Chitradurga news|nammajana.com|24-11-2024
ನಮ್ಮಜನ.ಕಾಂ, ನಾಯಕನಹಟ್ಟಿ: ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಿರ್ಮಿಸಿದ ದೊಡ್ಡ ಕೆರೆ ತುಂಬಿ ಕೋಡಿ ಹರಿಯುತ್ತಿದೆ. (Nayakanahatti) ಸುಮಾರು 350 ವರ್ಷಗಳ ಹಿಂದೆ ನಿರ್ಮಿಸಿದ ದೊಡ್ಡಕೆರೆ ತುಂಬಿರುವುದರಿಂದ ಕೆರೆಗೆ ಜೀವಕಳೆ ಬಂದಿದೆ.
16 ಅಡಿ ಆಳವಿರುವ ಕೆರೆಯಲ್ಲಿ ಮಳೆಗಾಲದಲ್ಲಿನ ಉತ್ತಮ ಮಳೆಯಿಂದಾಗಿ 14 ಅಡಿ ನೀರು ಹರಿದಿತ್ತು. ನಂತರ ಕೆರೆ ಮೇಲ್ಬಾಗದಲ್ಲಿ ಉತ್ತಮ ಮಳೆಯಿಂದಾಗಿ ಚೌಗು ನೀರು(ಬಸಿ ನೀರು)ಇನ್ನೂ ಹರಿಯುತ್ತಿದೆ.

ಎರಡು ಹಳ್ಳಗಳು ಸಣ್ಣ ಪ್ರಮಾಣದಲ್ಲಿ ಮಳೆಗಾಲ ನಂತರ ನಿರಂತರವಾಗಿ ಹರಿಯುತ್ತಿವೆ. ಸತತ ಒಂದು ತಿಂಗಳಿಂದ ಹರಿಯುತ್ತಿರುವ ಬಸಿ ನೀರಿನಿಂದ ಎರಡು ಅಡಿ ನೀರು ಕೆರೆಗೆ ಹರಿದಿದೆ. ಕೆರೆ ತುಂಬುವ ಸಂದರ್ಭದಲ್ಲಿ ವಿಸ್ತಾರ ಹೆಚ್ಚಾಗುತ್ತದೆ.
ಕೋಡಿ ಹರಿಯಲು ಹೆಚ್ಚಿನ ನೀರಿನ ಅವಶ್ಯಕತೆ ಇದೆ. ದೊಡ್ಡ ಪ್ರಮಾಣದಲ್ಲಿ ಹರಿಯುತ್ತಿರುವ ಬಸಿ ನೀರಿನಿಂದ ದೊಡ್ಡ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಮಳೆಗಾಲ ನಂತರ ಇದೀಗ ಕೆರೆ ತುಂಬಿ ಕೋಡಿ ಹರಿಯುತ್ತಿದೆ.
25 ವರ್ಷಗಳ ಹಿಂದೆ ಎರಡು ಕೆರೆ ಭರ್ತಿ
ತಿಪ್ಪೇರುದ್ರಸ್ವಾಮಿಗಳು ನಿರ್ಮಿಸಿದ ಚಿಕ್ಕ ಕೆರೆ ಮತ್ತು ದೊಡ್ಡ ಕೆರೆ ಒಂದೇ ವರ್ಷ ತುಂಬುವುದು ಅತ್ಯಂತ ಅಪರೂಪದ (Nayakanahatti) ಘಟನೆಗಳಾಗಿವೆ. 25 ವರ್ಷಗಳ ಹಿಂದೆ 1999ರ ಅಕ್ಟೋಬರ್ ತಿಂಗಳಲ್ಲಿ ಎರಡೂ ಕೆರೆಗಳು ತುಂಬಿದ್ದವು. ಈ ವರ್ಷ ಎರಡೂ ಕೆರೆಗಳು ತುಂಬಿರುವುದು ರೈತರಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ. ಜನ, ಜಾನುವಾರುಗಳಿಗೆ ಆಸರೆಯಾಗಿರುವ ಎರಡೂ ಕೆರೆಗಳ ಒಡಲು ನೀರಿಗಾಗಿ ಬೋರ್ ಕೊರೆಯಿಸುವ ಸಮಸ್ಯೆಯಿಂದ ತುಂಬಿರುವುದರಿಂದ ಅಂತರ್ಜಲ ಹೆಚ್ಚಳಗೊಂಡಿದೆ. ರೈತರು ಪಾರಾಗಿದ್ದಾರೆ.
ಇದನ್ನೂ ಓದಿ: ಅಂತಾರಾಜ್ಯ ಗಾಂಜಾ ಪೆಡ್ಲರ್ ಬಂಧನ | Ganja peddler
ತೆಪ್ಪೋತ್ಸವ ಡೌಟ್
ಕೆರೆ ಕೋಡಿ ಬಿದ್ದಾಗ ತೆಪ್ಪೋತ್ಸವ ಜರುಗುವುದು ಇಲ್ಲಿನ ವಾಡಿಕೆ. 20 ಅಡಿ ಉದ್ದಗಲದ, ಹತ್ತು ಅಡಿ ಎತ್ತರದ ಮರದಿಂದ ನಿರ್ಮಿಸಿದ ತೆಪ್ಪವನ್ನು 1.5 ಕಿ.ಮೀ ದೂರ ಕೆರೆಯ ನೀರಿನಲ್ಲಿ ಚಲಾಯಿಸಲಾಗುವುದು.
50 ರಿಂದ 100 ಜನರಿರುವ ಈ ತೆಪ್ಪ ಸರಾಗವಾಗಿ ನೀರಿನಲ್ಲಿ ಚಲಿಸುವುದು ವಿಸ್ಮಯಕಾರಿ. 2010 ಡಿಸೆಂಬರ್ 16ರಂದು (Nayakanahatti) ತೆಪ್ಪೋತ್ಸವ ಜರುಗಿತ್ತು. 12 ವರ್ಷಗಳ ನಂತರ 2022, ಡಿ.20 ರಂದು ತೆಪ್ಪೋತ್ಸವ ಜರುಗಿತು. ಇದೀಗ ಚಿಕ್ಕಕೆರೆ ಮತ್ತು ದೊಡ್ಡ ಕೆರೆಗಳು ತುಂಬಿವೆ. ಆದರೆ ತೆಪ್ಪೋತ್ಸವ ಆಯೋಜನೆಗೆ ಸ್ಥಳೀಯ ಸಮಿತಿ ಮುಂದಾಗಿಲ್ಲ.
ಇದನ್ನೂ ಓದಿ: ಕಾರು ಅಪಘಾತ | ಡಾಕ್ಟರ್ ತಿಮ್ಮೇಗೌಡ ಸಾವು | Car accident
ತೆಪ್ಪೋತ್ಸವಕ್ಕೆ ಭಾರೀ ಪ್ರಮಾಣದ ಸಿದ್ಧತೆಗಳು ಅವಶ್ಯಕ. ಈ ಬಾರಿ ತೆಪ್ಪೋತ್ಸವದ ಬದಲಾಗಿ ಡಿ.5ರಂದು ತಿಪ್ಪೇರುದ್ರಸ್ವಾಮಿ ದೇವಾಲಯ ಸಮಿತಿ ಮತ್ತು ಜನಪ್ರತಿನಿಧಿಗಳು ಕೆರೆಗೆ ಬಾಗಿನ ಪೂಜೆ ಏರ್ಪಡಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252