Chitradurga news|nammajana.com|22-10-2024
ವರದಿ: ರಾಜ ಸಿರಿಗೆರೆ
ನಮ್ಮಜನ.ಕಾಂ, ಸಿರಿಗೆರೆ: ತಡರಾತ್ರಿ ಮತ್ತೆ ಆರ್ಭಟಿಸಿದ ವರುಣನ ಮುನಿಸಿಗೆ ರಾಷ್ಟ್ರೀಯ ಹೆದ್ದಾರಿ 48 ಕ್ಕೆ ಹೊಂದಿಕೊಂಡಿರುವ ಕೊಳಹಾಳ್ ಗ್ರಾಮದ ಜನರು ಅಕ್ಷರಶಃ ನೊಂದು ಹೋಗಿದ್ದಾರೆ. ಆದರೆ ಅವರ ಮುನಿಸು ವರುಣ (National Highway) ದೇವನ ಮೇಲಿರದೆ, ತಮ್ಮ ಗ್ರಾಮವನ್ನು ಸೀಳಿಕೊಂಡು ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿದ ಪುಣ್ಯಾತ್ಮರ ಮೇಲಿದೆ.

ಇಂದು ಬೆಳಗಾಗುತ್ತಿದ್ದಂತೆ ಗ್ರಾಮಸ್ಥರು ಮನೆಗಳ ಮುಂದೆಯೇ ಹಾಯ್ದು ಹೋಗಿದ್ದ ರಸ್ತೆಯೇ ಕಾಣದಂತೆ ಒಂದು ಕಿ.ಮೀ.ಗೂ ದೂರದಿಂದ ಮೊಣಕಾಲುಮಟ್ಟದ ನೀರು ನಿಂತಿರುವುದು ಅರಿವಿಗೆ ಬಂದಿದೆ.
ಗ್ರಾಮಕ್ಕೆ ಹೊಂದಿಕೊಂಡಿರುವಂತೆ ಪಿ.ಎನ್.ಸಿ. ಯವರು ಪ್ಲೈ ಓವರ್ ನಿರ್ಮಾಣ ಮಾಡಿ ಕೆಳಗಿನ ಸರ್ವಿಸ್ ರಸ್ತೆಯನ್ನು ಕಳಪೆ ಮಾಡಿದ್ದಾರೆ. ಪರಿಣಾಮವಾಗಿ ನೀರು ಹರಿಯಲು ಜಾಗವೂ ಇಲ್ಲದ್ದರಿಂದ ರಸ್ತೆಯುದ್ದಕ್ಕೂ ನೀರು ನಿಂತು ಜನರಿಗೆ ಸಂಕಷ್ಟ ಉಂಟು ಮಾಡಿದೆ.
ಗ್ರಾಮದ ಬದಿಯಲ್ಲಿಯೇ ಇರುವ ವ್ಯವಸಾಯ ಸೇವಾ ಸಹಕಾರ ಸಂಘದ ಕಚೇರಿ, ಹಲವು ಮನೆಗಳಿಗೂ ನೀರು ನುಗ್ಗಿದೆ. ರಸ್ತೆಯ ಬದಿಯಲ್ಲಿ ರಾಶಿ ಮಾಡಿದ್ದ ಕಟಾವಿನ ಬೆಳೆಗಳು ಸಹ ನೀರಲ್ಲಿ ಮುಳುಗಿ ಹೋಗಿವೆ.
