Chitradurga news | nammajana.com | 25-5-2024
ನಮ್ಮಜನ.ಕಾಂ, ಚಳ್ಳಕೆರೆ: ರಾಜ್ಯದ ಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾದ ಜಿಲ್ಲೆಯ ಬುಡಕಟ್ಟು ಆರಾಧ್ಯದೈವ ನಾಯಕನಹಟ್ಟಿ (Nayakanahatty) ಶ್ರೀ ಗುರುತಿಪ್ಪೇರುದ್ರಸ್ವಾಮಿಯ ರಥೋತ್ಸವ ಮಾರ್ಚ್ 26ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತ್ತು.
ಶ್ರೀನಾಯಕನಹಟ್ಟಿ (Nayakanahatty) ತಿಪ್ಪೇಸ್ವಾಮಿ ಜಾತ್ರೆಯ ನಂತರ ದೇವಸ್ಥಾನ ಹುಂಡಿ ಹಣ ಏಣಿಕೆ ಕಾರ್ಯವನ್ನು ದೇವಸ್ಥಾನದ ಆಡಳಿತಾಧಿಕಾರಿ ಗಂಗಾಧರ, ತಹಶೀಲ್ದಾರ್ ರೇಹಾನ್‌ಪಾಷ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ನಡೆಯಿತು.
ಶುಕ್ರವಾರ ನಡೆದ ಹಣ ಏಣಿಕೆ ಕಾರ್ಯ ಬೆಳಗಿನಿಂದ ಸಂಜೆವರೆಗೂ ನಿರಂತರವಾಗಿ ನಡೆದಿದ್ದು, ಈ ಬಾರಿ ನಿರೀಕ್ಷೆಗೂ ಮೀರಿ ಹೆಚ್ಚಿನ ಕಾಣಿಕೆಯನ್ನು ಭಕ್ತರು ಶ್ರೀಸ್ವಾಮಿಯ (Nayakanahatty) ಹುಂಡಿಗೆ ಹಾಕುವ ಮೂಲಕ ತಮ್ಮ ಭಕ್ತಿಯನ್ನು ಮೆರೆದಿದ್ಧಾರೆ.
ನಾಯಕನಹಟ್ಟಿ (Nayakanahatty) ದೇವಸ್ಥಾನ ಹುಂಡಿ ಹಣದ ಏಣಿಕೆ ಮಾಹಿತಿ ಇಲ್ಲಿದೆ
- ಹೊರಮಠದ ಹುಂಡಿ ಕಾಣಿಕೆ-19.53.575
- ಒಳಮಠದ ಹುಂಡಿ ಕಾಣಿಕೆ-51.87.750
- ಎರಡು ದೇವಸ್ಥಾನದ ಒಟ್ಟು ಹಣ-71.41.325
ಇದನ್ನೂ ಓದಿ: BESCOM: ಬೆಸ್ಕಾಂ ಕಚೇರಿ ಸ್ಥಳಾಂತರ | ವಿದ್ಯುತ್ ಬಿಲ್ ಕಟ್ಟೋರು ಇಲ್ಲಿಗೆ ಬನ್ನಿ
ಇಷ್ಟು ಹಣ (Nayakanahatty) ಸಂಗ್ರಹವಾಗುವ ಜೊತೆಯಲ್ಲಿ ಸಾಕಷ್ಟು ಬೆಳ್ಳಿ, ಬಂಗಾರದ ವಸ್ತುಗಳನ್ನು ಸಹ ಸಂಗ್ರಹವಾಗಿವೆ ಎಂದು ಮಾಹಿತಿ ನೀಡಿದ್ದಾರೆ.