Chitradurga News | Nammajana.com | 22-08-2025
ನಮ್ಮಜನ ನ್ಯೂಸ್ ಕಾಂ,ಭರಮಸಾಗರ: ಚಿತ್ರದುರ್ಗದಲ್ಲಿ (Newborn baby) ವಿದ್ಯಾರ್ಥಿನಿಯೊಬ್ಬಳ ಬರ್ಬರ ಹತ್ಯೆ ನಡೆದು ಎರಡು ದಿನ ಕಳೆಯುವದರೊಳಗೆ ರಾಷ್ಟ್ರೀಯ ಹೆದ್ದಾರಿ 48ರ ಸೀಬಾರ ಬಳಿ ಗುರುವಾರ ನವಜಾತ ಹೆಣ್ಣುಶಿಶು ಪತ್ತೆಯಾಗಿದೆ.
ಇದನ್ನೂ ಓದಿ: ಚಿತ್ರದುರ್ಗ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ

ರಸ್ತೆ ಬದಿ ಶಿಶುವನ್ನು ಗಮನಿಸಿದ ದನಗಾಹಿಗಳು, ದಾರಿಹೋಕರಿಗೆ ತಿಳಿಸಿದ್ದಾರೆ. ಮಾಳಪ್ಪನಹಟ್ಟಿಯ ಆಟೋ ಚಾಲಕ ಶಿವಮೂರ್ತಿ ಎಂಬುವವರು ರಸ್ತೆಯಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಸಹಾಯದಿಂದ ಮಗುವನ್ನು ರಕ್ಷಿಸಿದರು.
ಮಹಿಳೆ ನೀಡಿದ ವೇಲ್‌ನಿಂದ ಮಗುವಿನ ಮೇಲಿದ್ದ ಧೂಳನ್ನು ಸ್ವಚ್ಛಗೊಳಿಸಿ ಆಟೋದಲ್ಲಿ ಇರಿಸಿದ್ದಾರೆ. ಬಳಿಕ ಪೊಲೀಸ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಈ ವೇಳೆ ಚಿತ್ರದುರ್ಗ ನಗರದತ್ತ ಹೋಗುವವರು ಮತ್ತು ಈ ಕಡೆ ಬರುತ್ತಿದ್ದ ನೂರಾರು ಜನರು ಮಗುಗುಂದ ಆಟೋವನ್ನು ಸುತ್ತುವರೆದು ಮಗುವಿನ ಹೆತ್ತವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅದಷ್ಟವಶಾತ್ ನಂಗು ದಾರಿಹೋಕರ ಗಮನಕ್ಕೆ ಬಂದು ಸಂರಕ್ಷಿ ಸಲ್ಪಟ್ಟಿದೆ. ಇಲ್ಲದೇ ಹೋಗಿದ್ದರೆ ನಾಯಿ ಇತರೆ ಪ್ರಾಣಿಗಳ ಪಾಲಾಗಿ ಮಗುವೊ ಂದು ದುರಂತ ಸಾವಿಗೆ ಗುರಿಯಾಗು ತ್ತಿತ್ತು. ಪೊಲೀಸರು ಹೆತ್ತವರನ್ನು ಪತ್ತೆ ಮಾಡಿ ಈಗ ತಾನೇ ಜಗತ್ತು ಕಾಣುತ್ತಿರುವ ಮಗುವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಆಟೋ ಚಾಲಕನಿಂದ ಮಗು ರಕ್ಷಣೆ
ಚಿತ್ರದುರ್ಗ ಬೈಪಾಸ್ ಮಾರ್ಗದಲ್ಲಿ ದಾವಣಗೆರೆಗೆ ಹೋಗುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಶಿಶುವನ್ನು ತಮ್ಮ ಸ್ವಂತ ವಾಹನದಲ್ಲಿ ಆಸತ್ರೆಗೆ ಕರೆದೊಯ್ದರು. ಒಂದು ದಿನದ ನವಜಾತ ಹೆಣ್ಣು ಶಿಶುವನ್ನು ರಕ್ಷಣೆ ಮಾಡಿ, ಜಿಲ್ಲಾ ಆಸ್ಪತ್ರೆಯ ಎಸ್‌ಎನ್‌ಸಿಯು ಘಟಕಕ್ಕೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಸೌಲಭ್ಯಗಳಿಂದ ವಂಚಿತವಾದ ಸರ್ಕಾರಿ ಶಾಲೆ | ಮಕ್ಕಳಿಗೆ ಬಯಲಿನಲ್ಲೇ ಪಾಠ
ಎರಡೂವರೆ ಕೆಜಿ ತೂಕ ಇರುವ ಮಗು ಸದ್ಯಕ್ಕೆ ಆರೋಗ್ಯವಾಗಿದ್ದು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಗಿದೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ(Newborn baby) ದೂರು ದಾಖಲಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
