Chitradurga news|nammajana.com|2-8-2024
ನಮ್ಮಜನ.ಕಾಂ, ನಾಯಕನಹಟ್ಟಿ: ಬಡತನ ಮೀರಿದ ಬದುಕು ಕಟ್ಟಿಕೊಳ್ಳಲು ಉತ್ತಮ ಶಿಕ್ಷಣ ನೀಡಿ ಎಂದು ನಿಕಟ ಪೂರ್ವ (Nayakanahatti) ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.
ಶುಕ್ರವಾರ ಪಟ್ಟಣದ ಹೊರವಲಯದಲ್ಲಿ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಶುದ್ಧ ನೀರಿನ (Nayakanahatti) ಉಪಕರಣಗಳನ್ನು ನೀಡಿದ ಪ್ರಯುಕ್ತ ಅಭಿನಂದನೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣದ ಜೊತೆಯಲಿ ಶಿಸ್ತು ಮತ್ತು ಸಂಸ್ಕಾರವನ್ನು ಕಲಿಸಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ (Nayakanahatti) ಶಿಕ್ಷಣದ ಜೊತೆಯಲ್ಲಿ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಆಹಾರದ ಜೊತೆ ಉತ್ತಮ ಕುಡಿಯುವ ನೀರು ಸಹ ಅಗತ್ಯವಾಗಿ ಬೇಕು. ಅನೇಕ ಕಾಯಿಲೆಳಿಂದ (Nayakanahatti) ಮುಕ್ತಿವಾಗಿರಲು ಶುದ್ದ ಕುಡಿಯುವ ಅಗತ್ಯ ಎಂದು ತಿಳಿಸಿದರು.
ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತನಹಟ್ಟಿ ಗೌಡ್ರು ಮಾತನಾಡಿ ನಿಕಟ ಪೂರ್ವ ತಹಶೀಲ್ದಾರ್ ರಘುಮೂರ್ತಿ ಸಾಮಾಜಿಕ ಕಳಕಳೆ (Nayakanahatti) ಉಳ್ಳವಂತಹ ವ್ಯಕ್ತಿ ಆಗಿದ್ದಾರೆ.
ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುವ ಮೂಲಕ ಈ ಹಿಂದೆ ಚಳ್ಳಕೆರೆ ತಹಶೀಲ್ದಾರ್ ಆಗಿ ಉತ್ತಮ ಕೆಲಸ ಮಾಡಿದ್ದರು. ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಸ್ಪಂದಿಸುವ ಮೂಲಕ ಸಮಸ್ಯೆ ಮುಕ್ತ ಗ್ರಾಮ ಮಹಾಮಾರಿ ಕರೋನಾ ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ.
ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಸ್ಪರ್ಧಾತ್ಮಕ ಕೋರ್ಸ್ ಗಳಿಗೆ ಸುಮಾರು ಒಂದು ಸಾವಿರ ಬಡ ವಿದ್ಯಾರ್ಥಿಗಳಿಗೆ (Nayakanahatti) ಸ್ಪರ್ಧಾತ್ಮಕ ತರಬೇತಿ ಕೊಡಿಸಿದ್ದರು. ವಿದ್ಯಾರ್ಥಿಗಳಿಗೆ ಅನುಕೂಲವನ್ನು ಕಲ್ಪಿಸಿದ್ದಾರೆ. ಈ ದಿನ ಡಾನ್ ಬಾಸ್ಕೋ ಶಾಲೆಗೆ ಉಚಿತವಾಗಿ ಶುದ್ಧ ನೀರಿನ ಉಪಕರಣವನ್ನು ನೀಡಿರುವುದು ಶ್ಲಾಘನೀಯ ಎಂದರು.
ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲಾ ಸಂಸ್ಥೆಯಿಂದ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ರವರಿಗೆ ಸನ್ಮಾನಿಸಲಾಯಿತು.
ಇದನ್ನೂ ಓದಿ: Child Marriage: ಬಾಲ್ಯ ವಿವಾಹ, FIR ದಾಖಲು
ಈ ಸಂದರ್ಭದಲ್ಲಿ ಹೋಬಳಿ ನೀರಾವರಿ ಸಾಮಾಜಿಕ ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ.ಮುದಿಯಪ್ಪ, ಗಜ್ಜುಗಾನಹಳ್ಳಿ ಜಿ ಎಸ್. ತಿಪ್ಪೇಸ್ವಾಮಿ, ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಎಸ್. ಟಿ.ಬೋರಸ್ವಾಮಿ, ಆಡಳಿತ ಅಧಿಕಾರಿ ಎಚ್ .ಎನ್.ಉಮಾ, ಮುಖ್ಯ ಶಿಕ್ಷಕ ಟಿ. ಪಾಲಯ್ಯ ಮತ್ತು ಶಿಕ್ಷಕರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252