮಠದ ಬಳಿ ಇರುವುದಿಲ್ಲ.ಈ ವರೆಗೆ PWD ಯಿಂದ 29.49 ಕೋಟಿ ವೆಚ್ಚವಾಗಿದ್ದಾಗಿ ವರದಿ ನೀಡಲಾಗಿದೆ.ಬಾಕಿ ಹಣ ಕ್ರೂಡಿಕರಣಕ್ಕೆ ಮಠದ ಬಳಿ ಯಾವ ಯೋಜನೆಯೂ ಇಲ್ಲ. ಸರ್ಕಾರದ ಹಣವನ್ನ ಬ್ಯಾಕೆಂಡ್ ಬಳಕೆ ಮಾಡದೆ ಮೊದಲಿಗೆ ಬಳಕೆ ಮಾಡಿದ್ದುಸಂಪನ್ಮೂಲ ಕ್ರೂಡಿಕರಿಸುವ ಪ್ರಯತ್ನಿಸದ ಕಾರಣದಿಂದ ಸರ್ಕಾರದ ಹಣ UNFRUITFUL ಎಂದು ಪರಿಗಣಿಸಬಹುದಾಗಿರುತ್ತೆ.
10 ವರ್ಷಗಳಿಂದ ಯೋಜನೆ ಮಂದಗತಿಯಲ್ಲಿದೆ. ಸಮರ್ಪಕವಾಗಿ ಸರ್ಕಾದ ಹಣ ವಿನಿಯೋಗಿಸದೆ.ಪುತ್ಥಳಿ ಕಾಮಗಾರಿ ಫಲಪ್ರದವಾಗದೆ ಇರುವುದು ಕಂಡು (Muruga Math) ಬಂದಿದೆ.ಸರ್ಕಾರದ ಹಣ ಮಂಜೂರಾತಿ ಅನುಷ್ಠಾನ ಏಜನ್ಸಿ ಕುರಿತು ಸ್ಪಷ್ಟನೆ ಇಲ್ಲವಾಗಿದೆ.ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಜಿಲ್ಲಾ ತನಿಖಾ ತಂಡ ವರದಿ ನೀಡಿತ್ತು.ಬಳಿಕ ತಾಂತ್ರಿಕ ವರದಿ ಸಲ್ಲಿಕೆಗೆ PWD ಗೆ ಸೂಚನೆ ನೀಡಿದ್ದ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಿಸಿ ದಿವ್ಯಪ್ರಭು ಅಧಿಕಾರ ದಲ್ಲಿದ್ದಾಗ ಸೂಚನೆ ನೀಡಿದ್ದರು.
ಡಿಸಿ ಸೂಚನೆ ಮೇರೆಗೆ ತಾಂತ್ರಿಕ ವರದಿ ನೀಡಿರುವ PWD ಅಧಿಕಾರಿಗಳು ಇವರೆಗೆ 26 ಕೋಟಿ 35 ಲಕ್ಷ, 33 ಸಾವಿರ, 506 ರೂ,ಖರ್ಚು ಮಾಡಿದ್ದಾಗಿ ವರದಿ ಸಲ್ಲಿಕೆ.ಉಳಿದ ಮೊತ್ತದ ಕುರಿತು ಬ್ಯಾಂಕ್ ಪಾಸ್ ಬುಕ್ ದೃಡಿಕರಣ ಕೇಳಿದ್ದ ಜಿಲ್ಲಾಧಿಕಾರಿಗಳಿಗೆ ಪ್ರತಿಕ್ರಿಗೆ ನೀಡದೆ ಆಡಳಿತಾಧಿಕಾರಿಗಳ ವಿಳಂಬ ಧೋರಣೆ ಅನುಸರಿಸಿದ್ದಾರೆ.
ಜಿಲ್ಲಾ ಮಟ್ಟದ ತನಿಖಾ ತಂಡ, PWD ತಾಂತ್ರಿಕ ವರದಿ ಆಧರಿಸಿ ಸರ್ಕಾರಕ್ಕೆ ಪತ್ರ ಬರೆದಿರುವ ಡಿಸಿ ವೆಂಕಟೇಶ್ ಅವರು (Muruga Math) ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ತನಿಖಾ/ ತಜ್ಞರ ತಂಡ ರಚಿಸಿ ತನಿಖೆ ನಡೆಸುವುದು ಸೂಕ್ತ ಎಂದು ಪತ್ರ ಬರೆದಿದ್ದಾರೆ. ಒಟ್ಟು ಹಣದಲ್ಲಿ 4 ಕೋಟಿಗೂ ಹೆಚ್ಚು ಹಣ ಬಳಕೆಗೆ ದಾಖಲೆ ಇಲ್ಲ ಎಂಬುದು ಪರೋಕ್ಷ ಸಾಬೀತು? ಆದಂತೆ ಆಗಿದೆ.
ಇದನ್ನೂ ಓದಿ: chitradurga | ಹೊಳಲ್ಕೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಪರಮೇಶ್ವರಪ್ಪ ಆಯ್ಕೆ
ಫೋಕ್ಸೋ ಕೇಸಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗಿರುವ ಮುರುಘಾ ಶ್ರೀ ಗಳಿಗೆ ಮತ್ತೊಂದು ಸಂಕಷ್ಟ ಎದುರಾಗಬಹುದಾ ಎಂಬ ಪ್ರಶ್ನೆ ಎದುರಾಗಿದೆ.ಸದ್ಯ ಕೋರ್ಟ್ ಆದೇಶದಂತೆ ಮಠದಿಂದ ಹೊರಗಿರುವ ಮುರುಘಾ (Muruga Math) ಶ್ರೀ,,ಮಠದಲ್ಲಿದ್ದಾಗ ಹಣ ದುರ್ಬಳಕೆ ಮಾಡಿರುವುದಾಗಿ ಆರೋಪ ಕೇಳಿದ್ದು ದಾಖಲೆ ಸಹಿತ ಸರ್ಕಾರಕ್ಕೆ ಡಿಸಿ ವೆಂಕಟೇಶ್ ಪತ್ರ ಬರೆದಿದ್ದಾರೆ.ದಾಖಲೆ ಆಧರಿಸಿ ತನಿಖೆಯಾದ್ರೆ ಮುರುಘಾ ಶ್ರೀಗೆ ಮತ್ತೆ ಸಂಕಷ್ಟ ಜೊತೆಗೆ ಸರ್ಕಾರದ ಹಣ ದುರ್ಬಳಕೆ ಆರೋಪ ಸಾಬೀತಾದ್ರೆ ಶಿಕ್ಷೆ ಸಾಧ್ಯತೆ ಇದೆ.
