Chitradurga News | Nammajana.com |
9-5-2024
ನಮ್ಮಜನ.ಕಾಂ.ಚಳ್ಳಕೆರೆ: ತಾಲ್ಲೂಕಿನ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೈಲನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಚುನಾವಣಾಧಿಕಾರಿಯಾಗಿ ಸಿಡಿಪಿಒ ಸಿ.ಹರಿಪ್ರಸಾದ್ ಕಾರ್ಯನಿರ್ವಹಿಸಿದ್ದು ಅಂತಿಮವಾಗಿ ಜೆ.ಜಗನ್ನಾಥ ತಮ್ಮ ಎದುರಾಳಿ ಅಭ್ಯರ್ಥಿ ನಾಗೇಂದ್ರಪ್ಪ ಅವರಿಗಿಂತ ಒಂದು ಮತ ಹೆಚ್ಚು ಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರು.

ಪ್ರಸ್ತುತ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 16 ಸದಸ್ಯರಿದ್ದು, ಈ ಪೈಕಿ ಓರ್ವ ಸದಸ್ಯ ಇತ್ತೀಚೆಗೆಗಷ್ಟೇ ಮೃತಪಟ್ಟಿದ್ದ. ಈಗ ಹಾಲಿ 15 ಸದಸ್ಯರು ಪಂಚಾಯಿತಿಯಲ್ಲಿದ್ಧಾರೆ.
ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿ ಮುಗಿದು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನೂತನ ಆಯ್ಕೆ ನಡೆದಿದೆ. 15 ಸದಸ್ಯರು ಮತದಾನದಲ್ಲಿ ಪಾಲ್ಗೊಂಡು ಜಗನ್ನಾಥರವರಿಗೆ 8 ಮತ, ನಾಗೇಂದ್ರಪ್ಪನವರಿಗೆ 7 ಮತಗಳು ಲಭ್ಯವಾಗಿ ಜಗನ್ನಾಥ ಅವರು ಗೆಲುವಿಗೆ ನಗೆ ಬೀರಿದ್ದಾರೆ.
ಅಧ್ಯಕ್ಷ ಸ್ಥಾನ ಪಡೆದ ಜೆ.ಜಗನ್ನಾಥ ಮಾತನಾಡಿ ನನ್ನನ್ನು ಪಂಚಾಯಿತಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರನ್ನು ಅಭಿನಂದಿಸುವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವೆ ಎಂದರು.
ಇದನ್ನೂ ಓದಿ: ಆಟೋ ಬೈಕ್ ಗೆ ಡಿಕ್ಕಿ ಹೊಡೆದ ಲಾರಿ : ಬೈಕ್ ಸವಾರ ಸಾವು
ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಾಂತಕ್ಕ, ಸದಸ್ಯರಾದ ಜಯಲಕ್ಷ್ಮಿ, ಶಾಂತಮ್ಮ, ಗಂಗಮ್ಮ, ಪಾಲಯ್ಯ, ಚಿದಾನಂದ, ಪಿಡಿಒ ನಾಗರಾಜು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252