
Chitradurga news|nammajana.com|15-02-2025
ನಮ್ಮಜನ.ಕಾಂ, ಚಿತ್ರದುರ್ಗ: ಮಹಾತ್ಮಾಗಾಂಧಿ ನರೇಗಾ (Narega) ಯೋಜನೆಯ ಮಾರ್ಗಸೂಚಿ ಅನುಸಾರ ಕೆಲಸ ನಿರ್ವಹಣೆ ಮಾಡಬೇಕು ಜತೆಗೆ ಗುಣಮಟ್ಟದ ಕಾಮಗಾರಿಗಳನ್ನು ಅನುಷ್ಠಾನ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿಗೆ ಗುರುವಾರ ಭೇಟಿ ನೀಡಿ, ಮಹಾತ್ಮಾ ಗಾಂಧಿ ನರೇಗಾ (Narega) ಯೋಜನೆಯಡಿ ಅನುಷ್ಠಾನಗೊಂಡ ಎನ್ಆರ್ಎಲ್ಎಂ ಶೆಟ್, ಚರಂಡಿ, ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಕಟ್ಟಡ ಪರಿಶೀಲನೆ ನಡೆಸಿದರು.

ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳ ಗುಣಮಟ್ಟ ಕಳಪೆಯಾದಲ್ಲಿ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇಂಜಿನಿಯರ್ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನರೇಗಾ ಯೋಜನೆಯ ಕಡತಗಳು ಚೆಕ್ಲಿಸ್ಟ್ ಪ್ರಕಾರವೇ ನಿರ್ವಹಿಸಬೇಕು. ಇಲ್ಲಾವಾದಲ್ಲಿ ಪಿಡಿಒ ಅವರೇ ನೇರ ಜವಾಬ್ದಾರರು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳೊಂದಿಗೆ ಮುಕ್ತ ಸಮಾಲೋಚನೆ ನಡೆಸಿ ಗ್ರಾಮಗಳ ಅಭಿವೃದ್ಧಿಗೆ ನಿಮ್ಮಗಳ ಪಾತ್ರ ಮಹತ್ವವಾದದ್ದು. (Narega) ಆದುದರಿಂದ ಗ್ರಾಮ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವಂತೆ ಕೋರಿದರು.
ಇದನ್ನೂ ಓದಿ: Horticulture | ಚಿತ್ರದುರ್ಗದಲ್ಲಿ ಮೂರು ದಿನ ಫ್ಲವರ್ ಶೋ
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ. ತಿಮ್ಮಪ್ಪ, ಎಡಿಪಿಸಿ ಮೋಹನ್ ಕುಮಾರ್, ಚಳ್ಳಕೆರೆ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಹೆಚ್. ಶಶಿಧರ್, ನರೇಗಾ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ತಾಲ್ಲೂಕಿನ (Narega) ತಾಂತ್ರಿಕ ಸಂಯೋಜಕರು, ತಾಲ್ಲೂಕು ಐಇಸಿ ಮತ್ತು ಎಂಐಎಸ್ ಸಂಯೋಜಕರು, ಗ್ರಾಮ ಪಂಚಾಯಿತಿ ತಾಂತ್ರಿಕ ಸಹಾಯಕರು, ಬಿಎಫ್ಟಿ ಮತ್ತು ಜಿ.ಕೆ.ಎಂ ಕರವಸೂಲಿಕಾರರು, ಗಣಕಯಂತ್ರ ನಿರ್ವಾಹಕರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಹಾಜರಿದ್ದರು.
