Chitradurga News | Nammajana.com 07-08-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ(National Highway Project) ಲೋಕಸಭಾ ಕ್ಷೇತ್ರದಲ್ಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅನು ಷ್ಠಾನಕ್ಕೆ ಸಲ್ಲಿಸಲಾಗಿರುವ ಪ್ರಸ್ಥಾವನೆಗಳಿಗೆ ತ್ವರಿತ ಅನುಮೋದನೆನೀಡುವಂತೆ ಸಂಸದ ಗೋವಿಂದ ಎಂ.ಕಾರಜೋಳ ಅವರು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ವಸತಿ ಶಾಲೆಗಳಿಗೆ AC ಮಹಬೂಬ್ ಜಿಲಾನಿ ಖುರೇಶಿ ಭೇಟಿ, ಪರಿಶೀಲನೆ
ಲೋಕಸಭೆ ನಡೆಯುತ್ತಿರುವುದರ ಅಧಿವೇಶನ ನಡುವೆಯೇ ಬುಧವಾರ ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿ ಮಾಡಿದ ಸಂಸದ ಗೋವಿಂದ ಕಾರಜೋಳ ಪ್ರಸ್ತಾವನೆಗಳಿಗೆ ತುರ್ತು ಅನುಮೋದನೆಯ ಅಗತ್ಯತೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೇವರ್ಗಿ-ಚಾಮರಾಜನಗರರಾಷ್ಟ್ರೀಯ ಹೆದ್ದಾರಿ- 150ಎ ಚಳ್ಳಕೆರೆ ನಗರದ ಒಳಭಾಗದಲ್ಲಿ ಹಾದುಹೋಗುತ್ತಿದೆ. ಚಳ್ಳಕೆರೆಪಟ್ಟಣದವ್ಯಾಪ್ತಿಯಲ್ಲಿಸುಮಾರು 9 ಕಿಮೀ ಹೆದ್ದಾರಿಯನ್ನು ಒನ್ ಟೈಮ್ ಹೆದ್ದಾರಿ-48 ಹೆದ್ದಾರಿಗಳು ಇಮೂಪ್‌ವ್‌ಮೆಂಟ್ ಯೋಜನೆಯಡಿ ಅಭಿವೃದ್ಧಿಪಡಿಸಬೇಕು.
ರಾಷ್ಟ್ರೀಯ ಹಾಗೂ 150-2 ಹಿರಿಯೂರು(National Highway Project) ನಗರದ ಹೊರಭಾಗದಲ್ಲಿ ಛೇಧಿಸುತ್ತಿದ್ದು, ಇಲ್ಲಿ ಕ್ಲೋವರ್‌ಲೀಫ್ ಜಂಕ್ಷನ್ ನಿರ್ಮಾಣ ಮಾಡುವಂತೆ ವಿನಂತಿಸಿದರು.
ಇದನ್ನೂ ಓದಿ: CHITRADURGA ಜಿಲ್ಲೆಯಲ್ಲಿ 31 ಮಿ.ಮೀ ಮಳೆ | 18 ಮನೆ ಹಾನಿ | ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?
ಮೊಳಕಾಲ್ಲೂರು ಪಟ್ಟಣದ ಹೊರಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡುವುದು, ಭಾರತ್ ಮಾಲಾ ಪರಿಯೋಜನೆಯಡಿ ನಿರ್ಮಾಣ ವಾಗುತ್ತಿರುವ ಚಳ್ಳಕೆರೆ- ಹಿರಿಯೂರು ಮಧ್ಯದ ಹೆದ್ದಾರಿಯಲ್ಲಿ ಉದ್ಭವಿಸಿರುವ ಹಲವಾರು ಗ್ರಾಮಗಳಸಮಸ್ಯೆ ಪರಿಹರಿಸ ಬೇಕು. ರಾಷ್ಟ್ರೀಯ ಹೆದ್ದಾರಿ-58ರಲ್ಲಿ ಶಿರಾ ತಾಲೂಕು ಚಿಕ್ಕನಹಳ್ಳಿ ಗ್ರಾಮದ ಬಳಿ ನಿರ್ಮಾಣವಾಗಿರುವ ಕೆಳ ಸೇತುವೆಯ ಅವೈಜ್ಞಾನಿಕತೆ ಸರಿಪಡಿಸಬೇಕು,
ಹಿರಿಯೂರು ತಾಲೂಕು ಪಟ್ರೆ ಹಳ್ಳಿ ಬಳಿ ಕೆಳಸೇತುವೆ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು. ಶಿರಾ ಪಟ್ಟಣದಲ್ಲಿ ಬಾಕಿ ಉಳಿದಿರುವ3.90 ಕಿಮೀ ಸರ್ವೀಸ್ ರಸ್ತೆಯನ್ನು ಪೂರ್ಣಗೊಳಿಸುವುದು, ರಾಷ್ಟ್ರೀಯ ಹೆದ್ದಾರಿ-173 ನ್ನು ಹೊಳಲ್ಕೆರೆ ಪಟ್ಟಣದಿಂದ ದಾವಣಗೆರೆ ತಾಲೂಕು ಆನಗೋಡು ಬಳಿ ರಾಷ್ಟ್ರೀಯಹೆದ್ದಾರಿ-48 ರವರೆಗೆ ವಿಸ್ತರಿಸುವಂತೆ ಕೇಂದ್ರ ಸಚಿವರಿಗೆ ಸಲ್ಲಿಸಲಾದ ಕೋರಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಅನುಮೋದನೆ ಕೋರಿರುವ ಹೆದ್ದಾರಿಗಳ ವಿವರ ಮತ್ತು ಮನವಿ:
- ಜೇವರ್ಗಿ-ಚಾಮರಾಜನಗರರಾಷ್ಟ್ರೀಯ(National Highway Project) ಹೆದ್ದಾರಿ- 150ಎ.
- ರಾಷ್ಟ್ರೀಯ ಹಾಗೂ 150-2 ಹಿರಿಯೂರು ನಗರದಹೊರಭಾಗ. ಮೊಳಕಾಲ್ಲೂರು ಪಟ್ಟಣದ ಹೊರಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣ.
- ಚಳ್ಳಕೆರೆ- ಹಿರಿಯೂರು ಮಧ್ಯದ ಹೆದ್ದಾರಿಯಲ್ಲಿ ಉದ್ಭವಿಸಿರುವ ಹಲವಾರು ಗ್ರಾಮಗಳ ಸಮಸ್ಯೆ ನಿವಾರಣೆಗೆ ಕ್ರಮ.
- ಹಿರಿಯೂರು ತಾಲೂಕು ಪಟ್ರೆ ಹಳ್ಳಿ ಬಳಿ ಕೆಳಸೇತುವೆ
- ರಾಷ್ಟ್ರೀಯ ಹೆದ್ದಾರಿ-173 ನ್ನು ಹೊಳಲ್ಕೆರೆ ಪಟ್ಟಣದಿಂದ ದಾವಣಗೆರೆ ತಾಲೂಕು ಆನಗೋಡು ಬಳಿ ರಾಷ್ಟ್ರೀಯ ಹೆದ್ದಾರಿ-48 ರವರೆಗೆ ವಿಸ್ತರಣೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252