ಅಷ್ಟಲ್ಲದೆ ಸೋಮವಾರ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ವಿತರಣೆ ಮಾಡುತ್ತಿದ್ದ ಪಡಿತರವನ್ನು ಮನೆಗಳಿಗೆ ಸಾಗಿಸಲು ಗ್ರಾಹಕರು ಪಡಿಪಾಟಲು ಪಡುತ್ತಿದ್ದುದು (National Highway) ಸಾಮಾನ್ಯವಾಗಿತ್ತು. ಮಕ್ಕಳು, ಮಹಿಳೆಯರು ನೀರಿಗೆ ಇಳಿದು ಪಡಿತರ ಪಡೆದು ನೀರಿನಲ್ಲಿ ಸಾಗುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಸಿರಿಗೆರೆ ಸರ್ಕಲ್‌ನಿಂದ ಕೊಳಹಾಳ್ ವರೆಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಹೊಣೆ ಹೊತ್ತಿದ್ದ ಪಿ.ಎನ್.ಸಿ. ಸಂಸ್ಥೆಯವರು ಸರ್ವಿಸ್ ರಸ್ತೆಯನ್ನೂ ನಿರ್ಮಿಸಿದ್ದಾರೆ. ಆದರೆ ಆ ರಸ್ತೆ ಕಳಪೆ ಕಾಮಗಾರಿಯಿಂದ ಕೂಡಿದ್ದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ರಸ್ತೆಯ ಬದಿಗೆ ನಿರ್ಮಿಸಬೇಕಾಗಿದ್ದ ಚರಂಡಿಯನ್ನು ಗುಣಾತ್ಮಕವಾಗಿ ನಿರ್ಮಾಣ ಮಾಡದೇ ಇರುವುದು ಇದಕ್ಕೆಲ್ಲಾ ಕಾರಣವಾಗಿದೆ ಎಂದು ಗ್ರಾಮಸ್ಥರು ಹೇಳಿದರು.
ಸರ್ವಿಸ್ ರಸ್ತೆಗಿಂತ ಎತ್ತರದಲ್ಲಿ ಚರಂಡಿ ನಿರ್ಮಾಣ ಮಾಡಿರುವುದರಿಂದ ನೀರು ಸಲೀಸಾಗಿ ಹರಿಯದೆ ರಸ್ತೆಯಲ್ಲಿ ನಿಲ್ಲುತ್ತಿದೆ. ಈ ವಿಷಯವನ್ನು ಹಲವು ಬಾರಿ ಪಿಎನ್‌ಸಿ ಕಂಪನಿಯ ಅಧಿಕಾರಿಗಳಿಗೆ ಹೇಳಿದ್ದರೂ ಅವರು ನಿರ್ಲಕ್ಷ್ಯ (National Highway) ತೋರಿದ್ದಾರೆ ಎಂದು ಗ್ರಾಮ ಪಂಚಾಯ್ತಿಯ ಸದಸ್ಯ ಕೊಳಹಾಳ್ ರಾಜಣ್ಣ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ವಾಣಿ ವಿಲಾಸ ಸಾಗರ ಜಲಾಶಯ ಇಂದಿನ ನೀರಿನ ಮಟ್ಟ | Vani Vilasa Sagara Dam
ಸಿರಿಗೆರೆ ಸರ್ಕಲ್‌ನಲ್ಲೂ ಇದೇ ಗತಿ!
ಮತ್ತೊಂದು ಪ್ಲೈಓವರ್ ನಿರ್ಮಾಣ ಮಾಡಿರುವ ಸಿರಿಗೆರೆಯ ಸರ್ಕಲ್ಲಿನಲ್ಲಿಯೂ ಪರಿಸ್ಥಿತಿ ಇದೇ ರೀತಿ ಇದೆ. ಸರ್ವಿಸ್ ರಸ್ತೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಅಲ್ಲಿ ಹೊಂಡವೇ ಸೃಷ್ಟಿಯಾದಂತಾಗಿದೆ. ಸಾಕಷ್ಟು ನೀರು (National Highway) ರಸ್ತೆಯಲ್ಲಿಯೇ ನಿಂತಿದ್ದರಿಂದ ಭರಮಸಾಗರ ಮತ್ತು ದಾವಣಗೆರೆ ಕಡೆಗೆ ಹೋಗುವ ಜನರ ಗೋಳು ಹೇಳ ತೀರದ್ದಾಗಿತ್ತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252