Chitradurga News | Nammajana. Com | 27-4-2024
ನಮ್ಮಜನ.ಕಾಂ.ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ನಡೆದ ಮತದಾನದಲ್ಲಿ ಅನೇಕ ವೈವಿಧ್ಯತೆಗಳನ್ನು ನಾವು ಕಾಣಬಹುದಾಗಿದೆ. ಸರ್ಕಾರ ಮತದಾನ ಮಾಡಬೇಕೆಂಬ ಉದ್ದೇಶದಿಂದ ಅಧಿಕೃತ ಸರ್ಕಾರಿ ರಜೆಯನ್ನು ಘೋಷಿಸಿದರು ಕೆಲವೊಮ್ಮೆ ಮತದಾನ ಮಾಡದೆ ದೂರವಿರುವವರ ಸಂಖ್ಯೆ ಹೆಚ್ಚು. ಇನ್ನೂ ಕೆಲವರು ಪ್ರಜಾಪ್ರಭುತ್ವದ ಮಹತ್ವವನ್ನು ಅರಿತಿದ್ದರೂ ಮತದಾನ ಮಾಡದೆ ನಿರ್ಲಕ್ಷ್ಯ ವಹಿಸಿ ರಜಾದ ಮಜಾ ಮಾಡುವುದು ಸಾಮಾನ್ಯವಾಗಿದೆ.
ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ಮತಗಟ್ಟೆ ಸಂಖ್ಯೆ ೭೮ರಲ್ಲಿ ಮತದಾನದ ದಿನದಂದೇ ಮದುವೆಯಾದ ನವಜೋಡಿಯೊಂದು ವಿವಾಹ ಕಾರ್ಯದ ಜೊತೆಯಲ್ಲೇ ಮತದಾನ ಮಾಡುವ ಮೂಲಕ ಮತದಾನ ಮೌಲ್ಯವನ್ನು ಹೆಚ್ಚಿಸಿದ್ಧಾರೆ.

ಇದನ್ನೂ ಓದಿ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.72.74 ಮತದಾನ |ಯಾವ ಕ್ಷೇತ್ರದಲ್ಲಿ ಎಷ್ಟು ಪರ್ಸೇಂಟ್ ?
ಅಶೋಕ ಸ್ಪೋರ್ಟ್ ಕ್ಲಬ್ ಸಂಸ್ಥಾಪಕ ನಾರಾಯಣಮೋಹಿತೆಯವರ ಪುತ್ರ, ದೈಹಿಕಶಿಕ್ಷಕ ಅಶೋಕ್‌ಮೋಹಿತೆ ಮತದಾನ ದಿನದಂದೇ ಮದುವೆಯಾಗಿ ಮದುವೆ ಶಾಸ್ತç ಮುಗಿಸಿಕೊಂಡು ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ಮತಚಲಾಯಿಸುವ ಮೂಲಕ ತನ್ನ ಮತದಾನದ ಮಹತ್ವವನ್ನು ಸಾರಿದ್ಧಾನೆ. ಪತ್ನಿ ಸುಶ್ಮಿತಳೊಂದಿಗೆ ಆಗಮಿಸಿ ಮತಚಲಾಯಿಸಿದ್ಧಾನೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252