Chitradurga news|nammajana.com|9-10-2024
ನಮ್ಮಜನ.ಕಾಂ, ಚಳ್ಳಕೆರೆ: ಇತ್ತೀಚೆಗೆ ಬಂದ ಉತ್ತಮ ಮಳೆಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಕೆರೆಗಳು (Nagarngere lake) ತುಂಬಿ ಹರಿಯುತ್ತಿರುವುದು ಸಂತಸ ತಂದಿದೆ ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಬುಧವಾರ ಮಧ್ಯಾಹ್ನ ತುಂಬಿಕೋಡಿಬಿದ್ದ ನಗರಂಗೆರೆ ಕೆರೆಗೆ ಭೇಟಿ ನೀಡಿ, ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿ ಮಾತನಾಡಿದರು.

ವಿಶೇಷವಾಗಿ ನಗರಂಗೆರೆ ಕೆರೆ ಈ ವರ್ಷವೂ ತುಂಬಿ ಕೋಡಿಬಿದಿದ್ದ ಪರಿಣಾಮ ಈ ಭಾಗದ ಜನರಲ್ಲಿ ಸಂತೋಷ ಮನೆ ಮಾಡಿದೆ. ಗ್ರಾಮದ ಜನರಲ್ಲಿ ಹೊಸ ಉತ್ಸಾಹ (Nagarngere lake) ಕಾಣಲಾಗುತ್ತಿದೆ, ಕಳೆದ ೨೦೨೨ರಲ್ಲಿ ಭಾರಿಪ್ರಮಾಣದ ಜನರನ್ನು ಸೇರಿಸಿ ತೆಪ್ಪೋತ್ಸವ ಆಚರಿಸಲಾಗಿತ್ತು.
ಮತ್ತೊಮ್ಮೆ ಗ್ರಾಮದ ಕೆರೆ ತುಂಬಿದ್ದು, ಈ ಭಾಗದಲ್ಲಿ ಇನ್ನೂ ಮುಂದೆ ಉತ್ತಮ ಬೆಳೆಯನ್ನು ನಿರೀಕ್ಷೆ ಮಾಡಬಹುದು. ಪ್ರಸ್ತುತ ಈ ವರ್ಷದ ಮಳೆಯಲ್ಲಿ ಮೊದಲ ಬಾರಿಗೆ ಈ ಕೆರೆಕೋಡಿಬಿದ್ದಿರುವುದು ವಿಶೇಷ. ಗ್ರಾಮದ ಕೆರೆಯ ನೀರು (Nagarngere lake) ಸರಾಗವಾಗಿ ಹರಿಯುತ್ತಿದ್ದು, ಏನಾದರೂ ಸಮಸ್ಯೆ ಇದ್ದರೆ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಒಳ ಮೀಸಲಾತಿ ಜಾರಿಗಾಗಿ ರಾಜ್ಯಾದ್ಯಂತ ಹೋರಾಟ: ಸಂಸದ ಗೋವಿಂದ ಕಾರಜೋಳ | Internal reservation
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ ರಂಗಸ್ವಾಮಿ, ಕೆಡಿಪಿ ಸದಸ್ಯ ಅಂಗಡಿರಮೇಶ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಫೇಸ್ವಾಮಿ, ಸದಸ್ಯರಾದ ಎಂ.ಕುಮಾರಸ್ವಾಮಿ, ಹಿದಾಯಿತ್‌ವುಲ್ಲಾ, ಶೈಲಪ್ಪ, ಎನ್.ಮಂಜುನಾಥ, ಗ್ರಾಮದ ಮುಖಂಡರಾದ ಸಿ.ಓಬಯ್ಯ, ತಿಪ್ಫೇರುದ್ರಪ್ಪ, ಮೈಲಾರಪ್ಪ, ಸಣ್ಣಬೋರಣ್ಣ, ಪಾಲನೇತ್ರನಾಯಕ, ಮೈನಾಬಾಬು, ಡೈರಿಮಂಜಣ್ಣ, ಶಲ್ಯದ್ಯಾಮಣ್ಣ, ಅಂಗಡಿಬಸವರಾಜು, ವಸಂತಕುಮಾರ್, ಸುದರ್ಶನ್, ಮಂಜುನಾಥಯ್ಯ ಮುಂತಾದವರು ಪಾಲ್ಗೊಂಡಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252