Chitradurga news |nammajana.com|19-9-2024
ನಮ್ಮಜನ.ಕಾಂ, ಸಿರಿಗೆರೆ: ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹುಟ್ಟೂರಾದ ಮುತ್ತುಗದೂರು ಕೆರೆಗೆ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಯಡಿ ಅವರ ಶ್ರದ್ದಾಂಜಲಿ ದಿನದಂದೇ ನೀರು ಹರಿಸಬೇಕೆಂಬ ಹಂಬಲ ತಮ್ಮದಾಗಿದೆ ಎಂದು (Muthugadur Lake) ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆಯಲ್ಲಿ ಮಂಗಳವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾ ಡಿದ ಶ್ರೀಗಳು, ಯೋಜನೆಯ ಕಾಮಗಾರಿ ಬಹುತೇಕ ಮುಗಿದಿದ್ದು, ಸಾಸಲುಗುಡ್ಡದ ಬಳಿಯ ಜಮೀನಿನಲ್ಲಿ ಚಿಕ್ಕ ಕಾಮಗಾರಿ ಬಾಕಿ ಇದೆ. ಅದು ಪೂರ್ಣಗೊಂಡರೆ ಸೆಪ್ಟೆಂ ಬರ್ 24ರಂದು ಮುತ್ತುಗದೂರು ಕೆರೆಗೆ ನೀರು (Muthugadur Lake) ಹರಿಯಲಿದೆ ಎಂದರು.
ಗುರುಗಳ ಶ್ರದ್ದಾಂಜಲಿ ದಿನವೇ ನೀರು ಬಂದರೆ ಅತೀವ ಸಂತೋಷವಾಗುತ್ತದೆ. ಮುತ್ತುಗದೂರು ಕೆರೆಯಲ್ಲಿ ಆಳವಡಿಸಿರುವ
ಮೋಟಾರ್ಗಳನ್ನು ಚಾಲು ಮಾಡಿದರೆ ಸಿರಿಗೆರೆ, ಹಿರೇಕಂದವಾಡಿ ಮತ್ತು ಭೀಮ ಸಮುದ್ರ ಕೆರೆಗಳಿಗೆ ನೀರು ಹರಿಯುತ್ತದೆ. ಈ ಕೆರೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು (Muthugadur Lake) ತುಂಬಿದರೆ ಈ ಭಾಗ ಮತ್ತೊಂದು ಮಲೆನಾಡಾಗಿ ಕಂಗೊಳಿಸುತ್ತದೆ ಎಂದರು.
ಸಾಸಲು ಗ್ರಾಮದ ಬಳಿಯ ಕಾಮಗಾರಿಗೆ ಅಡ್ಡಿಪಡಿಸದಂತೆ ಜಮೀನು ಮಾಲೀಕರನ್ನು ಸ್ಥಳಕ್ಕೆ ಕರೆಸಿ ಮಾತನಾಡಿಸಿದ (Muthugadur Lake) ಶ್ರೀಗಳು, ಇಲಾಖೆಯಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ, ಕಾರ್ಯದರ್ಶಿ ವಿಜಯಚಾರ್, ಕೆರೆ ಸಮಿತಿಯ ಸಿ. ಆರ್.ನಾಗರಾಜ್, ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಮಂಜುನಾಥ್, ಎಂ. ಬಸವರಾಜಯ್ಯ, ಸಿ.ಬಸವಕುಮಾರ್, ಆರ್.ಶಿವಮೂರ್ತಯ್ಯ, ಮುತಗದೂರು ರುದ್ರಪ್ಪ ಇದ್ದರು.