Chitradurga news|nammajana.com|18-10-2024
ನಮ್ಮಜನ.ಕಾಂ, ಚಿತ್ರದುರ್ಗ: ಸಾಮರಸ್ಯ ಮತ್ತು ಭಾವೈಕ್ಯದ ನೆಲೆ ನೀಡು ನಾಯಕನಹಟ್ಟಿ ಗ್ರಾಮ ವಾಲ್ಮೀಕಿ ಮಹರ್ಷಿಗಳ ಶ್ರೀ ರಾಮಾಯಣ ಮಹಾ ಕಾವ್ಯದ ರಾಮಚಂದ್ರ ಮೂರ್ತಿಯ (Nayakanahatti) ಆದರ್ಶಗಳು ಈ ಪಟ್ಟಣದಲ್ಲಿ ನೆಲೆಗೊಂಡಿದೆ ಎಂದು ನಿವೃತ್ತ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಅವರು ನಾಯಕನಹಟ್ಟಿ ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಡೀ ದಕ್ಷಿಣ ಭಾರತದಲ್ಲಿ ಇಂತಹ ಸಹ ಬಾಳ್ವೆ ಬೆಸೆದಿರುವಂತಹ ಗ್ರಾಮವನ್ನು ಕಾಣಲು ಸಾಧ್ಯವಿಲ್ಲ ಇತ್ತೀಚಿನ ದಿನಗಳಲ್ಲಿ ಜಯಂತಿಗಳನ್ನು ಆಯಾ ಜನಾಂಗದವರೇ ಸೇರಿ ಆಚರಿಸುವ ಪರಿಪಾಠವಾಗಿದೆ ಅದಕ್ಕೆ ವಿಭಿನ್ನವೆಂಬಂತೆ ಇಂದು ಈ ಪಟ್ಟಣದ ಎಲ್ಲ ಜನಾಂಗದನಾಗರಿಕರು ಸೇರಿ ವಾಲ್ಮೀಕಿ ಮಹರ್ಷಿಯ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿದೆ.
ಜಗತ್ತಿನ ಅಂದಾಜು 800 ಕೋಟಿ ಜನಸಂಖ್ಯೆಯಲ್ಲಿ 500 ಕೋಟಿಗೊ ಮಿಕ್ಕಿದ ವಿವಿಧ ಧರ್ಮದವರು ಮಹರ್ಷಿ ವಾಲ್ಮೀಕಿ ಅವರ ಶ್ರೀ ರಾಮಾಯಣ ಮಹಾಕಾವ್ಯವನ್ನು ಪಾರಾಯಣ ಮಾಡುತ್ತಾರೆ ಬದುಕಿಗೆ ಶ್ರೀ ರಾಮಾಯಣ ಮಹಾಕಾವ್ಯವು ಜೀವಾಮೃತವಿದ್ದಂತೆ ಈ ಮಹಾಕಾವ್ಯದಲ್ಲಿ ಬರುವಂತಹ ಶ್ರೀರಾಮಚಂದ್ರ ಮೂರ್ತಿ ಸೀತಾ ಮಾತೆ ಭರತ ಶತ್ರುಘ್ನ ಮತ್ತು ಹನುಮಂತನ ಆದರ್ಶಗಳು ಇಡೀ ಮನುಕುಲಕ್ಕೆ ಜೀವೋತ್ಕರ್ಷ ನೀಡುತ್ತವೆ ಹಿಂದುಸ್ಥಾನದ ಬಹುತೇಕ ನಾಗರಿಕರುಗಳ ಮನೆ ಮತ್ತು ಮನಗಳಲ್ಲಿ ಶ್ರೀರಾಮರ ಮತ್ತು ಹನುಮಂತನ ಭಾವಚಿತ್ರಗಳಿವೆ.
