Chitradurga news|nammajana.com|11-8-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಾಯಕನಹಟ್ಟಿ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೆಳಿಗ್ಗೆ 11:30 ಕ್ಕೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾಭಿಮಾನದ (Nayakanahatti) ಮೃತ್ಯು ಕಂಡಂತಹ “ಹಲಗಲಿ ಬೇಡರ” ಪರಾಕ್ರಮ ಮತ್ತು ರಾಷ್ಟ್ರ ಪ್ರೇಮದ ಕುರಿತು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲಗಲಿ ಬೇಡರ ಕೊಡುಗೆ” ಎಂಬ ವಿಚಾರ ಸಂಕಿರಣವನ್ನು ನಾಯಕನಹಟ್ಟಿ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಕಟ್ಟಡದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಟೇಲ್ ಜಿ.ತಿಪ್ಪೇಸ್ವಾಮಿ (ಎತ್ನಟ್ಟಿ ಗೌಡ್ರು) ತಿಳಿಸಿದ್ದಾರೆ.
ಇದನ್ನೂ ಓದಿ: VV Sagara water level Today: ವಿ.ವಿ.ಸಾಗರದ ಇಂದಿನ ನೀರಿನ ಮಟ್ಟ |11-8-2023

ಈ ಕಾರ್ಯಕ್ರಮ ಅಂಗವಾಗಿ ಪೂರ್ವಭಾವಿ ಸಭೆಯನ್ನು ಆಗಸ್ಟ್ 12 ಸೋಮವಾರದಂದು ಬೆಳಗ್ಗೆ 11 ಗಂಟೆಗೆ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಕಟ್ಟಡದಲ್ಲಿ ಕರೆಯಲಾಗಿದ್ದು ತಾಲೂಕಿನಲ್ಲಿರುವಂತ ರಾಷ್ಟ್ರ ಪ್ರೇಮಿಗಳು, ಸಮಾಜದ (Nayakanahatti) ಮುಖಂಡರು, ಯುವಕರು, ಮತ್ತು ವಿವಿಧ ಸಂಘಟನೆಗಳ ಮುಖಂಡರು ಆಗಮಿಸಿ ಕಾರ್ಯಕ್ರಮಕ್ಕೆ ಅಮೂಲ್ಯವಾದ ಸಲಹೆ ಮತ್ತು ಸಹಕಾರ ನೀಡಬೇಕಾಗಿ ಕೋರತ್ತಿದ್ದೇನೆ.
ಇದನ್ನೂ ಓದಿ: ಸ್ವಾತಂತ್ರ್ಯಹೋರಾಟಗಾರ ಭೀಮಪ್ಪಗೆ ಸನ್ಮಾನ | Freedom Fighter
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252