Chitradurga news|nammajana.com|27-6-2024
ನಮ್ಮಜನ.ಕಾಂ, ಚಳ್ಳಕೆರೆ: ವಿಶ್ವಮಟ್ಟದಲ್ಲಿ ಖ್ಯಾತಿಯಾದ ಬೆಂಗಳೂರು ನಗರ ಇಂದು ಹಲವಾರು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಕರ್ನಾಟಕ ಬೆಂಗಳೂರು ಎಂದರೆ ಪ್ರತಿಯೊಬ್ಬ ವ್ಯಕ್ತಿಯೂ ಇಷ್ಟಪಡುವ ಮಹಾನ್ ನಗರವಾಗಿದೆ. ನಾಡಪ್ರಭುಕೆಂಪೇಗೌಡರ (Nadaprabhu Kempegowda Jayanti challakere) ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಕ್ಷೇತ್ರದ ಶಾಸಕ ಕರ್ನಾಟಕ ರಾಜ್ಯ ಸಣ್ಣಕೈಗಾರಿಕೆ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಗುರುವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಒಕ್ಕಲಿಗರ ಸಂಘ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ ೫೧೫ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚಳ್ಳಕೆರೆ ತಾಲ್ಲೂಕು ಸೇರಿದಂತೆ ರಾಜ್ಯವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯನ್ನು ಹೊಂದಿರುವ ಒಕ್ಕಲಿಗರ ಸಮುದಾಯ ಎಲ್ಲಾ ಜನಾಂಗದ ಗೌರವಕ್ಕೆ ಪಾತ್ರವಾಗಿದೆ. ನಾಡಪ್ರಭು ಕೆಂಪೇಗೌಡರು ಅಚಲವಾದ ದೃಢನಿರ್ಧಾರ ಕೆಲಸವನ್ನು ಮಾಡಲೇಬೇಕೆಂಬ ಸಂಕಲ್ಪ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ರೇಹಾನ್‌ಪಾಷ, ಬೆಂಗಳೂರು ನಿರ್ಮಾಣದ ಕರ್ತೃ ನಾಡಪ್ರಭುಕೆಂಪೇಗೌಡರ ಸ್ಮರಣೆ ನಮ್ಮಲ್ಲರಿಗೂ ಸ್ಪೂರ್ತಿದಾಯಕ. ಹಲವಾರು ಸಮಸ್ಯೆಗಳ ನಡುವೆಯೂ ಅವರು ಪ್ರಾಮಾಣಿಕವಾಗಿ ಮಾಡಿದ ಸೇವೆಯನ್ನು ನಾವೆಲ್ಲರೂ ನಿತ್ಯ ನೆನಪಿಸಿಕೊಳ್ಳಬೇಕು, ಕೆಂಪೇಗೌಡರು (Nadaprabhu Kempegowda Jayanti challakere) ಎಲ್ಲರಿಗೂ ಆದರ್ಶಪ್ರಾಯರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಚನ್ನಕೇಶವ ಮಾತನಾಡಿ, ಬೆಂಗಳೂರಿನ ಅಭಿವೃದ್ದಿಯನ್ನು ನಾಡೇ ಮೆಚ್ಚುವಂತೆ ಮಾಡಿದ ಕೆಂಪೇಗೌಡರ ಆದರ್ಶಗಳು ಶಾಸಕ ಟಿ.ರಘುಮೂರ್ತಿಯವರು ಮೈಗೂಡಿಸಿಕೊಂಡಿದ್ಧಾರೆ ಎಂದರೆ ತಪ್ಪಲ್ಲ. ಕಾರಣ, ಚಳ್ಳಕೆರೆ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚು ಶ್ರಮಿಸಿದ ಶಾಸಕರನ್ನು ಚಳ್ಳಕೆರೆಯ ಕೆಂಪೇಗೌಡ ಎಂದರು.
ಇದನ್ನೂ ಓದಿ: ಈಡೀಸ್ ಲಾರ್ವಾ ಸಮೀಕ್ಷೆ | ಸ್ವಯಂ ಸೇವಕರ ಆಯ್ಕೆ | ಮೊದಲ ಬಂದವರಿಗೆ ಆದ್ಯತೆ| Aedes larvae sarvey
ಕೆಂಪೇಗೌಡರ (Nadaprabhu Kempegowda Jayanti challakere) ಸುಧೀರ್ಘ ಜೀವನ, ಸಾಧನೆಯ ಬಗ್ಗೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ.ರವೀಶ್ ಉಪನ್ಯಾಸ ನೀಡಿದರು. ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಎಚ್.ಆನಂದಪ್ಪ, ವಕೀಲ ಹನುಮಂತರಾಯ, ಬೆಳಗೆರೆ ಚಂದ್ರಪ್ಪ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಕೆ.ವೀರಭದ್ರಪ್ಪ, ರಮೇಶ್‌ಗೌಡ, ಸುಮಕ್ಕ, ಕವಿತಾ, ಎಂ.ಜೆ.ರಾಘವೇಂದ್ರ, ನಾಮಿನಿ ಸದಸ್ಯರಾದ ಬಡಗಿಪಾಪಣ್ಣ, ನೇತಾಜಿಪ್ರಸನ್ನ, ಅನ್ವರ್‌ಮಾಸ್ಟರ್, ವೀರಭದ್ರಪ್ಪ, ಕೆಡಿಪಿ ಸದಸ್ಯ ಸುರೇಶ್‌ಕುಮಾರ್, ಕೃಷ್ಣಮೂರ್ತಿ, ಪ್ರಹ್ಲಾದ್, ಷಣ್ಮುಖಪ್ಪ, ವೀರೇಶ್, ನಾಗೇಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.