ಮನುಷ್ಯನಿಂದ ದೈವತ್ವದ ಕಡೆಗೆ ಏರುವ ಶ್ರೀ ರಾಮನ ವ್ಯಕ್ತಿತ್ವ ಅನನ್ಯವಾದದ್ದು ಹಾಗಾಗಿ ಮಹಾಭಾರತದ ಕಾವ್ಯ ಕಿಂತ ಶ್ರೀ ರಾಮಾಯಣ ಮಹಾಕಾವ್ಯವು ಅದ್ಭುತವಾದದ್ದು ಮುಂದಿನ ಸಾವಿರಾರು ತಲೆಮಾರಿಗೂ ಶ್ರೀ ರಾಮಾಯಣ ಮಹಾ ಕಾವ್ಯದ ಮೌಲ್ಯಗಳು ಹಾಗೆ ಉಳಿದು ವೃದ್ಧಿಯಾಗುತ್ತ ಹೋಗುತ್ತವೆ ಅಹಿಂಸೆ ಮತ್ತು ಮಾನವೀಯ ಮೌಲ್ಯಗಳಿಗೆ (Nayakanahatti) ಪ್ರತಿರೂಪವಾಗಿರುವ ಈ ಮಹಾ ಕಾವ್ಯ ಇಂದಿನ ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು
ಇನ್ನೊಬ್ಬ ಮುಖ್ಯ ಅತಿಥಿಗಳಾಗಿದ್ದ ಬಂಡೆಕೊಪ್ಪಲು ಓಬಣ್ಣ ಮಾತನಾಡಿ ಎಲ್ಲರ ಸಹಕಾರದಿಂದ ಒಂದು ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನಕ್ಕೆ ಹಿಂದಿನ ಮಂತ್ರಿಗಳಾದ ಶ್ರೀರಾಮುಲು ಆದಿಯಾಗಿ ಈಗಿನ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ಅನುದಾನ ಒದಗಿಸಿದ್ದಾರೆ ಹಾಗಾಗಿ ಅವರಿಗೆ ಸಮಾಜದ ವತಿಯಿಂದ ಅಭಿನಂದನೆ ಸಲ್ಲಿಸೋಣ ಎಂದರು.
ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷರಾದ ಪಟೇಲ್ ತಿಪ್ಪೇಸ್ವಾಮಿ ಮಾತನಾಡಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿ ತಿಮ್ಮಪ್ಪ ನಾಯಕ ಸಂಘ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದೆ ಎಲ್ಲ ನಾಗರಿಕರು ತನು ಮನ ಮತ್ತು ಧನವನ್ನು ಅರ್ಪಿಸಿದ್ದಾರೆ ಯಾವುದೇ ಅವಘಡ ಗಳಿಗೆ (Nayakanahatti) ಎಡೆ ಮಾಡಿಕೊಡದೆ ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲ ನಾಗರಿಕರಿಗೂ ಮತ್ತು ಅಧಿಕಾರಿಗಳಿಗೂ ಅಭಿನಂದನೆಯನ್ನು ಸಲ್ಲಿಸಿದರು.
ಇದನ್ನೂ ಓದಿ: ವಿಲಾಸ ಸಾಗರ ನೀರಿನ ಮಟ್ಟ ಭಾರೀ ಹೆಚ್ಚಳ | ಒಂದೇ ದಿನ ಹರಿದು ಬಂದ ನೀರು ಎಷ್ಟು ಕ್ಯೂಸೆಕ್ಸ್ | Vani Vilasa Sagara Dam
ಪಟ್ಟಣ ಪಂಚಾಯಿತಿಯ ಸದಸ್ಯ ಅನ್ವರ್ ಮಾತನಾಡಿದರು
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದಂತ ಶ್ರೀಮತಿ ಶ್ರೀಕಾಂತ್ ಮತ್ತು ಎಲ್ಲಾ ಪಟ್ಟಣ ಪಂಚಾಯತಿ ಸದಸ್ಯರು ಹಟ್ಟಿ ಮಲ್ಲಪ್ಪ ನಾಯಕ ಸಂಘದ ಎಲ್ಲ ಸದಸ್ಯರು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಆರಕ್ಷಕರು ನಿರೀಕ್ಷಕ ಶಿವಕುಮಾರ್ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಮುದಿಯಪ್ಪ ಮುಂತಾದವರು ಉಪಸ್ಥಿತರಿದ್ದರು ವಿವಿಧ ವೃತ್ತಿಗಳಲ್ಲಿ ಸಾಧನೆಗೈದ ನಾಗರಿಕರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು